Advertisement

Udupi: ಆನ್‌ಲೈನ್‌ ವಂಚನೆ: ಲಕ್ಷಾಂತರ ರೂ. ಕಳೆದುಕೊಂಡ ಹಿರಿಯ ನಾಗರಿಕ

06:48 PM Aug 14, 2024 | Team Udayavani |

ಉಡುಪಿ: ಆನ್‌ಲೈನ್‌ ವಂಚಕರ ಆಮಿಷಕ್ಕೆ ಒಳಗಾದ ಹಿರಿಯ ನಾಗರಿಕರೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ನಡೆದಿದೆ.

Advertisement

ಉಪೇಂದ್ರ (72) ವಂಚನೆಗೆ ಒಳಗಾದವರು. ಇವರನ್ನು ಯಾರೋ ಅಪರಿಚಿತ ವ್ಯಕ್ತಿಗಳು ವಾಟ್ಸ್‌ ಆ್ಯಪ್‌ನಲ್ಲಿ ಮೋತಿಲಾಲ್‌ ಒಸ್ವಾಲ್‌ ಪ್ರೈವೇಟ್‌ ವೇಲ್ತ್ ಮ್ಯಾನೇಜ್ಮೆಂಟ್‌ ಗ್ರೂಪ್‌ಗೆ ಸೇರಿಸಿದ್ದಾರೆ. ಬಳಿಕ ಆ ಗ್ರೂಪಿನ ಐಕನ್‌ ನಿಂದ ಅಕೌಂಟ್‌ ನಂಬರ್ ನೀಡಿದ್ದಾರೆ. ಈ ವೇಳೆ ಅವರಿಗೆ ವಾಟ್ಸ್‌ ಆ್ಯಪ್‌ನಲ್ಲಿ ಟ್ರೇಡಿಂಗ್‌ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ, ಹೆಚ್ಚಿನ ಲಾಭಾಂಶದ ಆಸೆ ತೋರಿಸಿ, ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿದ್ದಾರೆ. ಇದನ್ನು ನಂಬಿದ ಅವರು ಆರೋಪಿಗಳು ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಜು. 4ರಿಂದ 24ರ ವರೆಗೆ ಹಂತ ಹಂತವಾಗಿ ಒಟ್ಟು 33,10,000 ರೂ.ಗಳನ್ನು ಡಿಪಾಸಿಟ್‌ ಮಾಡಿದ್ದಾರೆ. ಆದರೆ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನಾಗಲಿ ಈವರೆಗೆ ನೀಡದೇ ನಂಬಿಸಿ, ಮೋಸದಿಂದ ನಷ್ಟ ಉಂಟು ಮಾಡಿದ್ದಾರೆ.

ಈ ಕುರಿತಂತೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next