Advertisement
ಕೂಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ಹಾಗೂ ರಾಕೇಶ್ ಭಟ್ ಅವರು ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ವನಿತಾ ಅವರು ಸಾವನ್ನಪ್ಪಿದ್ದಾರೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ: ಹುಳು ಕಚ್ಚಿ ಬೆಂಗಳೂರಿನ ವಿ. ರಾಮ್‌ಮೋಹನ ಶೆಟ್ಟಿ (69)ಅವರು ಸಾವನ್ನಪ್ಪಿದ್ದಾರೆ. ಅವರಿಗೆ ಸುಮಾರು 12 ವರ್ಷದಿಂದ ಕಿಡ್ನಿ ಸಮಸ್ಯೆಯ ಕಾಯಿಲೆ ಇದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರು. ಡಿ. 11ರಂದು ಅವರ ತಂದೆ- ತಾಯಿಯೊಂದಿಗೆ ಅಜ್ಜಿ ಮನೆಯಾದ ಮಣಿಪಾಲದ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಮಧ್ಯರಾತ್ರಿ ವೇಳೆ ಅವರ ಎಡಕಾಲಿಗೆ ಯಾವುದೋ ಹುಳು ಕಚ್ಚಿದ ಪರಿಣಾಮ ಅವರಿಗೆ ಜ್ವರ ಬಂದಿದ್ದು, ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರ್ವ: ಗದ್ದೆಯಲ್ಲಿ ಬಿದ್ದು ಸಾವು
ಶಿರ್ವ: ಮುಂಬಯಿಯಲ್ಲಿ ವಾಸವಿದ್ದು, ಸುಮಾರು 15 ದಿನಗಳ ಹಿಂದೆ ಪತ್ನಿಯೊಂದಿಗೆ ಮಟ್ಟಾರು ಮುಲ್ಲಮಾರು ಮನೆಗೆ ಬಂದಿದ್ದ ರಾಮ ಪೂಜಾರಿ (65) ಅವರು ಡಿ. 17ರ ಬೆಳಗ್ಗೆ ಹಲ್ಲುಜ್ಜುತ್ತಾ ಗದ್ದೆಯ ಕಡೆ ಹೋದವರು ಗದ್ದೆಯಲ್ಲಿ ಅಂಗಾತ ಬಿದ್ದು ಮೃತಪಟ್ಟಿದ್ದಾರೆ. ರಾಮ ಪೂಜಾರಿ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದು, ಸಹೋದರ ಕೃಷ್ಣ ಪೂಜಾರಿ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಉಡುಪಿ: ರೈಲ್ವೇ ಟ್ರ್ಯಾಕ್ ಬಳಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಮಾರ್ಪಳ್ಳಿಯ ವೆಂಕಟೇಶ ಪೂಜಾರಿ (55) ಮೃತಪಟ್ಟವರು. ವಿಪರೀತ ಕುಡಿತದ ಚಟ ಹೊಂದಿದ್ದ ಅವರು ಮದ್ಯಪಾನ ಮಾಡಿ ಕೆಲವೊಮ್ಮೆ 3-4 ದಿನ ಮನೆಗೆ ಬರುತ್ತಿರಲಿಲ್ಲ.
Advertisement
ಡಿ. 12ರಂದು ಮನೆಯಿಂದ ಹೋದವರು ವಾಪಸು ಮನೆಗೆ ಬಂದಿರಲಿಲ್ಲ. ಡಿ. 16ರಂದು ಪರಿಚಯದವರೊಬ್ಬರು ಮನೆಗೆ ಕರೆ ಮಾಡಿ ಮಾರ್ಪಳ್ಳಿಯ ರೈಲ್ವೇ ಟ್ರ್ಯಾಕ್ ಬಳಿ ವೆಂಕಟೇಶ ಪೂಜಾರಿಯವರ ಮೃತದೇಹ ಇರುವುದಾಗಿ ತಿಳಿಸಿದ್ದರು. ಕುಡಿತದ ಚಟ ಅಥವಾ ಯಾವುದೋ ಕಾಯಿಲೆಯಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.