Advertisement

ಉಡುಪಿ: ಸರ್ವಧರ್ಮ ದೀಪಾವಳಿ ಆಚರಣೆ

12:19 AM Oct 30, 2019 | mahesh |

ಉಡುಪಿ: ಬೆಳಕು ಜ್ಞಾನದ ಸಂಕೇತ. ಮನುಷ್ಯನಲ್ಲಿರುವ ಮೂಢನಂಬಿಕೆ, ವೈರತ್ವ, ದ್ವೇಷವೆಂಬ ಭಾವನೆಯನ್ನು ಕಿತ್ತೆಸೆದು ಇತರರಿಗೆ ಸಹಾಯ ಮಾಡುವ ಮೂಲಕ ಮನಸ್ಸಿನ ಅಂಧಕಾರವನ್ನು ತೊಡಗಿಸಬೇಕು ಎಂದು ಸಾಹಿತಿ ಕೆ.ಪಿ. ಮಹಾಲಿಂಗು ತಿಳಿಸಿದರು.

Advertisement

ಸೌಹಾರ್ದ ಸಮಿತಿ, ಕೆಥೊಲಿಕ್‌ ಸಭಾ ಉಡುಪಿ ಘಟಕ, ಶೋಕಮಾತಾ ಇಗರ್ಜಿ ಉಡುಪಿ ಹಾಗೂ ಲಯನ್ಸ್‌ ಕ್ಲಬ್‌, ಉಡುಪಿ ಸಂಗಮದ ಸಂಯುಕ್ತ ಆಶ್ರಯದಲ್ಲಿ ಶೋಕಮಾತಾ ಇಗರ್ಜಿ ವಠಾರದಲ್ಲಿ ಮಂಗಳವಾರ ಆಯೋಜಿಸಿದ ಸರ್ವ ಧರ್ಮ ದೀಪಾವಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚರ್ಚ್‌ ವಠಾರದಲ್ಲಿ ಎತ್ತರದ ಹಣತೆಯಲ್ಲಿ ನೂರಾರು ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿ ಆಚರಿಸಲಾಯಿತು. ಗೂಡು ದೀಪಗಳು, ದೀಪಗಳ ಸಾಲು ಚರ್ಚ್‌ ಆವರಣದಲ್ಲಿ ಬೆಳಕಿನ ಹಬ್ಬದ ಸಂಭ್ರಮವನ್ನು ಮೂಡಿಸಿದವು.

ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಂ| ವಲೇರಿಯನ್‌ ಮೆಂಡೊನ್ಸಾ, ಲೇಖಕ ಜಿ.ಎಂ. ಶರೀಫ್ ಹೂಡೆ, ಉಡುಪಿ ಸಿಎಸ್‌ಐ ಜುಬ್ಲಿ ಚರ್ಚ್‌ ಪಾಸ್ಟರ್‌ ವಂ| ಕಿಶೋರ್‌ ಕುಮಾರ್‌ ಉಪಸ್ಥಿತರಿದ್ದರು. ಸೌಹಾರ್ದ ಸಮಿತಿ ಸಂಚಾಲಕ ಮೈಕಲ್‌ ಡಿ’ಸೋಜಾ ಸ್ವಾಗತಿಸಿದರು. ಸದಸ್ಯ ಚಾಲ್ಸ…ì ಆ್ಯಂಬ್ಲಿರ್‌ ವಂದಿಸಿದರು. ಆಯೋಗಗಳ ಸಂಯೋಜಕ ಅಲ್ಫೋನ್ಸ್ ಡಿ’ಕೋಸ್ಟ ಕಾರ್ಯಕ್ರಮ ನಿರ್ವಹಿಸಿದರು.

ಚರ್ಚ್‌ ವಠಾರದಲ್ಲಿ ಎತ್ತರದ ಹಣತೆಯಲ್ಲಿ ನೂರಾರು ದೀಪಗಳನ್ನು ಹಚ್ಚುವ ಮೂಲಕ ದೀಪಾವಳಿ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next