Advertisement
ಗೋವು ರಾಷ್ಟ್ರೀಯ ಪ್ರಾಣಿಯಾಗಬೇಕು. ಗೋವಿನ ಸಂರಕ್ಷಣೆ ಜತೆ ಗಂಗಾ ಶುದ್ಧೀಕರಣವಾಗಬೇಕು. ಜಗತ್ತಿಗೆ ಭಾರತ ನೀಡಿದ ಕೊಡುಗೆಗಳಾದ ಯೋಗ ಮತ್ತು ಆಯುರ್ವೇದಗಳನ್ನು ರಾಮದೇವ್ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಭಾರತವು ರೋಗಮುಕ್ತ, ಶೀಲಯುಕ್ತ, ಭ್ರಷ್ಟಾಚಾರತ್ಯಕ್ತ, ರಾಷ್ಟ್ರಭಕ್ತ, ಶಕ್ತರಾಷ್ಟ್ರವಾಗ ಬೇಕು ಎಂದು ಅಧ್ಯಕ್ಷತೆ ವಹಿಸಿದ ಶ್ರೀ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರು ಆಶಯ ವ್ಯಕ್ತಪಡಿಸಿದರು. ಈಗ ಕಾಶ್ಮೀರ ಭಾರತದ ಭೂಪಟದಲ್ಲಿ ಸೇರಿದೆ. ಮುಂದೆ ಪಾಕ್ ಆಕ್ರಮಿತ ಕಾಶ್ಮೀರದ ಭಾಗವೂ ಸೇರುವಂತಾಗಲಿ ಎಂದು ಪರ್ಯಾಯ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹಾರೈಸಿದರು.
Related Articles
ಡಾ| ವಂಶಿ ಕೃಷ್ಣಾಚಾರ್ಯ ಸ್ವಾಗತಿಸಿದರು. ಬಾಲಾಜಿ ರಾಘವೇಂದ್ರ ಆಚಾರ್ಯ ನಿರ್ಣಯಗಳನ್ನು ಓದಿದರು.
Advertisement
ಇಂದು ಕಲ್ಲಡ್ಕ , ಮೂರ್ಕಜೆಗೆ ರಾಮದೇವ್ಕಲ್ಲಡ್ಕ: ಯೋಗ ಗುರು ಬಾಬಾ ರಾಮದೇವ್ ನ. 20ರಂದು ಮಧ್ಯಾಹ್ನ 1 ಗಂಟೆಗೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಸುಮಾರು ಒಂದು ಗಂಟೆ ಕಾಲ ವಿದ್ಯಾಕೇಂದ್ರದಲ್ಲಿದ್ದು ಬಳಿಕ ವಿಟ್ಲ ಮೂರ್ಕಜೆಯ ಮೈತ್ರೇಯಿ ಗುರುಕುಲಕ್ಕೆ ತೆರಳುವರು ಎಂದು ವಿದ್ಯಾಕೇಂದ್ರದ ಮಾಹಿತಿ ತಿಳಿಸಿದೆ. ಬಾಬರ್, ಔರಂಗಜೇಬ್ ಕಾಲದಲ್ಲಿಯೂ ಗೋಹತ್ಯೆ ನಿಷೇಧ
ಬಾಬರ್, ಔರಂಗಜೇಬ್ ಕಾಲದಲ್ಲಿಯೂ ಗೋಹತ್ಯೆ ನಿಷೇಧವಿತ್ತು. ಶೇ.99 ಮುಸ್ಲಿಮರು ಭಾರತದವರೇ. ಮಾರ್ಕ್ಸ್ವಾದಿ ಸಿದ್ಧಾಂತಿಗಳು ಮಾತ್ರ ಮೂಲ ನಿವಾಸಿಗಳು ಎಂಬ ವಾದದ ಮೂಲಕ ವೇದಿಕೆಯಲ್ಲಿರುವ ಸಂತರನ್ನೂ ವಿದೇಶೀ ಮೂಲದವರೆನ್ನುತ್ತಾರೆ. ಎಲ್ಲರೂ ಇಲ್ಲಿನ ಮೂಲನಿವಾಸಿಗಳೇ. ಪ್ರಾಣಿಗಳ ವಧೆಯಿಂದ ಪರಿಸರ ಮಾಲಿನ್ಯ ಜಾಸ್ತಿಯಾಗುತ್ತಿದೆ ಎಂದು ಬಾಬಾ ರಾಮದೇವ್ ಹೇಳಿದರು.
ಡಾ| ಅಂಬೇಡ್ಕರ್ ಏಕದೇಶಕ್ಕೆ ಏಕ ಕಾನೂನು ಎಂದಿದ್ದರು. ಈಗ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಬೇಕಾಗಿದೆ ಎಂದರು. “ಎಲ್ಲ ಪೂಜ್ಯ ಸಂತರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು, ಪ್ರೀತಿಯ ಸಹೋದರ ಸಹೋದರಿಯರೇ ಪ್ರೀತಿಪೂರ್ವಕ ನಮಸ್ಕಾರಗಳು’ ಎಂಬ ಶುದ್ಧ ಕನ್ನಡದ ವಾಕ್ಯಗಳನ್ನು ಬಾಬಾ ರಾಮದೇವ್ ಪ್ರಾರಂಭದಲ್ಲಿ ನುಡಿದರು.