“ಜನಾಧಿಪಾ’ ಶಬ್ದಕ್ಕೆ ಸೈನಿಕರಿಗೆ ದುಃಖ ಕೊಡುವವರು ಎಂಬರ್ಥವಿದೆ. ಆಧಿ= ಮನೋವ್ಯಥೆ ಕೊಡುವವರು. ಇವರೆಲ್ಲರೂ ಶಾಶ್ವತರೇ. “ದೇಹನಾಶವಾಗುತ್ತದೇನೋ ಹೌದು. ಈಗಲೇ ನಾಶ ಏಕೆ ಮಾಡಬೇಕು’ ಎಂಬ ಪ್ರಶ್ನೆಗೆ “ದೇಹ ನಾಶವಾಗಬೇಕೆಂದು ನನ್ನ ಸಂಕಲ್ಪವಾಗಿದೆ. ನಾವು ಈಗ ಕೊಲುತ್ತಿದ್ದೇವೆ ಎಂದು ತಿಳಿದುಕೊಂಡದ್ದೇ ತಪ್ಪು’ ಎನ್ನುವುದು ಕೃಷ್ಣನ ಉತ್ತರ. ಮುಂದಿನ ತನಕ ಅವಧಿ ಇದೆ ಎಂದು ತಿಳಿದದ್ದು ಹೇಗೆ? ಅಪಮೃತ್ಯು ಎನ್ನುವುದನ್ನು ಕೇಳುತ್ತೇವೆ. ಇದು ನಮ್ಮ ದೃಷ್ಟಿ. ಭಗವಂತನ ದೃಷ್ಟಿಯಲ್ಲಲ್ಲ. ಪ್ರಶ್ನೆಪತ್ರಿಕೆ ಮೊದಲೇ ತಯಾರಾಗಿದೆ. ನಾವು ಸಮಗ್ರ ಓದಲಿಲ್ಲವೆಂದು ಪ್ರಶ್ನೆ ಪತ್ರಿಕೆ ಬದಲಾಗುವುದಿಲ್ಲ.
ದೇವರ ಸಂಕಲ್ಪವಿಲ್ಲದೆ ಯಾವುದೂ ಆಗುವುದಿಲ್ಲ. ಈಗ ಮುಂದೆ ಏನಾಗುತ್ತದೆ ಎಂದು ಗೊತ್ತಿಲ್ಲದಿರುವುದರಿಂದ ದುಃಖವಾಗುವುದು. ದುಃಖಕ್ಕೆ ಕಾರಣ ಹಿಂದಿನದು ಗೊತ್ತಿಲ್ಲದೆ ಇರುವುದು, ಈಗಿನ ಸ್ಥಿತಿಯೇ ಶಾಶ್ವತ ಎಂದು ತಿಳಿಯುವುದಾಗಿದೆ. ಎಲ್ಲ ಸ್ಥಿತಿಯೂ ಬದಲಾಗುತ್ತದೆ ಎಂದು ತಿಳಿದಾಗ ದುಃಖವಿರದು. ಒಳ್ಳೆಯದಾಗಲೀ, ಕೆಟ್ಟದಾಗಲೀ ಶಾಶ್ವತವಲ್ಲ. ಯೌವ್ವನ, ಕೌಮಾರ್ಯವೆಂದು ತಿಳಿಯದೆ ಸ್ಥಿತ್ಯಂತರದಲ್ಲಿ ನೋಡಬೇಕು.
“ತೇನ ವಿನಾ ತೃಣಮಪಿ ನ ಚಲತಿ’ ಎಂಬ ಪ್ರಸಿದ್ಧ ಉಕ್ತಿ ಕೇಳಿರಬಹುದು. ಆತನ ಸಂಕಲ್ಪ ಅನಾವರಣಗೊಳಿಸುವುದೇ ಕರ್ತವ್ಯ. ಹೀಗಾಗಿ ಅರ್ಜುನನಿಗೆ ಖಾಸಗಿಯಾಗಿ ಹೇಳಿದ್ದಾದರೂ ಜನರ ಗೊಂದಲಕ್ಕೂ ಉತ್ತರ ತಿಳಿಸುವುದು ವೇದವ್ಯಾಸ ದೇವರ ಸಂಕಲ್ಪ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811