ಉಡುಪಿ: ಉಡುಪಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಅವರ ಕೊರಂಗ್ರಪಾಡಿಯಲ್ಲಿರುವ ನಿವಾಸ, ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಐಷಾರಾಮಿ ಕಾರು, ಚಿನ್ನಾಭರಣ, ಬೆಲೆಬಾಳುವ ಪೀಠೊಪಕರಣಗಳು, ಲಕ್ಷಾಂತರ ರೂ. ನಗದು ಹಾಗೂ ಹೊರಜಿಲ್ಲೆಯಲ್ಲಿರುವ ನಿವೇಶನಗಳಿಗೆ ಸಂಬಂಧಿಸಿದ ದಾಖಲೆ ಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಳಗ್ಗೆ ಆರಂಭಗೊಂಡ ಕಾರ್ಯಾಚರಣೆ ತಡರಾತ್ರಿ ವರೆಗೂ ಮುಂದುವರಿದಿತ್ತು. ಗುರುವಾರವೂ ಬ್ಯಾಂಕ್ ದಾಖಲೆ ಹಾಗೂ ಲಾಕರ್‌ಗಳ ಪರಿಶೀಲನೆ ನಡೆಯಲಿದೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎ. ಸೈಮನ್ ಮಾರ್ಗದರ್ಶನದಲ್ಲಿ ಉಡುಪಿ ಲೋಕಾಯುಕ್ತ ಡಿವೈಎಸ್‌ಡಿ ಕೆ.ಸಿ. ಪ್ರಕಾಶ್, ಪೊಲೀಸ್ ಇನ್‌ಸ್ಪೆಕ್ಟರ್‌ಜಯರಾಮ ಗೌಡ, ಸಿಬಂದಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಮಂಗಳೂರಿನಲ್ಲಿ ಲೋಕಾಯುಕ್ತ ದಾಳಿ
ಮಂಗಳೂರು: ಬೆಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಯಾಗಿರುವ ನಿರಂಜನ್ ಅವರ ಮಂಗಳೂರಿನ ಪಂಪ್‌ವೆಲ್‌ನಲ್ಲಿರುವ ಅಪಾರ್ಟ್‌ಮೆಂಟ್ ಮತ್ತು ಅವರ ಪತ್ನಿಗೆ ಸೇರಿದ ಲ್ಯಾಬ್‌ಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಶೋಧ ನಡೆಸಿದ್ದಾರೆ.
Related Articles
ನಿರಂಜನ್ ಈ ಹಿಂದೆ ದ.ಕ. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾಗಿದ್ದರು.