Advertisement

ಉಡುಪಿ: ಹೆಡ್ ಕಾನ್ ಸ್ಟೇಬಲ್ ಆತ್ಮಹತ್ಯೆ ಪ್ರಕರಣ : ಎರಡು ಆಡಿಯೋ ಪೊಲೀಸ್‌ ವಶಕ್ಕೆ

09:39 PM May 02, 2022 | Team Udayavani |

ಉಡುಪಿ : ಕರ್ತವ್ಯದಲ್ಲಿದ್ದಾಗ ರೈಫ‌ಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್‌ಕಾನ್‌ಸ್ಟೆಬಲ್‌ ರಾಜೇಶ್‌ ಕುಂದರ್‌ ಅವರು ತಮ್ಮ ಸಹೋದ್ಯೋಗಿಗಳ ದೌರ್ಜನ್ಯದ ಬಗ್ಗೆ ಮೇಲಧಿಕಾರಿಗಳಿಗೆ ನೀಡಿರುವ ದೂರಿನ ಮೊಬೈಲ್‌ ವಾಯ್ಸ ರೆಕಾರ್ಡ್‌ಗಳು ಬಹಿರಂಗವಾಗಿವೆ.

Advertisement

ಒಂದನೇ ಆಡಿಯೋದಲ್ಲಿರುವಂತೆ ರಾಜೇಶ್‌ ಕುಂದರ್‌ ಹಿಜಾಬ್‌ ಗಲಾಟೆ ಸಂದರ್ಭ ಗಂಗೊಳ್ಳಿ ಠಾಣೆಗೆ ಕ್ಷಿಪ್ರ ದಾಳಿ ಪಡೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು. ಅವರ ಕೈಕೆಳಗೆ ಇಬ್ಬರು ಸಿಬಂದಿಯಾದ ಅಶ³ಕ್‌ ಮತ್ತು ಉಮೇಶ್‌ ಎಂಬವರು ಹೇಳದೆ ಕೇಳದೆ ಕರ್ತವ್ಯಕ್ಕೆ ಗೈರು ಹಾಜರಾಗಿದ್ದ ಬಗ್ಗೆ ರಾಜೇಶ್‌ ಕುಂದರ್‌ ಅವರು ಡಿಎಆರ್‌ ಹೆಡ್ ಕ್ವಾರ್ಟರ್ ಗೆ ಕರೆ ಮಾಡಿ ದೂರು ನೀಡಿದ್ದರು.

ಎರಡನೇ ಆಡಿಯೋದಲ್ಲಿ ದೂರು ನೀಡಿದ್ದಕ್ಕೆ ಆಶ್ಪಕ್ ಮತ್ತು ಉಮೇಶ್‌ ಅವರು ಸೇರಿ ಮಲಗಿದ್ದ ತನ್ನ ಮೇಲೆ ಹಲ್ಲೆ ನಡೆಸಿದ್ದು, ಅಲ್ಲಿಂದ ತಪ್ಪಿಸಿಕೊಂಡು ರಸ್ತೆಯಲ್ಲಿ ಬರೀ ಮೈಯಲ್ಲಿ ವಾಹನವಿಲ್ಲದೆ ನಡೆದುಕೊಂಡು ತೆರಳುತ್ತಿರುವುದಾಗಿ ತಿಳಿಸಿದ್ದಾರೆ. ಸೂಕ್ತ ಕ್ರಮ ವಹಿಸಲು ಕಂಟ್ರೋಲ್‌ ರೂಮ್‌ಗೆ ಮಾಹಿತಿ ನೀಡಿ ತನಗೆ ಸಹಾಯ ಮಾಡುವಂತೆ ತಿಳಿಸಿದ್ದರು. ಸಹಾಯ ಮಾಡದಿದ್ದರೆ ಬೇರೇನಾದರೂ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ : ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸಿದ ಬಿಜೆಪಿ ಶಾಸಕ

ಎರಡೂ ಆಡಿಯೋಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಆಡಿಯೋದಲ್ಲಿರುವ ಧ್ವನಿ ರಾಜೇಶ್‌ ಕುಂದರ್‌ ಅವರದ್ದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next