Advertisement

ಉಡುಪಿ: ಒಂದು ಸುತ್ತು ನೀರು ಪೂರೈಕೆ ಇಂದು ಪೂರ್ಣ

01:32 AM May 13, 2019 | sudhir |

ಉಡುಪಿ: ಸ್ವರ್ಣಾ ನದಿಯ ಹಿರಿಯಡಕ ಸಮೀಪದ ಬಜೆ ಅಣೆಕಟ್ಟಿನಿಂದ ಶೀರೂರುವರೆಗಿನ ದೊಡ್ಡ ಹಳ್ಳಗಳಲ್ಲಿ ಇರುವ ನೀರನ್ನು ಪಂಪ್‌ ಮೂಲಕ ಬಜೆ ಅಣೆಕಟ್ಟೆಗೆ ಹಾಯಿಸಿ ರವಿವಾರ ಕೂಡ 10 ಎಂಎಲ್‌ಡಿಯಷ್ಟು ನೀರನ್ನು ಉಡುಪಿ ನಗರಕ್ಕೆ ವಿತರಣ ಜಾಲದ ಮೂಲಕ ಪೂರೈಸಲಾಯಿತು. ನಗರಸಭೆಯಿಂದ 7 ಟ್ಯಾಂಕರ್‌ಗಳಲ್ಲಿಯೂ ನೀರು ವಿತರಣೆ ನಡೆಯಿತು.

Advertisement

ಒಂದು ಸುತ್ತು ಪೂರ್ಣ
ನಗರವನ್ನು 6 ವಿಭಾಗಗಳಾಗಿ ವಿಂಗಡಿಸಿ ಮೇ 6ರಿಂದ ದಿನವೂ ಒಂದೊಂದು ವಿಭಾಗಗಳಿಗೆ ಪೂರೈಸಲಾಗುತ್ತಿದ್ದು, ಸೋಮ ವಾರ ಒಂದು ಸುತ್ತು ಪೂರ್ಣಗೊಳ್ಳಲಿದೆ. ಸಾಮಾನ್ಯ ದಿನಗಳಲ್ಲಿ 24 ಎಂಎಲ್‌ಡಿ ನೀರನ್ನು ಬಜೆ ಡ್ಯಾಂನಿಂದ ಪಂಪ್‌ ಮಾಡಲಾಗುತ್ತಿತ್ತು. ಐದು ದಿನಗಳಿಂದ ದಿನಕ್ಕೆ 9ರಿಂದ 10 ಎಂಎಲ್‌ಡಿ ನೀರು ಮೇಲೆತ್ತಲಾಗುತ್ತಿದೆ. ರವಿವಾರ 10 ತಾಸುಗಳಿಗೂ ಅಧಿಕ ಕಾಲ ಪಂಪ್‌ ಮಾಡಲಾಯಿತು.

ಫ್ಲ್ಯಾಟ್‌, ಹೊಟೇಲ್‌ಗ‌ಳಿಂದ ಬೇಡಿಕೆ
ವಸತಿ ಸಂಕೀರ್ಣ, ಹೊಟೇಲ್‌, ಲಾಡ್ಜ್ಗಳಿಂದ ಬೇಡಿಕೆ ಅತಿಯಾಗಿದೆ ಎಂದು ಟ್ಯಾಂಕರ್‌ ನೀರು ಪೂರೈಕೆ ದಾರರು ತಿಳಿಸಿದ್ದಾರೆ. ನಗರಸಭೆಯಿಂದ ಪ್ರಸ್ತುತ ಕಾಲನಿಗಳು ಒಳಗೊಂಡಂತೆ ಮನೆಗಳಿಗೆ ನೀರು ಒದಗಿಸಲಾಗುತ್ತಿದೆ. ರವಿವಾರ ಮಂಚಿ, ಈಶ್ವರನಗರ, ಮೂಡಬೆಟ್ಟು, ಕಲ್ಮಾಡಿ, ಕೊಡವೂರು ಮೊದಲಾದೆಡೆ ನೀರು ಪೂರೈಸಲಾಯಿತು. ಮನೆಗಳಿಗೆ 500ರಿಂದ 1,000 ಲೀ. ನೀರು ಒದಗಿಸಿ ದರೆ ಸಾಕು. ಆದರೆ ವಸತಿ ಸಂಕೀರ್ಣಗಳ ಸಂಪ್‌ 40,000 ಲೀ.ಗಿಂತ ಹೆಚ್ಚು ಸಾಮರ್ಥ್ಯದವು. ಅವನ್ನು ತುಂಬಿಸುವುದು ಅಸಾಧ್ಯ ವಾದುದರಿಂದ ನಗರಸಭೆಯ ಟ್ಯಾಂಕರ್‌ಗಳು ಫ್ಲ್ಯಾಟ್‌ಗಳಿಗೆ ನೀರು ಒದಗಿಸುತ್ತಿಲ್ಲ. ಕೆಲವು ಲಾಡ್ಜ್ಗಳು ನೀರಿನ ತೀವ್ರ ಅಭಾವ ಎದುರಿಸುತ್ತಿವೆ ಎಂದು ತಿಳಿದುಬಂದಿದೆ.

ಟ್ಯಾಂಕರ್‌ ನೀರು ಪೂರೈಕೆಗೆ ನೀರಿನ ಮೂಲಗಳಿಗೆ ಕೊರತೆ ಇಲ್ಲ. ಆದರೆ ಪ್ರಸ್ತುತ ಮನೆಗಳಿಗೆ ನೀರು ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.

ಶ್ರಮದಾನ ತಾತ್ಕಾಲಿಕ ಅಂತ್ಯ
ರವಿವಾರ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಪಾಳಿಗಳ ಸುಮಾರು 150 ಮಂದಿಯ ಪಾಲ್ಗೊಳ್ಳುವಿಕೆಯಲ್ಲಿ ಬಜೆ ಪ್ರದೇಶದಲ್ಲಿ ಶ್ರಮದಾನ ಮುಂದುವರಿಯಿತು. ಶಾಸಕ ರಘುಪತಿ ಭಟ್‌ ಸ್ಥಳದಲ್ಲೇ ಇದ್ದು ಮಾರ್ಗದರ್ಶನ ನೀಡುವ ಜತೆಗೆ ತಾವೂ ಶ್ರಮದಾನ ನಡೆಸಿದರು. ಮಹಿಳೆಯರೂ ಪಾಲ್ಗೊಂಡಿದ್ದರು. ಹೆಚ್ಚಿನ ಕಡೆ ಇದ್ದ ತಡೆಯನ್ನು ತೆರವು ಮಾಡಿದ್ದೇವೆ.

Advertisement

ನೀರಿನ ಹರಿವು ಒಂದು ಹಂತಕ್ಕೆ ಸರಾಗ ವಾಗಿದೆ. ಶ್ರಮದಾನವನ್ನು ಸದ್ಯ ಕೊನೆ ಗೊಳಿಸುತ್ತೇವೆ. ಆದರೆ ಹಿಟಾಚಿ ಮೂಲಕ ಬಜೆ ಡ್ಯಾಂ ಬಳಿ ಹೂಳೆತ್ತುವ ಕೆಲಸ ಮುಂದುವರಿಯ ಲಿದೆ. ಮುಂದೆ ಮತ್ತೆ ಅಗತ್ಯ ಕಂಡುಬಂದರೆ ಶ್ರಮದಾನ ಮುಂದುವರಿಸುತ್ತೇವೆ. ಶ್ರಮದಾನದ ಮೂಲಕ ನೀರಿಗಾಗಿ ಸಾಮೂಹಿಕವಾಗಿ ಕೆಲಸ ಮಾಡಿದ್ದು ಉಡುಪಿಯ ಇತಿಹಾಸದಲ್ಲೇ ಪ್ರಥಮ. ಇದರಲ್ಲಿ ಪಾಲ್ಗೊಂಡ ಸಾರ್ವಜನಿಕರೆಲ್ಲರೂ ಅಭಿನಂದನಾರ್ಹರು ಎಂದು ಶಾಸಕ ಭಟ್‌ ಪ್ರತಿಕ್ರಿಯಿಸಿದ್ದಾರೆ.

2 ವಾರಕ್ಕೆ ಸಾಕು: ಡಿಸಿ
ಡಿಸಿ ಹೆಪ್ಸಿಬಾ ರಾಣಿ ರವಿವಾರವೂ ಪಂಪಿಂಗ್‌ ಸ್ಥಳಕ್ಕೆ ಭೇಟಿ ನೀಡಿದರು. ಎರಡು ವಾರಗಳಿಗೆ ಈಗ ಹಳ್ಳಗಳಲ್ಲಿ ಸಂಗ್ರಹವಾಗಿರುವ ನೀರು ಸಾಕಾಗ ಬಹುದು ಎಂದವರು ತಿಳಿಸಿದ್ದಾರೆ.

ಮಂಗಳೂರು ರೇಷನಿಂಗ್‌ ಪರಿಷ್ಕರಣೆ; 3 ದಿನ ನೀರಿಲ್ಲ
ಮಂಗಳೂರು: ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರು ಗಣನೀಯವಾಗಿ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಸದ‌Â ಜಾರಿಯಲ್ಲಿರುವ ನೀರು ಪೂರೈಕೆ ರೇಷನಿಂಗ್‌ ಅನ್ನು ರವಿವಾರದಿಂದ ಪರಿಷ್ಕರಿಸಲಾಗಿದೆ.

ಇದರಂತೆ ರವಿವಾರದಿಂದ ಮೂರು ದಿನ ನೀರು ಸರಬರಾಜು ಸ್ಥಗಿತಗೊಳ್ಳಲಿದ್ದು, ಬಳಿಕ ನಾಲ್ಕು ದಿನ ನೀರು ಸರಬರಾಜು ಇರಲಿದೆ. ಇಲ್ಲಿಯವರೆಗೆ ನಾಲ್ಕು ದಿನ ನೀರು ಮತ್ತು ಎರಡು ದಿನ ನಿಲುಗಡೆ ಇತ್ತು.
ತುಂಬೆ ಅಣೆಕಟ್ಟಿನಲ್ಲಿ ರವಿವಾರ ಬೆಳಗ್ಗೆ ನೀರಿನ ಮಟ್ಟ 3.97ಮೀ. ಇದ್ದು, ಸಂಜೆ 3.94ಮೀ.ಗೆ ಇಳಿದಿದೆ. ಇದೇ ರೀತಿ ಮುಂದುವರಿದರೆ ನಗರಕ್ಕೆ ನೀರು ಪೂರೈಕೆ ಇನ್ನಷ್ಟು ದುರ್ಭರವಾಗುವ ಸಾಧ್ಯತೆ ಇದೆ.

ಸಾರ್ವಜನಿಕರ ಸಹಕಾರ ಮುಖ್ಯ: ಖಾದರ್‌
ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರೇಷನಿಂಗ್‌ ನಿಯಮದಲ್ಲಿ ಪರಿಷ್ಕರಣೆ ಮಾಡುವ ಬಗ್ಗೆ ಜಿಲ್ಲಾಡಳಿತದ ಜತೆಗೆ ಚರ್ಚೆ ನಡೆಸಲಾಗಿತ್ತು. ಇದರಂತೆ ಜಿಲ್ಲಾಡಳಿತ ತೀರ್ಮಾನ ಕೈಗೊಂಡಿದೆ. ಶೀಘ್ರದಲ್ಲಿ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಬೇಕಿದೆ. ಸಾರ್ವಜನಿಕರು ರೇಷನಿಂಗ್‌ ನಿಯಮದಂತೆ ಪಾಲಿಕೆಯ ಜತೆಗೆ ಸಹಕರಿಸಬೇಕು ಎಂದು ಸಚಿವ ಯು.ಟಿ. ಖಾದರ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next