Advertisement

ಹಾಸನದೆಡೆಗೆ ಸಾಗುತ್ತಿದೆ ಉಡುಪಿ ನರ್ಮ್ ಬಸ್‌

08:15 PM Dec 04, 2021 | Team Udayavani |

ಉಡುಪಿ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಓಡಾಡುವ ಕೆಲವು ನರ್ಮ್ ಬಸ್‌ಗಳನ್ನು ಹಾಸನ ಜಿಲ್ಲೆಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

Advertisement

ಜಿಲ್ಲೆಯಲ್ಲಿ ಐದಾರು ವರ್ಷಗಳಿಂದ ನರ್ಮ್ ಬಸ್‌ ಸೇವೆ ನೀಡುತ್ತಿದ್ದು, ಕಾರ್ಕಳ, ಉಡುಪಿ, ಕುಂದಾಪುರ ಭಾಗದಲ್ಲಿ ನಗರ, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಅನುಕೂಲಕರ ಸಾರಿಗೆ ವ್ಯವಸ್ಥೆ ಎಂದು ಮೆಚ್ಚುಗೆ ಪಡೆದಿದೆ.

ಕೋವಿಡ್‌ ಬಳಿಕ ಜಿಲ್ಲೆಯ ಸಾರಿಗೆ ವ್ಯವಸ್ಥೆ (ಬಸ್‌) ಖಾಸಗಿ ಸಹಿತ ಸರಕಾರಿ ಬಸ್‌ಗಳು ನಷ್ಟಕ್ಕೆ ಸಿಲುಕಿದವು. ಲಾಕ್‌ಡೌನ್‌ ತೆರವುಗೊಂಡರೂ ಪರಿಸ್ಥಿತಿ ಸುಧಾರಿದ ಹಿನ್ನೆಲೆಯಲ್ಲಿ ಕೆಲವು ಬಸ್‌ಗಳನ್ನಷ್ಟೇ ರಸ್ತೆಗಿಳಿಸಲಾಯಿತು. ನವ ಕರ್ನಾಟಕ ಸಾರಿಗೆಯ ಕೆಲವೇ ಸಂಖ್ಯೆಯ ನರ್ಮ್ ಬಸ್‌ಗಳು ಸೇವೆ ನೀಡಿದ್ದು, ಜಿಲ್ಲೆಯಲ್ಲಿರುವ ಎಲ್ಲ 38 ರೂಟ್‌ಗಳಲ್ಲಿ ಸರ್ವಿಸ್‌ ಒದಗಿಸಲು ಸಾಧ್ಯವಾಗಿಲ್ಲ. ಪ್ರಯಾಣಿಕರ ಕೊರತೆಯಿಂದ ಎಲ್ಲ 45 ಬಸ್‌ಗಳನ್ನು ಓಡಿಸುವುದು ಸವಾಲಾಗಿತ್ತು. ಈಗಿದ್ದರೂ ಕೆಲವು ಕಡೆಗಳಲ್ಲಿ ಬಸ್‌ ಓಡಾಟಕ್ಕೆ ಅನುವು ಮಾಡಲಾಗಿದ್ದು, ಕೆಲವು ಕಡೆಗಳಲ್ಲಿ ಮಾತ್ರ ನರ್ಮ್ ಬಸ್‌ ಸಂಚರಿಸುತ್ತಿದೆ ಎನ್ನುತ್ತಾರೆ ಸ್ಥಳೀಯ ಅಧಿಕಾರಿಗಳು.

ನಗರದ ನರ್ಮ್ ಬಸ್‌ ನಿಲ್ದಾಣ ಕೇವಲ ಬಸ್‌ಗಳ ಪಾರ್ಕಿಂಗ್‌ಗೆ ಸೀಮಿತವಾಗಿದ್ದು, ಬಸ್‌ ನಿಲ್ದಾಣವಾಗಿ ಕಾರ್ಯಾಚರಿಸುತ್ತಿಲ್ಲ ಎಂದು ವಾಣಿಜ್ಯ ಸಂಕೀರ್ಣದ ವರ್ತಕರು ದೂರಿದ್ದಾರೆ. ಬಹುತೇಕ ಕಡೆಗಳಿಗೆ ಪ್ರಯಾಣಿಕರು ಬಸ್‌ಗೆ ಬರುತ್ತಾರೆ. ಆದರೆ ಇಲ್ಲಿ ಬಸ್‌ಗಳು ರೂಟ್‌ಗಳಿಗೆ ತೆರಳುವುದಿಲ್ಲ. ಈ ಹಿಂದೆ ಅಲೆವೂರು, ಮಣಿಪಾಲ, ಕೊರಂಗ್ರಪಾಡಿ ನಾಲ್ಕು ಬಸ್‌ಗಳು ಸಂಚರಿಸುತ್ತಿದ್ದವು. ಈಗ ಒಂದು ಬಸ್‌ ಸಹ ಸಂಚರಿಸುತ್ತಿಲ್ಲ. ಇಲ್ಲಿರುವ ಹೆಚ್ಚುವರಿ ಬಸ್‌ಗಳನ್ನು ಹೊರ ಜಿಲ್ಲೆಗೆ ಕಳುಹಿಸುವ ತಂತ್ರವು ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಭಾಗಕ್ಕೆ ಬಸ್‌ ಸೌಲಭ್ಯ ಕಲ್ಪಿಸಿ :

Advertisement

ಜಿಲ್ಲೆಯ ಕಾರ್ಕಳ, ಉಡುಪಿ ಗ್ರಾಮಾಂತರ, ಕುಂದಾಪುರ ಭಾಗದಲ್ಲಿ ಕೆಲವು ಕಡೆಗಳಲ್ಲಿ ಸರಕಾರಿ, ಖಾಸಗಿ ಬಸ್‌ಗಳು ಸಂಚರಿಸುತ್ತಿಲ್ಲ. ಮುಖ್ಯವಾಗಿ ಈ ಭಾಗದಲ್ಲಿ ಸರಕಾರಿ ಬಸ್‌ಗಳು ಸಂಚರಿಸಲು ವ್ಯವಸ್ಥೆ ಮಾಡಬೇಕು. ಈಗ ಖಾಲಿ ಇರುವ ಬಸ್‌ಗಳನ್ನು ಹಾಸನ, ಶಿವಮೊಗ್ಗದ ಬದಲು ಜಿಲ್ಲೆಯಲ್ಲಿಯೇ ಉಳಿಸಿಕೊಂಡು ಸೇವೆ ನೀಡಲು ಜನರು ಒತ್ತಾಯಿಸಿದ್ದಾರೆ. ಇಂಧನ ದರ ಏರಿಕೆಯಾದಾಗ ಸರಕಾರಿ ಬಸ್‌ ಗ ಳ ಟಿಕೆಟ್‌ ದರ ಹೆಚ್ಚಿಸಿರಲಿಲ್ಲ. ಪ್ರಸ್ತುತ ಅದೇ ದರದಲ್ಲಿ ಟಿಕೆಟ್‌ಗಳನ್ನು ನೀಡುತ್ತಿರುವ ಸರಕಾರಿ ಬಸ್‌ಗಳನ್ನು ಗ್ರಾಮೀಣ ಭಾಗದಲ್ಲಿ ಹೆಚ್ಚು ಓಡಿಸುವಂತೆ ಜನರು ಆಗ್ರಹಿಸಿದ್ದಾರೆ.

ಕಳೆದ ಮಳೆಗಾಲದಲ್ಲಿ ಚಾರ್ಮಾಡಿ ಘಾಟಿ ಕುಸಿತಗೊಂಡು ಬಂದ್‌ ಆಗಿದ್ದ ಸಂದರ್ಭ ಧರ್ಮಸ್ಥಳ, ಚಿಕ್ಕಮಗಳೂರು ರೂಟ್‌ಗೆ ದೊಡ್ಡ ಬಸ್‌ಗಳ  ಓಡಾಟ ಅಸಾಧ್ಯವಾಗಿತ್ತು, ಶಿವಮೊಗ್ಗ, ಹಾಸನ ಸಹಿತ ಅಕ್ಕಪಕ್ಕದ ವಿಭಾಗದಿಂದ ಕೆಲವು ಮಿನಿ ಬಸ್‌ಗಳನ್ನು ತರಿಸಲಾಗಿತ್ತು. ಇದರಲ್ಲಿ ಮೂರ್ನಾಲ್ಕು ಬಸ್‌ಗಳನ್ನು ಕಳುಹಿಸಿಕೊಡಲಾಗುತ್ತಿದೆ. ಅಗತ್ಯ ಇರುವಲ್ಲಿ ಹೆಚ್ಚುವರಿ ಬಸ್‌ಗಳನ್ನು ಇನ್ನೊಂದು ವಿಭಾಗದಿಂದ ತರಿಸುವುದು, ಕಳುಹಿಸುವ ಪ್ರಕ್ರಿಯೆ ಸಾಮಾನ್ಯವಾಗಿರುತ್ತದೆ. ಕಮಲ್‌ಕುಮಾರ್‌, ಕೆಎಸ್‌ಅರ್‌ಟಿಸಿ, ವಿಭಾಗೀಯ ಸಂಚಾರ ಅಧಿಕಾರಿ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next