Advertisement

“ಉಡುಪಿ ಉತ್ಸವ’ಉದ್ಘಾಟನೆ

12:03 PM Dec 04, 2017 | |

ಉಡುಪಿ: ಉಡುಪಿಯ ಕಲ್ಸಂಕ ಬಳಿಯ ರಾಯಲ್‌ ಗಾರ್ಡನ್‌ನಲ್ಲಿ ರವಿವಾರ “ಉಡುಪಿ ಉತ್ಸವ’ ಉದ್ಘಾಟನೆ ಸಮಾರಂಭ ನಡೆಯಿತು.

Advertisement

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರು ಉದ್ಘಾಟಿಸಿ, ಉಡುಪಿ ಜನತೆಗೆ ಕಳೆದ ಹತ್ತು ವರ್ಷಗಳಿಂದಲೂ ಮನೋರಂಜನೆಯೊಂದಿಗೆ ಒಂದೇ ಸೂರಿನಡಿ ವೈವಿಧ್ಯಮಯ ಆಕರ್ಷಕ ವಸ್ತು ಖರೀದಿಸುವ ವ್ಯವಸ್ಥೆ ಕಲ್ಪಿಸಿಕೊಟ್ಟ ಉಡುಪಿ ಉತ್ಸವ ಇದೀಗ ಆರಂಭಗೊಂಡಿದೆ. ಜನತೆ ಮನೋರಂಜನೆಯನ್ನು ಆಸ್ವಾದಿಸಲು ಸಾಕಷ್ಟು ಅವಕಾಶವಿದೆ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ರತ್ನಾಕರ ಶೆಟ್ಟಿ, ನಗರಸಭೆ ಸ್ಥಾಯಿ ಸಮಿತಿ ನಿಯೋಜಿತ ಅಧ್ಯಕ್ಷ ಹಾರ್ಮಿಸ್‌ ನೊರೊನ್ಹ ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್‌ ಪಿ., ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ, ನಗರಸಭೆ ಸದಸ್ಯರಾದ ಜನಾರ್ದನ ಭಂಡಾರ್ಕರ್‌, ಸೆಲಿನಾ ಕರ್ಕಡ, ಶೋಭಾ ಕಕ್ಕುಂಜೆ, ಚಂದ್ರಕಾಂತ್‌ ನಾಯಕ್‌, ಗಣೇಶ್‌ ನೇರ್ಗಿ, ಲತಾ ಆನಂದ ಶೇರಿಗಾರ್‌ ಉಪಸ್ಥಿತರಿದ್ದರು.

ಉಡುಪಿಯಲ್ಲಿ ಫ್ರಾನ್ಸ್‌ನ ಐಫೆಲ್‌ ಟವರ್‌!
ಈ ಬಾರಿಯ ಉಡುಪಿ ಉತ್ಸವದಲ್ಲಿ ಅನೇಕ ಹೊಸ ಹೊಸ ಬಗೆಯ ಆಕರ್ಷಣೆಗಳೊಂದಿಗೆ ದೇಶದಲ್ಲೇ ಪ್ರಥಮ ಬಾರಿಗೆ ಉಡುಪಿಯಲ್ಲಿ 90 ಅಡಿ ಎತ್ತರದ 20,000 ಕೆಜಿ ಸ್ಟೀಲ್‌ನಿಂದ ತಯಾರಿಸಿದ ಸಪ್ತ ವರ್ಣಗಳಿಂದ ಕಂಗೊಳಿಸುವ “ಫ್ರಾನ್ಸ್‌  ದೇಶದ ಐಫೆ‌ಲ್‌ ಟವರ್‌’ ಮಾದರಿ ಗಮನ ಸೆಳೆಯುತ್ತಿದೆ.

ವಿಶೇಷ ಆಕರ್ಷಣೆ
27 ಬಗೆಯ ವೈವಿಧ್ಯಮಯ ಆಕರ್ಷಕ ಕೈಬರಹದ ಪೈಂಟಿಂಗ್‌ನ ಸೆಲ್ಫಿ ಗ್ಯಾಲರಿ, ಎನಿಮಲ್‌ ಕಿಂಗ್‌ಡಂ ಹಾಗೂ ಇನ್ನಿತರ ಆಕರ್ಷಣೆಗಳು ಸೇರಿದಂತೆ ಮಕ್ಕಳು, ಯುವಕರು ಮತ್ತು ಗೃಹಿಣಿಯರನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು ಉತ್ಸವವನ್ನು ಆಯೋಜಿಸಲಾಗಿದೆ. ನೂರಕ್ಕೂ ಅಧಿಕ ವೈವಿಧ್ಯಮಯ ವಸ್ತುಗಳ ಮಳಿಗೆಗಳು ಹಾಗೂ ಮಕ್ಕಳನ್ನು ಆಕರ್ಷಿಸುವ ಹಲವು ಬಗೆಯ ಅಮ್ಯೂಸ್‌ಮೆಂಟ್‌ಗಳು ಮನೋರಂಜನೆ ನೀಡಲಿದೆ ಎಂದು ಸಂಘಟಕ ಗೌತಮ್‌ ಅಗರ್‌ವಾಲ್‌ ತಿಳಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next