Advertisement

ಹಾಡು ನೀ ಹಾಡು: ಪ್ರತೀ ಶನಿವಾರ, ರವಿವಾರ ಪ್ರಸಾರ

06:18 PM Jan 06, 2023 | Team Udayavani |

ಉಡುಪಿ: ಸಹಾಯಹಸ್ತ ಮಣಿಪಾಲ, ಲಯನ್ಸ್ ಚಾರಿಟೇಬಲ್ ಫೌಂಡೇಶನ್ ಪ್ರಾಯೋಜಕತ್ವದಡಿ “ಹಾಡು ನೀ ಹಾಡು” ಸೀಸನ್ ಒನ್ ಸಿಂಗಿಂಗ್ ರಿಯಾಲಿಟಿ ಶೋ ಆರಂಭಗೊಂಡಿದೆ.

Advertisement

ಕೋವಿಡ್ ಸಂದರ್ಭದಲ್ಲಿ ಆನ್ ಲೈನ್ ಮೆಂಟೋರಿಂಗ್ ಸೆಷನ್ ಗಳ ಮೂಲಕ ಸಂಗೀತ, ಶಿಸ್ತು, ಮಾನಸಿಕ ನೆಮ್ಮದಿ, ಯೋಗಾ ಭಾಷಾ, ಶುದ್ಧತೆ ಮುಂತಾದ ವಿಚಾರಗಳ ಬಗ್ಗೆ ಮಕ್ಕಳಿಗೆ ಕಲಿಕೆಯನ್ನು ಒದಗಿಸಿಕೊಡುವುದಲ್ಲದೆ, ಪಾಲಕರ, ವೀಕ್ಷಕರ ಮನಸ್ಸನ್ನು ಗೆಲ್ಲುವಲ್ಲಿಯೂ ಉಡುಪಿ ಶೈನಿಂಗ್ ಸ್ಟಾರ್ ಕಾರ್ಯಕ್ರಮ ಯಶಸ್ಸು ಕಂಡಿತ್ತು. ಆ ಯಶಸ್ಸಿನ ಬೆಂಬಲ ಮತ್ತು ಋಣಾತ್ಮಕ ಪ್ರತಿಕ್ರಿಯೆಯೇ ಸಹಾಯ ಹಸ್ತ ಮಣಿಪಾಲ ಲಯನ್ಸ್ ಕ್ಲಬ್ ಆಯೋಜಕತ್ವದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಮಕ್ಕಳಿಗಾಗಿ ಏರ್ಪಟ್ಟ “ಹಾಡು ನೀ ಹಾಡು ಕಾರ್ಯಕ್ರಮ ಪ್ರಸಾರವಾಗತೊಡಗಿದೆ.

ಕಾರ್ಯಕ್ರಮದಲ್ಲಿ 30 ಮಂದಿ ಮುದ್ದು ಪುಟಾಣಿ ಸ್ವರ ಗಾಯನ ಕೋಗಿಲೆಗಳಿಂದ ಹಾಡು ನೀ ಹಾಡು ಸಿಂಗಿಂಗ್ ಶೋ ಹೊಸ ಪ್ರತಿಭೆಗಳೊಂದಿಗೆ ಶುಭಾರಂಭಗೊಂಡಿದೆ.

ಹಾಡು ನೀ ಹಾಡು ಕಾರ್ಯಕ್ರಮ ವಿ4 ನ್ಯೂಸ್ ಚಾನೆಲ್ ನಲ್ಲಿ ಪ್ರತಿ ಶನಿವಾರ ಮತ್ತು ರವಿವಾರ ರಾತ್ರಿ 8ಗಂಟೆಗೆ ಪ್ರಸಾರವಾಗಲಿದೆ.  30 ಮುದ್ದು ಪುಟಾಣಿ ಸ್ವರಗಾಯನ ಕೋಗಿಲೆಗಳಿಂದ ಹಾಡು ನೀ ಹಾಡು ಸಿಂಗಿಂಗ್ ಶೋ ಹೊಸ ಪ್ರತಿಭೆಗಳಿಂದ ಶುಭಾರಂಭಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next