Advertisement

Udupi: ಗೀತಾರ್ಥ ಚಿಂತನೆ-119: ಆತ್ಮ-ಮನಸ್ಸು ಪತಿಪತ್ನಿಯಂತೆ

08:23 PM Dec 09, 2024 | Team Udayavani |

ಯಾವುದೇ ವಿಷಯಗಳು ಸುಖ, ದುಃಖಗಳಿಗೆ ಕಾರಣವಲ್ಲ. “ಧೀರಸ್ತತ್ರ ನ ಮುಹ್ಯತಿ’- ತನ್ನ ಮನಸ್ಸಿನಲ್ಲಿ ರಮಿಸುತ್ತಿದ್ದರೆ ಸುಖ. ಮನಸ್ಸು ಸಹಕರಿಸದಿದ್ದರೆ ದುಃಖ. ನಿದ್ರೆ ಮಾಡಬೇಕೆನ್ನುವಾಗ ನಿದ್ರೆ ಮಾಡಬೇಕು, ಮಾಡಬಾರದೆನ್ನುವಾಗ ನಿದ್ರೆ ಬರುವಂತಿರಬಾರದು. ಅಹಂಕಾರವನ್ನು ಬಿಟ್ಟರೆ ಮನಸ್ಸು ಸಹಕಾರ ಕೊಡುತ್ತದೆ.

Advertisement

ಆತ್ಮ ಮನಸ್ಸುಗಳೇ ಗಂಡ ಹೆಂಡತಿ. ಮನಸ್ಸು ಹೆಂಡತಿ, ಆತ್ಮ ಗಂಡ. ಅವರಿಬ್ಬರಲ್ಲಿ ಏಕಾಭಿಪ್ರಾಯವಿಲ್ಲದಿದ್ದರೆ ದುಃಖ. ಎಷ್ಟೇ ಐಶ್ವರ್ಯವಿದ್ದರೂ ಸುಖ ಸಿಗಬೇಕೆಂದಿಲ್ಲ. ಬಡತನದಲ್ಲೂ ಸುಖ ಬರಬಹುದು. ಗಂಡ ಹೆಂಡತಿಯ ಏಕಾಭಿಪ್ರಾಯವೇ ಸುಖ. ಬುದ್ಧಿ, ಆತ್ಮಗಳಲ್ಲಿ ಏಕಾಭಿಪ್ರಾಯವಿದ್ದರೆ ಸುಖ. ಜನನಮರಣಾದಿಗಳು ಸುಖದುಃಖಗಳಿಗೆ ಕಾರಣವಲ್ಲ, ಅಂತಿಮವಾಗಿ ಸುಖದುಃಖವಿರುವುದು ನಮ್ಮ ಜತೆಗೆ ನಮ್ಮ ಮನಸ್ಸನ್ನು ಕರೆದುಕೊಂಡು ಹೋಗುವುದರಲ್ಲಿ. ಯಾರ ಮನಸ್ಸು ಅವರ ಜತೆಗೆ ಇರುವುದಿಲ್ಲ ಅವರಿಗೆ ದುಃಖ. ಮನಸ್ಸಿಗೆ ಒಪ್ಪಿಸಿದರೆ, ಮನದಟ್ಟು ಮಾಡಿದರೆ ಒಳ್ಳೆಯ ಫ‌ಲಿತಾಂಶ ಸಿಗುತ್ತದೆ.

ಒಳಗಿನ ಆತ್ಮ, ಮನಸ್ಸುಗಳು ಹೇಗೆ ಗಂಡ ಹೆಂಡತಿಯೋ ಹಾಗೆ ಹೊರಗೆ ಕಾಣುವುದು ಲೋಕದಲ್ಲಿರುವ ಗಂಡ ಹೆಂಡತಿ. ದುಃಖದಲ್ಲಿಯೂ ಸಾತ್ವಿಕ, ರಾಜಸ, ತಾಮಸ ಎಂಬ ವಿಧಗಳಿವೆ. ಮೋಹ ತಾಮಸಿಕ ದುಃಖ. ಸಾಧನೆ ಮಾಡಲು ಆಗುವುದಿಲ್ಲ, ಕೇವಲ ಇನ್ನೊಬ್ಬರಿಗೆ ಭಾರವಾಗಿರಬೇಕು ಎಂಬ ಕಾರಣಕ್ಕೆ ಶರಭಂಗ ಆತ್ಮಹತ್ಯೆ ಮಾಡಿಕೊಂಡ. ಇದು ಸಾತ್ವಿಕ ದುಃಖ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement
Advertisement

Udayavani is now on Telegram. Click here to join our channel and stay updated with the latest news.

Next