ಉಡುಪಿ: ಭಾರತೀಯ ಸಮುದಾಯ, ಸಂಸ್ಕೃತಿಯ ತಮ್ಮ ಸಂಬಂಧ ಚೆನ್ನಾಗಿದ್ದು ಭಾರತೀಯ ಸಮುದಾಯದ ವಿವಿಧ ಚಟುವಟಿಕೆ ಗಳಿಗೆ ಸಹಕಾರವನ್ನು ನೀಡುತ್ತಿರುವುದಾಗಿ ಆಸ್ಟ್ರೇಲಿಯದ ವಿಕ್ಟೋರಿಯಾ ರಾಜ್ಯದ ಸಂಸದ ಜಾನ್ ಮುಲಾಹಿ ಹೇಳಿದರು.
ಮಕರ ಸಂಕ್ರಾಂತಿಯಂದು ಮಂಗಳವಾರ ಗೀತಾ ಮಂದಿರದಲ್ಲಿ ಶ್ರೀಕೃಷ್ಣ ಗೀತಾನುಭವ ಮಂಟಪದ ಲೋಕಾ ರ್ಪಣೆ ನಿಮಿತ್ತ ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿ, ಆಸ್ಟ್ರೇಲಿಯದಲ್ಲಿ ನಿರ್ಮಾಣಗೊಂಡ ಪುತ್ತಿಗೆ ಮಠದ ವೆಂಕಟಕೃಷ್ಣ ವೃಂದಾವನಅನ್ನದಾನವೇ ಮೊದಲಾದ ಚಟುವಟಿಕೆ ಗಳನ್ನು ನಡೆಸುತ್ತಿದೆ. ವಿಶೇಷವಾಗಿ ಕೋವಿಡ್ ಸಮಯ, ಪ್ರಾಕೃತಿಕ ವಿಕೋ ಪದ ಸಂದರ್ಭದಲ್ಲಿ ಮಂದಿರದಿಂದ ವಿಕ್ಟೋರಿಯಾದವರಿಗೆ ನೀಡಿದ ಕೊಡುಗೆ ಗಳಿಗೆ ಮೆಚ್ಚುಗೆ ಸೂಚಿಸಿ ಮಂದಿರದ ಚಟುವಟಿಕೆಗಳಿಗೂ ತಾನು ನೆರವು ನೀಡಿರುವುದಾಗಿ ತಿಳಿಸಿದರು.
ತನ್ನ ಕ್ಷೇತ್ರದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ. 6ರಷ್ಟು ಭಾರತೀಯರಿದ್ದಾರೆ. ಇವರಲ್ಲಿ ಬಹುಮಂದಿ ಹಿಂದಿ ಮಾತನಾಡು ವವರು. ಅಲ್ಲದೆ ಕನ್ನಡ, ಗುಜರಾತಿ, ಹಿಂದಿ, ತಮಿಳು ಭಾಷೆ ಮಾತನಾಡುವವರಿದ್ದು ಇವರೆಲ್ಲರೂ ಬಹುಸಾಂಸ್ಕೃತಿಕ ವಾತಾವ ರಣವನ್ನು ನಿರ್ಮಿಸಿದ್ದಾರೆ. 2014ರಿಂದ ವಿಕ್ಟೋರಿಯಾ ಸರಕಾರ 25 ಮಿ. ಡಾಲರ್ ನೆರವನ್ನು ಭಾರತೀಯ ಸಮುದಾಯಕ್ಕೆ ಮೀಸಲಿರಿಸಿ ವಿನಿಯೋಗಿಸುತ್ತಿದೆ ಎಂದು ಜಾನ್ ಮುಲಾಹಿ ಹೇಳಿದರು.
ಆಸ್ಟ್ರೇಲಿಯಾ ಸೂರ್ಯೋದಯದ ರಾಷ್ಟ್ರ. ಭಾರತ ಜಗತ್ತಿಗೆ ಗೀತೆಯ ಜ್ಞಾನ ನೀಡಿದ ರಾಷ್ಟ್ರ. ಸೂರ್ಯನ ಉತ್ತರಾಯಣ ಪರ್ವ ಆರಂಭವಾಗುವ ದಿನವೇ ಮಕರಸಂಕ್ರಾಂತಿ ಉತ್ಸವದ ದಿನ. ಗೀತೆಯು ವಿಕ್ಟರಿ(ಜಯ)ಯ ಸಂಕೇತವಾದರೆ ಜಾನ್ ಮುಲಾಹಿ ಪ್ರತಿನಿಧಿಸುವ ರಾಜ್ಯ ವಿಕ್ಟೋರಿಯ. ಈ ಹಿನ್ನೆಲೆಯಲ್ಲಿ ಜಾನ್ ಮುಲಾಹಿ ಕೋಟಿ ಗೀತಾ ಲೇಖನ ಯಜ್ಞದ ದೀಕ್ಷೆಯನ್ನು ತೊಟ್ಟಿರುವುದು ಶುಭ ಸಂಕೇತ ಎಂದು ಆಶೀರ್ವಚನ ನೀಡಿದ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.
ಸಿಬಿಎಸ್‌ಇ ನಿರ್ದೇಶಕ ಜಯಪ್ರಕಾಶ್ ಚತುರ್ವೇದಿಯವರು, ಗೀತೆಯು ಅತಿ ಹೆಚ್ಚು ಭಾಷೆಗೆ ಅನುವಾದಗೊಂಡ ಕೃತಿಯಾಗಿದೆ. ರಷ್ಯದ ಉಪಗ್ರಹ ಉಡಾ ವಣೆಯಲ್ಲಿ, ಕ್ವಾಂಟಮ್ ಭೌತಶಾಸ್ತ್ರವೇ ಮೊದಲಾದ ವೈಜ್ಞಾನಿಕ ವಿಚಾರಗಳಲ್ಲಿ ಗೀತೆಯ ಪಾತ್ರ ಮಹತ್ವದ್ದಾಗಿದೆ ಎಂದರು.
ಪುತ್ತಿಗೆ ಕಿರಿಯ ಶ್ರೀಗಳಾದ ಶ್ರೀಸುಶ್ರೀಂದ್ರ ತೀರ್ಥ ಶ್ರೀಪಾದರು, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಆಸ್ಟ್ರೇಲಿಯದಿಂದ ಆಗಮಿಸಿದ ರಮೇಶ್, ಅಶ್ವಿನ್, ರಾಜು ಉಪಸ್ಥಿತರಿದ್ದರು. ವಿದ್ವಾನ್ ಡಾ| ಬಿ.ಗೋಪಾಲಾಚಾರ್ಯ ಸ್ವಾಗತಿಸಿದರು.