Advertisement

ವಾರದೊಳಗೆ  ಉಡುಪಿ- ಕಲ್ಸಂಕ- ಅಂಬಾಗಿಲಿಗೆ ನರ್ಮ್ ಬಸ್‌

02:55 PM Apr 14, 2017 | |

ಉಡುಪಿ: ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಉಡುಪಿ- ಕಲ್ಸಂಕ- ಅಂಬಾಗಿಲು ಮಾರ್ಗವಾಗಿ ಬಸ್‌ ಓಡಿಸಲು ಪರವಾನಗಿ ಸಿಕ್ಕಿದ್ದು, ಸಮಯ, ಹಂತಗಳನ್ನು ಶೀಘ್ರ ಅಂತಿಮಗೊಳಿಸಿ ವಾರದೊಳಗೆ ನರ್ಮ್ ಬಸ್‌ ಸಂಚಾರಕ್ಕೆ ಚಾಲನೆ ನೀಡಲಾಗುವುದು ಎಂದು ಮಂಗಳೂರು ವಿಭಾಗೀಯ ಸಂಚಾರ ಅಧಿಕಾರಿ ಜೈಶಾಂತ್‌ ಕುಮಾರ್‌ ಭರವಸೆ ನೀಡಿದರು.

Advertisement

ಅವರು ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು  ವಿಭಾಗದ ಉಡುಪಿ ನಿಟ್ಟೂರಿನ ಘಟಕದಲ್ಲಿ ವತಿಯಿಂದ  ಬಸ್‌ಗಳ ಕಾರ್ಯಾಚರಣೆಯ ಬಗ್ಗೆ ಗುರುವಾರ ನಡೆದ  ಸಾರ್ವಜನಿಕ ಸಂಪರ್ಕ ಸಭೆಯಲ್ಲಿ  ಮಾತನಾಡಿದರು. 

ಶೀಘ್ರ 18 ಹೊಸ ನರ್ಮ್ ಬಸ್‌ : ಜಿಲ್ಲೆಯ ಆರ್‌ಟಿಎ ವ್ಯಾಪ್ತಿಯಲ್ಲಿ ಒಟ್ಟು 55 ಸರಕಾರಿ ಬಸ್‌ಗಳ ಸೇವೆ ಕಲ್ಪಿಸಲಾಗಿದೆ. ಇನ್ನೂ 30 ಬಸ್‌ ಓಡಿಸಲು ಪರವಾನಗಿ ಸಿಕ್ಕಿದೆ. ಇದುವರೆಗೆ 77 ಬಸ್‌ಗಳ ಪರವಾನಗಿ ಸಿಕ್ಕಿದರೂ, ವೇಳಾಪಟ್ಟಿ ನಿಗದಿಯಾಗದ್ದರಿಂದ ಬಾಕಿ ಇವೆ. ಅದಲ್ಲದೆ ಉಡುಪಿ ಜಿಲ್ಲೆಯಾದ್ಯಂತ ಬೇಡಿಕೆ ಇರುವ ಕಡೆ ಶೀಘ್ರ 18 ಹೊಸ ನರ್ಮ್ ಬಸ್‌ಗಳ ಸಂಚಾರ ಆರಂಭಿಸಲಾಗುವುದು ಎಂದರು.
 
ನರ್ಮ್ ಬಸ್‌ ವಿರುದ್ಧ ಕೋರ್ಟಿಗೆ: ಹೆಚ್ಚಿನ ಕಡೆ ಜನರಿಂದ ಬೇಡಿಕೆಗಳು ಬಂದ ತತ್‌ಕ್ಷಣ ಅಲ್ಲಿಗೆ ಬಸ್‌ ಸೇವೆ ಒದಗಿಸಲು ಇದು ರಾಷ್ಟ್ರೀಕೃತವಲ್ಲದ ರಸ್ತೆಯಾಗಿರುವುದರಿಂದ ಕೆಎಸ್‌ಆರ್‌ಟಿಸಿಗೆ ಅಧಿಕಾರವಿಲ್ಲ. ಕೆಲವೊಂದು ಯೋಜನೆಗಳು ಖಾಸಗಿಯವರ ಲಾಬಿಯಿಂದಾಗಿ ಈ ಪ್ರಕ್ರಿಯೆ ವಿಳಂಬವಾಗುತ್ತಿವೆ. ಉಡುಪಿಯಲ್ಲಿ ನರ್ಮ್ ಬಸ್‌ ಸಂಚಾರ ಆರಂಭಿಸಿರುವುದು ಸರಿಯಿಲ್ಲ  ಎಂದು ಖಾಸಗಿಯವರು ಕೋರ್ಟಿಗೆ ಅರ್ಜಿ ಹಾಕಿದ್ದಾರೆ. ಈ ಹಿಂದೆಯೂ ಪರವಾನಗಿ, ಕಡಿಮೆ ದರ, ಸಮಯ ವ್ಯತ್ಯಯ ಹೀಗೆ ಅನೇಕ ಸಂದರ್ಭಗಳಲ್ಲಿ ಕೋರ್ಟಿಗೆ ಅರ್ಜಿ ಹಾಕಿದ್ದಾರೆ ಎಂದರು. 

ಸಭೆಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗಡೆ, ಘಟಕ ವ್ಯವಸ್ಥಾಪಕ ಎ. ಉದಯ್‌ ಶೆಟ್ಟಿ, ಅಂಕಿ- ಅಂಶ ಅಧಿಕಾರಿ ಸ್ವರ್ಣಲತಾ, ಸಹಾಯಕ ವಿಭಾಗೀಯ ಸಂಚಾರ ಅಧಿಕಾರಿ ಮಂಜುನಾಥ್‌, ಸಂಚಾರ ನಿರೀಕ್ಷಕಿ ಸಿಂಧೂಜಾ ನಾಯಕ್‌ ಉಪಸ್ಥಿತರಿದ್ದರು. 

ಸಾರ್ವಜನಿಕರಿಂದ ಬಂದ ಬೇಡಿಕೆಗಳು
-ಉಡುಪಿ- ಕಲ್ಸಂಕ- ಅಂಬಾಗಿಲಿಗೆ ನರ್ಮ್ ಬಸ್‌.
-ಉಡುಪಿ- ಇಂದ್ರಾಳಿ- ರೈಲು ನಿಲ್ದಾಣಕ್ಕೆ ಸರಿಯಾದ ಸಮಯದಲ್ಲಿ ಬಸ್‌ ಸೇವೆ.
-ಉಡುಪಿ- ಕಿದಿಯೂರು- ಸಂಪಿಗೆನಗರ- ಪಿತ್ರೋಡಿ  ಮಾರ್ಗಕ್ಕೆ ನರ್ಮ್ ಬಸ್‌.
-ಉಡುಪಿ- ವಡಭಾಂಡೇಶ್ವರ- ಹಂಪನ್‌ಕಟ್ಟಾ ಮಾರ್ಗಕ್ಕೆ ನರ್ಮ್ ಬಸ್‌. ಜ  ಉಡುಪಿ- ಕಾರ್ಕಳ ಮಾರ್ಗದ ಸರಕಾರಿ ಬಸ್‌ಗಳ ದರ ಹಾಗೂ ಪಾಸ್‌ ದರವನ್ನು ಗ್ರಾಮಾಂತರ ಸಾರಿಗೆ ದರವಾಗಿ ಪರಿಷ್ಕರಿಸಬೇಕು.
-ಉಡುಪಿ ಸರ್ವೀಸ್‌ ಬಸ್‌ ನಿಲ್ದಾಣದಿಂದ ನರ್ಮ್ ಬಸ್‌ ಓಡಿಸಬೇಕು.
-ವಿದ್ಯಾರ್ಥಿಗಳಿಗೆ ಪಾಸ್‌ ವ್ಯವಸ್ಥೆ ಸುಲಭವಾಗಿ ಸಿಗುವಂತಾಗಬೇಕು.
-ಉಡುಪಿ- ಕಾರ್ಕಳ ಮಾರ್ಗದಲ್ಲಿ ನರ್ಮ್ ಬಸ್‌  ಸಂಚಾರಕ್ಕೆ ಸರಿಯಾದ ಸಮಯ ನಿಗದಿಗೊಳಿಸಿ.
-ಉಡುಪಿ- ಬ್ರಹ್ಮಾವರ- ಮುದ್ದೂರು- ಹೆಬ್ರಿ- ಕಬ್ಬಿನಾಲೆಗೆ ಸರಕಾರಿ ಬಸ್‌ ಸೇವೆ. ಜ  ಸ್ಯಾಬ್ರಕಟ್ಟೆ- ಶಿರಿಯಾರ- ಕುದುರೆಕಟ್ಟೆ- ಮಂದಾರ್ತಿಗೆ ಸರಕಾರಿ ಬಸ್‌ ಸೇವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next