ಉಡುಪಿ: ಕರಾವಳಿ ಭಾಗದಲ್ಲಿ ವಾಣಿಜ್ಯ, ವೃತ್ತಿಪರ ಶಿಕ್ಷಣದಲ್ಲಿ ಸತತ 25 ವರ್ಷಗಳಿಂದ ತೊಡಗಿಸಿಕೊಂಡು ಮಂಗಳೂರು, ಬೆಂಗಳೂರಿನಲ್ಲಿ ಅಂಗ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ತ್ರಿಶಾ ಕ್ಲಾಸಸ್ ವತಿಯಿಂದ ಪ್ರಥಮ ಪಿಯು ಮುಗಿಸಿದ ವಿದ್ಯಾರ್ಥಿಗಳಿಗೆ ಸಿಎ ಫೌಂಡೇಶನ್ ತರಗತಿ ಮಾರ್ಚ್ ಆರಂಭಗೊಳ್ಳಲಿದೆ. ವೃತ್ತಿಪರ ಕೋರ್ಸ್‌ಗಳಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ತ್ರಿಶಾ ಕ್ಲಾಸಸ್ ತರಬೇತಿ ಆಯೋಜಿಸಿದೆ.
ಪ್ರಥಮ ಪಿಯುಸಿ ಬ್ಯಾಚ್:
ಪ್ರಥಮ ಪಿಯುಸಿ ಪೂರೈಸಿ ದ್ವಿತೀಯ ಪಿಯುಸಿಗೆ ಪದಾರ್ಪಣೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರಿಕ್ಷೆಯಾದ ಸಿಎ ಫೌಂಡೇಶನ್ ನ ತಯಾರಿ ನಡೆಸಲು ಸರಿಯಾದ ಸಮಯ ಹಾಗೂ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸುಲಭವೂ ಆಗುತ್ತದೆ ಎನ್ನುವ ನಿಟ್ಟಿನಲ್ಲಿ ಈ ಕಾರ್ಯ ಯೋಜನೆ ಯನ್ನು ಕೈಗೊಳ್ಳಲಾಗಿದೆ. ದ್ವಿ.ಪಿಯುಸಿಯ ಪಠ್ಯಕ್ರಮವನ್ನು ಸಿಎ ಫೌಂಡೇಶನ್ ಪಠ್ಯದಲ್ಲಿ ವಿವರವಾಗಿ ಅಭ್ಯಸಿಸ ಬೇಕಾಗಿರುವುದರಿಂದ ದ್ವಿ. ಪಿಯುಸಿಯಲ್ಲಿ ಉತ್ತಮ ಅಂಕಗಳಿಸಲೂ ಸಹಕಾರಿಯಾಗುತ್ತದೆ. ಅಲ್ಲದೆ ದ್ವಿತೀಯ ಪಿಯುಸಿ ಪರೀಕ್ಷೆ ಉತ್ತೀರ್ಣರಾದ ತತ್‌ಕ್ಷಣವೇ ಸಿಎ ಫೌಂಡೇಶನ್ ಪರೀಕ್ಷೆ ಬರೆಯಬಹುದು.
ತರಗತಿಯ ವಿಶೇಷತೆಗಳು:
ಅಭ್ಯಾಸದ ನೂತನ ವಿಧಾನಗಳು, ರಾಜ್ಯದ ವಿವಿಧ ಭಾಗಗಳಿಂದ ಪ್ರಸಿದ್ಧ ಹಾಗೂ ಅನುಭವಿ ವಿಷಯ ತಜ್ಞರಿಂದ ತರಬೇತಿ, ಅಭ್ಯಾಸಕ್ಕೆ ಪೂರಕವಾಗುವ ಎಲ್ಲ ಸ್ಟಡಿ ಮೆಟೀರಿಯಲ್‌ಗಳು ವಿದ್ಯಾರ್ಥಿ ಗಳಿಗೆ ಲಭ್ಯವಾಗಲಿದೆ. ಪರೀಕ್ಷೆಗೆ ಪೂರಕವಾಗುವಂತೆ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸುವ ವಿಧಾನಗಳನ್ನೂ ತಿಳಿಸಿ ಕೊಡಲಾಗುವುದು. ತರಬೇತಿಯ ಅಂತ್ಯದಲ್ಲಿ ಎಲ್ಲ ವಿಷಯಗಳ ಕುರಿತು ರಿವಿಜನ್ ಕ್ಲಾಸಸ್ ಮತ್ತು ಮಾದರಿ ಸಿದ್ಧತಾ ಪರೀಕ್ಷೆಗಳನ್ನು ಆಯೋಜಿಸಲಾಗುತ್ತಿದೆ.
ಪ್ರಸ್ತುತ ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗೆ ಉಡುಪಿಯ ತ್ರಿಶಾ ಕ್ಲಾಸಸ್‌ನಲ್ಲಿ ಸಿಎ ಫೌಂಡೇಶನ್ ಕುರಿತಾದ ಮಾಹಿತಿ ಕಾರ್ಯಾಗಾರ ಮಾ. 12ರಂದು ಜರಗಲಿದೆ. ಮಾಹಿತಿಗೆ ತ್ರಿಶಾ ಸಂಸ್ಥೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ