Advertisement

Udupi Harsha Showroom: ‘ಐಎಫ್ ಬಿ ಡೀಪ್‌ ಕ್ಲೀನ್‌’ ವಾಷಿಂಗ್‌ ಮೆಷಿನ್‌ ಬಿಡುಗಡೆ

12:59 PM Jun 10, 2023 | Team Udayavani |

ಉಡುಪಿ: ನಗರದ ಸಿಟಿ ಬಸ್‌ನಿಲ್ದಾಣ ಬಳಿಯ ಹರ್ಷ ಶೋರೂಂನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಐಎಫ್ಬಿ ಡೀಪ್‌ ಕ್ಲೀನ್‌’ ವಾಷಿಂಗ್‌ ಮೆಷಿನ್‌ ಅನ್ನು ಶುಕ್ರವಾರ ಸಂಸ್ಥೆಯ ನಿರ್ದೇಶಕ (ಆಪರೇಶನ್‌) ಅಶೋಕ್‌ ಕುಮಾರ್‌ ಬಿಡುಗಡೆಗೊಳಿಸಿದರು.

Advertisement

ಭಾರತದ ನಂ. 1 ಬ್ರ್ಯಾಂಡ್‌ ಆಗಿರುವ ಅತ್ಯಾಧುನಿಕ ತಂತ್ರಜ್ಞಾನ ದಿಂದ ಕೂಡಿದ ಐಎಪ್‌ಬಿ ಕಂಪೆನಿಯ ವಾಷಿಂಗ್‌ ಮೆಷಿನ್‌ ಅನ್ನು ಒಮ್ಮೆ ಖರೀದಿಸಿದರೆ 4 ವರ್ಷ ಬದಲಾವಣೆ ಮಾಡುವ ಅಗತ್ಯವಿರುವುದಿಲ್ಲ. ಈ ವಾಷಿಂಗ್‌ ಮೆಷಿನ್‌ ಉಪಯೋಗಿಸುವುದರಿಂದ ಸಮಯ, ನೀರು, ಡಿಟರ್ಜೆಂಟ್‌ ಉಳಿತಾಯ ಮಾಡಬಹುದು ಎಂದವರು ತಿಳಿಸಿದರು.

ಸ್ವದೇಶಿ ಉತ್ಪನ್ನವಾದ ಇದನ್ನು ಗ್ರಾಹಕರು ಖರೀದಿಸಿದರೆ ಹೆಚ್ಚು ಶ್ರಮ ಪಡದೆ ಬಳಸಬಹುದಾದ ಉತ್ತಮ ಸಾಧನವಾಗಿ ಉಪಯೋಗಕ್ಕೆ ಸಿಗಲಿದೆ ಎಂದು ಮಾರುಕಟ್ಟೆ ನಿರ್ದೇಶಕ ಹರೀಶ್‌ ಕುಮಾರ್‌ ಹೇಳಿದರು.

ಐಎಪ್‌ಬಿ ಕಂಪೆನಿಯ ಸೌತ್‌ ಬಿಸಿನೆಸ್‌ ಹೆಡ್‌ ಸೂರಜ್‌ ಮಾತನಾಡಿ, ಗ್ರಾಹಕರ ಇಚ್ಛೆಗೆ ಅನುಗುಣವಾದ ಉತ್ಕೃಷ್ಟ ಗುಣಮಟ್ಟದ ಗೃಹೋಪಕರಣಗಳನ್ನು ಹರ್ಷ ಸಂಸ್ಥೆ ಪೂರೈಸುವ ಮೂಲಕ ಜನರ ವಿಶ್ವಾಸ ಗಳಿಸಿದೆ. ಅಲ್ಲದೆ ಗ್ರಾಹಕಸ್ನೇಹಿ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಐಎಫ್ ಬಿ ಟ್ರೈನರ್‌ ವಿಜಯ ಕುಮಾರ್‌ ಅವರು, ಈ ವಾಷಿಂಗ್‌ ಮೆಷಿನ್‌ ಬಳಕೆಯಿಂದ ಶೇ. 40 ರಷ್ಟು ವಿದ್ಯುತ್‌ ಉಳಿತಾಯ, ಶೇ.25ರಿಂದ 30ರ ತನಕ ನೀರಿನ ಉಳಿತಾಯವಾಗಲಿದೆ. ಇದು ಭಾರತದ ಪ್ರಥಮ ಡೀಪ್‌ ಕ್ಲೀನ್‌ ಟೆಕ್ನಾಲಜಿ ಮೆಷಿನ್‌ ಆಗಿದ್ದು, ಪರಿಸರ ಸ್ನೇಹಿಯಾಗಿದೆ. ಯಾವ ಬಗೆಯ ಬಟ್ಟೆ, ಬಟ್ಟೆಯ ಗಾತ್ರ ಮತ್ತಿತರ ಎಲ್ಲ ಅಂಶಗಳನ್ನು ಗಮನಿಸಿ ಸ್ವಯಂ ಕಾರ್ಯನಿರ್ವಹಿಸುವ ಮೆಷಿನ್‌ ಇದಾಗಿದೆ ಎಂದರು.

Advertisement

ಹರ್ಷ ಸಂಸ್ಥೆಯ ನಿರ್ದೇಶಕ (ಇನ್‌ ಫ್ರಾಸ್ಟ್ರಕ್ಚರ್‌) ರಾಜೇಶ್‌ ಕೆ., ಎಜಿಎಂ (ಮರ್ಚಂಡೈಸ್‌) ರಮೇಶ್‌ ಕಲ್ಮಂಜೆ, ಹೆಡ್‌ ಆಫ್ ಆಪರೇಶನ್‌ ಸಮೃದ್ಧ್, ಮಾರುಕಟ್ಟೆ ಮುಖ್ಯಸ್ಥ ಅಭಿಷೇಕ್‌ ಎನ್‌. ರಾವ್‌, ಬ್ರ್ಯಾಂಚ್‌ ಮ್ಯಾನೇಜರ್‌ ಸ್ಟೀವನ್‌, ಹರ್ಷ ಹಾಗೂ ಐಎಫ್ಬಿ ಸಂಸ್ಥೆಯ ಸಿಬಂದಿ ಉಪಸ್ಥಿತರಿದ್ದರು.

ವಿಜೇಶ್‌ ತೇಜಸ್‌ ಪೂಜಾರಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next