Advertisement

Udupi Nejar Case; ಗುಂಪು ಕಟ್ಟಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ : ಪ್ರಕರಣ ದಾಖಲು

05:19 PM Nov 17, 2023 | Team Udayavani |

ಉಡುಪಿ/ಮಲ್ಪೆ: ನೇಜಾರಿನಲ್ಲಿ ನಾಲ್ವರ ಹತ್ಯೆಗೈದ ಆರೋಪಿ ಪ್ರವೀಣ್‌ ಚೌಗಲೆಯನ್ನು ಪೊಲೀಸರು ಗುರುವಾರ ಸ್ಥಳ ಮಹಜರಿಗಾಗಿ ಕೃತ್ಯ ಎಸಗಿದ ನೇಜಾರಿನ ಮನೆಗೆ ಕರೆತಂದ ವೇಳೆ 30 ರಿಂದ 40 ಜನರು ಗುಂಪು ಕಟ್ಟಿಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

ವಾಪಸ್‌ ಹೋಗುವ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಆರೋಪಿಗೆ ಹಲ್ಲೆ ನಡೆಸಲು ಮುಂದಾದಾಗ ಪೊಲೀಸರು ಲಘು ಲಾಠಿ ಚಾರ್ಜ್‌ ನಡೆಸಿದ್ದರು.

ಆರೋಪಿಯನ್ನು ವಾಹನದಿಂದ ಕೆಳಗೆ ಇಳಿಸುತಿದ್ದಂತೆಯೆ ಮಾಧ್ಯಮದವರ ಮುಂದೆ ಅಲ್ಲಿ ಸೇರಿದ್ದ 100 ರಿಂದ 200 ಜನ ಸಾರ್ವಜನಿಕರು ಗಲ್ಲಿಗೇರಿಸಿ ಗಲ್ಲಿಗೇರಿಸಿ ಪ್ರವೀಣ್‌ ನನ್ನು ಗಲ್ಲಿಗೇರಿಸಿ ಎಂದು ಘೋಷಣೆಯನ್ನು ಕೂಗಿದ್ದರು. ತನಿಖೆ ಪ್ರಕ್ರಿಯೆ ಮುಗಿಸಿ ಆರೋಪಿತನನ್ನು ಇಲಾಖಾ ವಾಹನದಲ್ಲಿ ಕುಳ್ಳಿರಿಸಿ ಹೊರಡುವ ಹೊತ್ತಿಗೆ ಸುಮಾರು 30 ರಿಂದ 40 ಜನ ಸಾರ್ವಜನಿಕರು ಆರೋಪಿತನನ್ನು ನಮಗೆ ಕೊಡಿ ಇಲ್ಲಿಯೇ ಶಿಕ್ಷೆ ನೀಡುತ್ತೇವೆ ಎಂದು ಇಲಾಖಾ ವಾಹನವನ್ನು ಅಡ್ಡ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ವೇಳೆ ಕೆಎಸ್ಆರ್ ಪಿ ಕಾನ್ಸ್ಟೇಬಲ್ ಒಬ್ಬರು ಆಯ ತಪ್ಪಿ ಚರಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಲಾಗಿದೆ.

”ನಾವು ಗಲಭೆ ನಡೆಸಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಿದ್ದೇವೆ. ಪ್ರೇರೇಪಿಸಿದವರ ಮೇಲೆ ಮಾತ್ರ ಕ್ರಮ ಕೈಗೊಳ್ಳಲಾಗುವುದು. ವೀಕ್ಷಿಸುತ್ತಿದ್ದ ಸ್ಥಳೀಯ ಸಾರ್ವಜನಿಕರ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ” ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಭ್ರಮ : ಪ್ರಕರಣ ದಾಖಲು
ನಾಲ್ವರ ಹತ್ಯೆಗೆ ಸಂಭ್ರಮ ವ್ಯಕ್ತಪಡಿಸಿರುವ ಕಿಡಿಗೇಡಿಗಳು ಹಿಂದೂ ಮಂತ್ರ ಎಂಬ ಇನ್ಸ್ಟಾಗ್ರಾಂ ಪುಟದಲ್ಲಿ ಸಂದೇಶ ಹರಿಯಬಿಟ್ಟಿರುವ ಬಗ್ಗೆ ಉಡುಪಿ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next