Advertisement

Udupi: ಮಾದರಿ ನೀತಿ ಸಂಹಿತೆ ಉಲ್ಲಂಘನೆ; ವಿವಿಧೆಡೆ ಪ್ರಕರಣ ದಾಖಲು

01:17 PM Mar 27, 2024 | Team Udayavani |

ಉಡುಪಿ: ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಜಿಲ್ಲೆಯ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಉದ್ಯಾವರ ಚೆಕ್‌ಪೋಸ್ಟ್‌ನಲ್ಲಿ 4.51 ಲಕ್ಷ, ಶಿರೂರು ಚೆಕ್‌ ಪೋಸ್ಟ್‌ನಲ್ಲಿ 3.50 ಲಕ್ಷ ರೂ. ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 7 ಎಫ್ಐಆರ್‌ ದಾಖಲಾಗಿದ್ದು, ಅದರಲ್ಲಿ 4 ಚುನಾವಣೆಗೆ ಸಂಬಂಧಿಸಿದ್ದಾಗಿದೆ.

ಮಾ.26ರಂದು 7,500 ರೂ.ಮೌಲ್ಯದ 100 ಲೀ. ಶೇಂದಿಯನ್ನು ಹಿರಿಯಡಕ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ, 44,000 ರೂ.ಮೌಲ್ಯದ 1.108 ಕೆಜಿ ಗಾಂಜಾವನ್ನು ಸೆನ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ, 1,440 ರೂ.ಮೌಲ್ಯದ 3.240 ಲೀ. ಮದ್ಯವನ್ನು ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ 25 ಶರ್ಟ್‌ ಮತ್ತು 30 ಪ್ಯಾಂಟ್‌ ಸಹಿತ ಒಟ್ಟು 79,737 ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಆಯಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಚ್ಚಿಟ್ಟಿದ್ದ 13.16 ಲಕ್ಷ ರೂ. ವಶಕ್ಕೆ

Advertisement

ಕಾಸರಗೋಡು: ಉಳಿತ್ತಡ್ಕದ ವರ್ಕತ್ತೋಡಿಯ ಅಬ್ದುಲ್‌ ಲತೀಫ್‌ ಅವರ ಮಜಿಲ ಅಪಾರ್ಟ್‌ಮೆಂಟ್‌ನಿಂದ ವಿದ್ಯಾನಗರ ಪೊಲೀಸರು ದಾಖಲೆ ಪತ್ರಗಳಿಲ್ಲದ 13.16 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

500 ರೂ.ಗಳನ್ನು 26 ಕಟ್ಟು ಮಾಡಿ ಬ್ಯಾಗ್‌ನಲ್ಲಿ ತುಂಬಿಸಿಡಲಾಗಿತ್ತು. ರಹಸ್ಯ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಅಬ್ದುಲ್‌ ಲತೀಫ್‌ನ ಹೇಳಿಕೆಗಳನ್ನು ದಾಖಲಿಸಿ ಆತನನ್ನು ಬಿಡುಗಡೆಗೊಳಿಸಿದ್ದಾರೆ.

ದ.ಕ.: 1.39 ಲ.ರೂ. ವಶಕ್ಕೆ

ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಅಕ್ರಮ ಹಣ, ಮದ್ಯ ಸಾಗಾಟ ಪತ್ತೆಗಾಗಿ ತಪಾಸಣೆ ಮುಂದುವರಿದಿದ್ದು ಮಾ. 25ರ ಬೆಳಗ್ಗೆ 9ರಿಂದ 26ರ ಬೆಳಗ್ಗೆ 9 ಗಂಟೆಯ ನಡುವೆ ಒಟ್ಟು 1,39,300 ರೂ. ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಮಾ. 17ರಿಂದ 26ರವರೆಗೆ ಒಟ್ಟು 8,71,500 ರೂ. ನಗದು ವಶಪಡಿಸಿಕೊಂಡಂ ತಾಗಿದೆ. ಈ ಪೈಕಿ ದಾಖಲೆ ಪರಿಶೀಲನೆಯ ಅನಂತರ 1.32 ಲ.ರೂ.ಗಳನ್ನು ಸಂಬಂಧಿಸಿದವರೆಗೆ ವಾಪಸ್‌ ನೀಡಲಾಗಿದೆ.

46 ಲೀ. ಮದ್ಯ ವಶ

ಮಾ. 25ರ ಬೆಳಗ್ಗೆ 9ರಿಂದ 26ರ ಬೆಳಗ್ಗೆ 9ರ ಅವಧಿಯಲ್ಲಿ 46 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಮಾ. 17ರಿಂದ 26ರ ವರೆಗೆ 5,72,342 ರೂ. ಮೌಲ್ಯದ ಒಟ್ಟು 1078.98 ಲೀ. ಮದ್ಯ ವಶಪಡಿಸಿಕೊಂಡಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next