Advertisement

ಯಕ್ಷಗಾನ ಕಲಾರಂಗ ಉಡುಪಿ: ವಿದ್ಯಾಪೋಷಕ್ ಎರಡು ಮನೆಗಳ ಹಸ್ತಾಂತರ

06:35 PM May 23, 2022 | Team Udayavani |

ಉಡುಪಿ : ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಿಗೆ ಒಟ್ಟು ಐದು ಮನೆಗಳನ್ನು ನಿರ್ಮಿಸಿಕೊಡುತ್ತಿರುವ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಪ್ರಾಯೋಜಕತ್ವದ ಎರಡು ಮನೆಗಳ ಉದ್ಘಾಟನೆ ಮೇ 23 ರಂದು ನೆರವೇರಿತು.

Advertisement

ಗಂಗೊಳ್ಳಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸ್ವಾತಿ ಖಾರ್ವಿ ಮತ್ತು ವಡ್ಡರ್ಸೆಯ ದ್ವಿತೀಯ ಬಿ.ಕಾಂ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಚೈತ್ರಾ ಮತ್ತು ರಕ್ಷಿತಾ ವಿದ್ಯಾಪೋಷಕ್ ಮನೆಗಳ ಫಲಾನುಭವಿಳಾಗಿದ್ದಾರೆ.

ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ನಿರ್ಮಿಸಿ ಕೊಟ್ಟ ಮನೆಗಳ ಪೈಕಿ ಗಂಗೊಳ್ಳಿಯ ಮನೆಯನ್ನು ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿ ಶುಭ ಕೋರಿದರು. ವಿದ್ಯಾಪೋಷಕ್‍ನ ಅತ್ಯಂತ ಹೆಚ್ಚಿನ ಫಲಾನುಭವಿ ವಿದ್ಯಾರ್ಥಿಗಳು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ ಎಂದು ತಿಳಿದು ಸಂತೋಷವಾಯಿತು, ಸಂಸ್ಥೆಯ ಚಟುವಟಿಕೆಗಳಿಗೆ ಸದಾ ತನ್ನ ಬೆಂಬಲವಿದೆ ಎಂದರು. ಸರಸ್ವತಿ ವಿದ್ಯಾಲಯದ ಸಂಚಾಲಕ ರೊ. ಗಣೇಶ್ ಕಾಮತ್ ಉಪಸ್ಥಿತರಿದ್ದು, ಸಂಸ್ಥೆಯ ಚಟುವಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ದೇವರು ಮೆಚ್ಚುವ ಕೆಲಸ

ವಡ್ಡರ್ಸೆಯ ಮನೆಯ ಉದ್ಘಾಟನೆ ಸಂದರ್ಭದಲ್ಲಿ ಅಭ್ಯಾಗತರಾಗಿ ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕರಾದ ಶ್ರೀ ಎಚ್. ಶ್ರೀಧರ ಹಂದೆ ಉಪಸ್ಥಿತರಿದ್ದು ಇದು ನಿಜಾರ್ಥದಲ್ಲಿ ಯಕ್ಷಗಾನ ಕಲಾರಂಗ ಮಾಡುವ ಕೆಲಸ ದೇವರು ಮೆಚ್ಚುವ ಕೆಲಸ, ಬಡವರ ಕಣ್ಣೀರೊರೆಸುವ ಇಂಥಹ ಮಹಾಯಜ್ಞ ಕೈಗೊಂಡಿರುವ ಸಂಸ್ಥೆಗೆ ಉತ್ತರೋತ್ತರ ಶ್ರೇಯಸ್ಸಾಗಲೆಂದು ಶುಭ ಹಾರೈಸಿದರು.

Advertisement

ಪ್ರಾಯೋಜಕರಾದ ಬೆಂಗಳೂರಿನ ಉದ್ಯಮಿ ಎಚ್. ಎಸ್. ಶೆಟ್ಟಿಯವರು ಸಂಸ್ಥೆಯ ನಿಸ್ವಾರ್ಥ ಸೇವೆಯನ್ನು ಮನಸಾರೆ ಕೊಂಡಾಡಿ, ಇದೊಂದು ಆದರ್ಶ ಸಂಸ್ಥೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ತಾನು ಸದಾ ಈ ಸಂಸ್ಥೆಯೊಂದಿಗೆ ಇರುವುದಾಗಿ ತಿಳಿಸಿದರು.

ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡ 27 ಮತ್ತು 28 ನೇ ಮನೆಗಳಾಗಿದ್ದು, ಈ ಸಂದರ್ಭಗಳಲ್ಲಿ ಹಾಲಾಡಿ ನಾಗರಾಜ ಶೆಟ್ಟಿ, ಉದ್ಯಮಿ ಯು. ವಿಶ್ವನಾಥ ಶೆಣೈ, ಕಲಾರಂಗದ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಕಾರ್ಯಕರ್ತ ಭುವನಪ್ರಸಾದ ಹೆಗ್ಡೆ, ಎಚ್. ಎನ್. ಶೃಂಗೇಶ್ವರ, ವಿದ್ಯಾಪ್ರಸಾದ್, ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ, ಸಂತೋಷ್ ಕುಮಾರ್ ಶೆಟ್ಟಿ, ಸುಜಯೀಂದ್ರ ಹಂದೆ, ಪಿ. ಕಿಶನ್ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಮ್. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಪ್ರೊ. ನಾರಾಯಣ ಎಮ್. ಹೆಗಡೆ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next