Advertisement

Udupi: ಸಿಎಸ್‌ಆರ್‌ ನಿಧಿಗಳ ಸದುಪಯೋಗವಾಗಲಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

03:56 AM Dec 14, 2024 | Team Udayavani |

ಉಡುಪಿ: ಜಿಲ್ಲೆಯ 66 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್‌ ಸೌಲಭ್ಯ ಕಲ್ಪಿಸುವ ಮೂಲಕ ಎರಡು ಖಾಸಗಿ ಸಂಸ್ಥೆಗಳು ಜಿಲ್ಲೆಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿವೆ. ಎಲ್ಲ ಸಂಸ್ಥೆಗಳಲ್ಲಿಯೂ ಸಿಎಸ್‌ಆರ್‌ ನಿಧಿಯಿದ್ದು, ಅಗತ್ಯ ಇರುವೆಡೆ ಇದರ ಉಪಯೋಗವಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹೇಳಿದರು.

Advertisement

ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಲಾರ್‌ ಸಂಪರ್ಕ ಒದಗಿಸಿರುವ ಮಣಿಪಾಲ್‌ ಟೆಕ್ನಾಲಜೀಸ್‌ ಲಿ. ಮತ್ತು ಸೆಲ್ಕೋ ಫೌಂಡೇಶನ್‌ಗೆ ಗೌರವಾರ್ಥವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ “ಸೂರ್ಯ ನಮಸ್ಕಾರ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರಕಾರಿ ಶಾಲೆ, ಅಂಗನವಾಡಿಗಳ ವಿದ್ಯುತ್‌ ಬಿಲ್‌ ಕಟ್ಟುವುದೇ ಸಮಸ್ಯೆ ಎಂಬಂತಾಗಿದೆ. ಇಂತಹ ಸಂಸ್ಥೆಗಳು ಮುಂದಿನ ದಿನಗಳಲ್ಲಿ ಶಾಲೆಗಳಿಗೂ ಸೋಲಾರ್‌ ಅಳವಡಿಸುವ ಜತೆಗೆ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ಪುನರ್‌ನಿರ್ಮಾಣಕ್ಕೆ ಆದ್ಯತೆ ನೀಡಿದರೆ ಮತ್ತಷ್ಟು ಉಪಯೋಗವಾಗಲಿದೆ ಎಂದರು.
ಜಿ.ಪಂ. ಸಿಇಒ ಪ್ರತೀಕ್‌ ಬಾಯಲ್‌ ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ರೀತಿಯ ಅಭಿವೃದ್ಧಿಗಳು ನಡೆಯುತ್ತಿದ್ದು, ಈಗಾಗಲೇ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸೋಲಾರ್‌ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಅಭಿವೃದ್ಧಿಯಲ್ಲಿ ಉಡುಪಿ ರಾಜ್ಯದಲ್ಲಿಯೇ ಮೊದಲನೇ ಸ್ಥಾನದಲ್ಲಿ ಗುರುತಿಸುವಂತಾಗಿದೆ ಎಂದರು.

ಮಣಿಪಾಲ ಗ್ರೂಪ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಪ್ರಮೋದ್‌ ಫೆರ್ನಾಂಡಿಸ್‌ ಮಾತನಾಡಿ, ಮಣಿಪಾಲ ಟೆಕ್ನಾಲಜಿಸ್‌ ಸಂಸ್ಥೆಯ ಸಿಎಸ್‌ಆರ್‌ ನಿಧಿಯ ಮೂಲಕ ಪ್ರತೀವರ್ಷ ವಿವಿಧೆಡೆ ಅಗತ್ಯ ನೆರವು ನೀಡಲಾಗಿದೆ. ದೇಶ ವಿದೇಶಗಳಲ್ಲಿಯೂ ಶಾಖೆ ಹೊಂದಿರುವ ಮಣಿಪಾಲ ಸಂಸ್ಥೆ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಸಹಿತ ಹಲವಾರು ರೀತಿಯ ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದರು.

ಸೆಲ್ಕೋ ಫೌಂಡೇಶನ್‌ನ ಅಡಿಶನಲ್‌ ಜನರಲ್‌ ಮ್ಯಾನೇಜರ್‌ ಗುರುಪ್ರಕಾಶ್‌ ಶೆಟ್ಟಿ ಮಾತನಾಡಿ, ಜಿಲ್ಲೆಯನ್ನು ಮಾದರಿಯನ್ನಾಗಿಸಬೇಕೆಂಬ ನಿಟ್ಟಿನಲ್ಲಿ ಇಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

Advertisement

ಮಣಿಪಾಲ ಗ್ರೂಪ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಪ್ರಮೋದ್‌ ಫೆರ್ನಾಂಡಿಸ್‌, ಜನರಲ್‌ ಮ್ಯಾನೇಜರ್‌ ರೊನಾಲ್ಡ್‌ ಡಿ’ಸೋಜಾ, ಸೆಲ್ಕೋ ಸೋಲಾರ್‌ ಸಂಸ್ಥೆಯ ಅಡಿಶನಲ್‌ ಜನರಲ್‌ ಮ್ಯಾನೇಜರ್‌ ಗುರುಪ್ರಕಾಶ್‌ ಶೆಟ್ಟಿ, ಪ್ರಾದೇಶಿಕ ವ್ಯವಸ್ಥಾಪಕರಾದ ಸುರೇಶ್‌ ನಾಯಕ್‌, ಶೇಖರ್‌ ಶೆಟ್ಟಿ ಅವರನ್ನು ಜಿಲ್ಲಾಡಳಿತದ ವತಿಯಿಂದ ಸಮ್ಮಾನಿಸಲಾಯಿತು. ಫ‌ಲಾನುಭವಿಗಳಾದ ಅಕ್ಷತಾ ಹಾಗೂ ಪ್ರತ್ಯುಷ್‌ ಅವರಿಗೆ ಶ್ರವಣಯಂತ್ರವನ್ನು ಮಣಿಪಾಲ ಟೆಕ್ನಾಲಜಿಸ್‌ ಸಂಸ್ಥೆಯ ವತಿಯಿಂದ ನೀಡಲಾಯಿತು.

ಜಿಲ್ಲಾ ಮಲೇರಿಯಾ ರೋಗ ನಿಯಂತ್ರಣಾಧಿಕಾರಿ ಡಾಣ ಪ್ರಶಾಂತ್‌ ಭಟ್‌ ಅವರು ಸೋಲಾರ್‌ ಎನರ್ಜಿಯ ಬಗ್ಗೆ ಮಾಹಿತಿ ನೀಡಿದರು. ಪೆರ್ಣಂಕಿಲ ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾಣ ರವೀಂದ್ರ ಬೋರ್ಕರ್‌, ಕರ್ಜೆ ಪ್ರಾ.ಆ. ಕೇಂದ್ರ ವೈದ್ಯಾಧಿಕಾರಿ ಡಾಣ ಸವಿತಾ, ಕುಂಭಾಶಿ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾಣ ಶೋಭಾ ಅಭಿಪ್ರಾಯ ಹಂಚಿಕೊಂಡರು. ಜಿಲ್ಲಾ ಆರೋಗ್ಯಾಧಿಕಾರಿ ಡಾಣ ಐ.ಪಿ.ಗಡಾದ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಆರೋಗ್ಯ ನಿರೀಕ್ಷಕ ಸತೀಶ್‌ ರಾವ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next