Advertisement

Udupi: ಗೀತಾರ್ಥ ಚಿಂತನೆ-66: ಮಕ್ಕಳ ಮೇಲೆ ತಂದೆತಾಯಿಯ ಮನೋಧರ್ಮ

01:24 AM Oct 17, 2024 | Team Udayavani |

ಪಾಂಡು ಮಕ್ಕಳನ್ನು ಬಯಸುವಾಗ ಧರ್ಮ ರಕ್ಷಣೆಯಾಗಬೇಕು ಎಂಬ ಗುರಿ ಹೊಂದಿದ್ದ. ಧರ್ಮ ರಕ್ಷಣೆಯಾಗಬೇಕಾದರೆ ಆಳುಗರಾದ ಕ್ಷತ್ರಿಯರ ಮನಃಸ್ಥಿತಿ ಹೇಗಿರಬೇಕು? ಇದಕ್ಕೇನಾಗಬೇಕೆಂದು ಯೋಚಿಸಿ ಫ್ಯಾಮಿಲಿ ಪ್ಲಾನಿಂಗ್‌ನಂತೆ ಮಕ್ಕಳನ್ನು ಪಡೆದ. ಮನೆಯೊಂದು ಸಂಪೂರ್ಣವಾಗಬೇಕಾದರೆ ಧಾರ್ಮಿಕ, ಪರಾಕ್ರಮಿ, ಬದಲಿ ವ್ಯವಸ್ಥೆಗೆ, ಮುದ್ದಾಟಕ್ಕೆ, ನೀತಿಗೆ ಹೀಗೆ ಐದು ತರಹದ ಮಕ್ಕಳಿರಬೇಕು.

Advertisement

ಕುಂತಿ ಗರ್ಭಿಣಿಯಾಗಿದ್ದಾಳೆಂದು ತಿಳಿದಾಗ ಗಾಂಧಾರಿಗೆ ಹೊಟ್ಟೆಕಿಚ್ಚು ಆಯಿತು. ಹೊಟ್ಟೆಯನ್ನು ಕಿವುಚಿಕೊಂಡಳು. ಗರ್ಭ ನೂರು ಭಾಗವಾಯಿತು. ವೇದವ್ಯಾಸರು ಬಂದು ಗರ್ಭವನ್ನು ಬದುಕುವಂತೆ ನೋಡಿಕೊಂಡರು. ಹೊಟ್ಟೆಕಿಚ್ಚಿನ ಹಿನ್ನೆಲೆಯಲ್ಲಿ ಕೌರವರು ಹುಟ್ಟಿದರು. ಇದೇ ಕಾರಣಕ್ಕೆ ಪಾಂಡವರ ಪ್ರಗತಿ ಸಹಿಸಲಾರದೆ ಕೌರವರು ಕೊಲ್ಲಲು ಯೋಚಿಸಿದರು. ಕೌರವರಲ್ಲಿ ಪ್ರತಿ ಹೆಜ್ಜೆಯಲ್ಲಿ ಹೊಟ್ಟೆಕಿಚ್ಚು ಕಾಣುತ್ತದೆ. ಪಾಂಡವರು ಹುಟ್ಟಿದ್ದೆ ಧರ್ಮರಕ್ಷಣೆಗೆ.

ತಮ್ಮದೇ ಹೆಂಡತಿಯ ಮಾನಭಂಗವಾದರೂ ಕ್ಷಮೆಯನ್ನು ಧರಿಸಿಕೊಂಡು ಸಹಿಸಿಕೊಂಡಿದ್ದರು. ಊಟದಲ್ಲಿ ವಿಷ ಹಾಕಿರುವುದು ಗೊತ್ತಾದರೂ ಸಹಿಸಿಕೊಂಡಿದ್ದರು. ಯಾವ ಮನಃಸ್ಥಿತಿಯಲ್ಲಿ ಮಕ್ಕಳು ಹುಟ್ಟುತ್ತಾರೋ ಅದೇ ರೀತಿ ಬೆಳೆಯುತ್ತಾರೆ. ಕೌರವರಲ್ಲಿ ಗಾಂಧಾರಿಯ ಅಸೂಯೆ ಮಾತ್ರ ಇದ್ದದ್ದಲ್ಲ, ಧೃತರಾಷ್ಟ್ರನ ಮೋಹವೂ ಇತ್ತು. ತಂದೆತಾಯಿಗಳ ಮನಃಸ್ಥಿತಿಯೇ ಮಕ್ಕಳ ಮೇಲೆ ಇರುತ್ತದೆ.

-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ
ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next