Advertisement

ಕಾರು ಢಿಕ್ಕಿ: ಬೈಕ್‌ ಸವಾರನಿಗೆ ಗಾಯ

11:16 PM Mar 06, 2023 | Team Udayavani |

ಉಡುಪಿ: ಕಾರು ಢಿಕ್ಕಿ ಹೊಡೆದು ಬೈಕ್‌ ಸವಾರ ಗಾಯಗೊಂಡ ಘಟನೆ ನಡೆದಿದೆ.

Advertisement

ಪೆರ್ಡೂರಿನ ಸುನಿಲ್‌ ಅವರು ಮಣಿಪಾಲ ಕಡೆಯಿಂದ ಪೆರ್ಡೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಅದೇ ಮಾರ್ಗವಾಗಿ ಕಾರು ಚಾಲಕ ಸತೀಶ್‌ ಅವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹೆರ್ಗ ಗ್ರಾಮದ ಪರ್ಕಳ ಹೈಸ್ಕೂಲ್‌ ಹತ್ತಿರ ರಾ.ಹೆ.ಯಲ್ಲಿ ತೀರಾ ಎಡಬದಿಗೆ ಬಂದು ಬೈಕ್‌ಗೆ ಢಿಕ್ಕಿ ಹೊಡೆದಿದ್ದಾರೆ.

ಗಾಯಾಳುವನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next