ನಮಗೆ ಎಷ್ಟೋ ಬಾರಿ ದೇವರ ಇಚ್ಛೆ ಏನೆಂದು ಗೊತ್ತಿರುವುದಿಲ್ಲ. ಆತನ ಇಚ್ಛೆ ಗೊತ್ತಿರುವಾಗ ಒಂದು ಧರ್ಮ, ಗೊತ್ತಿಲ್ಲದಿರುವಾಗ ಒಂದು ಧರ್ಮ ಬೇಕು. ಸಂದಿಗ್ಧತೆ ಇರುವಾಗ ಒಂದು ಧರ್ಮ ಬೇರೆ ಇದೆ. ಬರೆಯುವುದು ಕೆಲವೇ ಪ್ರಶ್ನೆಗಳಿಗಾದರೂ ಪರೀಕ್ಷೆ ಕಾಲದಲ್ಲಿ ಎಲ್ಲವನ್ನೂ ಓದಬೇಕು. ದೇವರಿಚ್ಛೆ ಗೊತ್ತಿಲ್ಲದಿರುವಾಗ ಎಲ್ಲ ಆಯಾಮಗಳಲ್ಲಿ ಕಾರ್ಯನಿರ್ವಹಿಸಬೇಕು. ಏನು ಮಾಡಿದರೂ ಉಳಿಸಲು ಸಾಧ್ಯವಿಲ್ಲದಿರುವಾಗ ದುಃಖ ಬರುವುದಿಲ್ಲ. ಶ್ರೀಕೃಷ್ಣ ಹೇಳುತ್ತಾನೆ: “ಏನು ಆಗಬೇಕೋ ಅದೆಲ್ಲವೂ ಆಗುತ್ತದೆ. ನೀನು ನಿನ್ನ ಕರ್ತವ್ಯವನ್ನು ಆ ಹೊತ್ತಿಗೆ ಮಾಡಿದ್ದಿಯಾ?’.
ನಿಜವಾದ ಸಮಸ್ಯೆ ಇರುವುದು ನಮ್ಮ ಕರ್ತವ್ಯವನ್ನು ಮಾಡುತ್ತೇವೆಯೋ? ಇಲ್ಲವೋ ಎನ್ನುವುದು. “ನಾನು ನನ್ನ ಕರ್ತವ್ಯವನ್ನು ಸರಿಯಾಗಿ ಮಾಡಲಿಲ್ಲ. ಇನ್ನೊಮ್ಮೆ ಅವಕಾಶ ಸಿಕ್ಕಿದರೆ ಮಾಡುತ್ತೇನೆ’ ಎಂಬ ದುಃಖ ಉಂಟಾಗಿದ್ದರೆ ಸಾತ್ವಿಕ ದುಃಖ. ಇದರಿಂದ ಆತ್ಮವಿಕಾಸ ಸಾಧ್ಯವಾಗುತ್ತದೆ. ದೇವರು ನಮ್ಮ ಉದ್ಧಾರಕ್ಕಾಗಿ ಸಾಧನ ಶರೀರವನ್ನು ಕೊಟ್ಟು ಕರ್ತವ್ಯ ನಿರ್ವಹಿಸಿ ಪುಣ್ಯ ಗಳಿಸಲಿಕ್ಕೆ ಅವಕಾಶ ಮಾಡಿಕೊಟ್ಟಿದ್ದಾನೆ.
ಮಗ ಜಿಲ್ಲಾಧಿಕಾರಿಯಾಗಿದ್ದು ತಂದೆ ಎಸ್‌ಐ ಆಗಿದ್ದರೆ ಜಿಲ್ಲಾಧಿಕಾರಿಗೆ ಎಸ್‌ಐ ಸೆಲ್ಯುಟ್ ಹೊಡೆಯಲೇಬೇಕು. ಇದು ಕರ್ತವ್ಯ. ನನ್ನ ಆದೇಶವನ್ನು ಪಾಲಿಸುವುದು ಪುಣ್ಯ, ಉಲ್ಲಂಘಿಸುವುದು ಪಾಪ ಎಂದು ಶ್ರೀಕೃಷ್ಣ ಹೇಳುತ್ತಾನೆ. ಮನಸ್ಸಿನಲ್ಲಿಯೂ ದೇವರ ಇಚ್ಛೆಗೆ ವಿರುದ್ಧವಾಗಿರಬಾರದು ಎನ್ನುವುದು “ಅಗಾತಸೂನ್’ ಎಂಬ ಶ್ರೀಕೃಷ್ಣನ ಸಂದೇಶ.
-ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,ಉಡುಪಿ ಸಂಪರ್ಕ ಸಂಖ್ಯೆ: 8055338811