ಉಡುಪಿ: ಮನೆಗೆ ಕಳ್ಳರು ನುಗ್ಗಿ ಸಾವಿರಾರು ರೂ. ನಗದು ಹಾಗೂ ಚಿನ್ನಾಭರಣ ದೋಚಿದ ಘಟನೆ ನಡೆದಿದೆ.
Advertisement
ಕೊರಂಗ್ರಪಾಡಿ ಬೊಬ್ಬನಪಾದೆ ಶೆಟ್ಟಿ ಕಾಂಪೌಂಡ್ ಎನ್ನುವಲ್ಲಿ ಅಶ್ವಿನ್ ಪಿರೆರಾ ಅವರ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿರುವ ಪ್ರಸಾದ್ ಪೂಜಾರಿ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಕಳ್ಳರು ಮನೆಯ ಹಿಂಬದಿಯ ಬಾಗಿಲು ಮುರಿದು ಒಳಪ್ರವೇಶಿಸಿ, ಮನೆಯೊಳಗಿದ್ದ ಗೋದ್ರೆಜ್ ಲಾಕರ್‌ನಲ್ಲಿದ್ದ 10 ಗ್ರಾಂ ತೂಕದ ಚಿನ್ನದ ನೆಕ್ಲೆಸ್ ಹಾಗೂ 18 ಸಾವಿರ ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 63,000 ರೂ. ಆಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.