Advertisement

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

08:00 AM May 26, 2024 | Team Udayavani |

ಉಡುಪಿ: ಜಿಲ್ಲೆಯ ನಗರ, ಗ್ರಾಮಾಂತರ ಭಾಗದಲ್ಲಿ ಪೊಲೀಸ್‌ ವಾಹನಗಳ ಗಸ್ತು ತಿರುಗುವುದು ಇತ್ತೀಚೆಗೆ ಕಡಿಮೆ. ಇದರಿಂದ ರಾತ್ರಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಗ್ಯಾಂಗ್‌ವಾರ್‌ ಇನ್ನಷ್ಟು ಭಯ ಹುಟ್ಟಿಸಿದೆ.

Advertisement

ಹಿಂದೆ ಪೊಲೀಸ್‌ ಬೀಟ್‌ ಅಚ್ಚುಕಟ್ಟಾಗಿ ನಡೆಯುತ್ತಿತ್ತು.ನಗರ, ಗ್ರಾಮೀಣ ಭಾಗದ ಕೆಲವು ಪ್ರದೇಶಗಳನ್ನು ಪೊಲೀಸರಲ್ಲಿ ಗುಂಪುಗಳನ್ನು ಮಾಡಿ ಪಾಳಿವಾರು ಹಂಚಿಕೆ ಮಾಡಲಾಗುತ್ತಿತ್ತು. ಅಷ್ಟು ಮಾತ್ರವಲ್ಲದೆ ತಮ್ಮ ವ್ಯಾಪ್ತಿಯಲ್ಲಿ ಗಸ್ತು ಹೋದ ಸಂದರ್ಭದಲ್ಲಿ ಆಯಾ ಪ್ರದೇಶದ ಹೊಟೇಲ್‌, ಅಂಗಡಿ ಅತ್ಯಾದಿ ನಿರ್ದಿಷ್ಟ ತಾಣಗಳಲ್ಲಿ ಪುಸ್ತಕಕ್ಕೆ ಸಹಿಹಾಕಿ ಬರುವ ವ್ಯವಸ್ಥೆ ಇತ್ತು. ಇದರಿಂದ ಪೊಲೀಸರೂ ತಪ್ಪದೇ ಗಸ್ತು ಹೋಗುತ್ತಿದ್ದರು. ಸ್ಥಳೀಯವಾಗಿ ಯೂ ಒಂದಿಷ್ಟು ಅಲರ್ಟ್‌ ಆಗು ತ್ತಿತ್ತು. ಆದರೆ ಈಗ ಆ ವ್ಯವಸ್ಥೆ ಕಡಿಮೆಯಾಗಿದೆ. ಆದ್ದರಿಂದ ಇಂಥಹ ಘಟನೆ ನಡೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು.

ಈಗ ಬೀಟ್‌ಗೆ ಹೋಗುವ ಪೊಲೀಸರು ಆ್ಯಪ್‌ ಮೂಲಕ ಅಪ್‌ಡೇಟ್‌ ಮಾಡಬೇಕು. ಅನೇಕ ಕಡೆ ವಾಹನದೊಳಗೆ ಕುಳಿತು ಅಥವಾ ಕೆಲವರು ಸ್ಥಳಕ್ಕೆ ಭೇಟಿ ನೀಡದೆಯೂ ಅಪ್‌ಡೇಟ್‌ ಮಾಡುತ್ತಾರೆ ಎನ್ನುವ ಆರೋಪವೂ ಇದೆ. ಗಸ್ತು ವಾಹನ ಸುತ್ತಾಟವೂ ಬಹಳ ಕಡಿಮೆಯಾಗಿದೆ. ಸಿಸಿಟಿವಿ ಅಳವಡಿಕೆ ಕೆಲವಡೆ ಇದ್ದರೂ ನಿರ್ವಹಣೆ ಇಲ್ಲದೆ ಸೊರಗುತ್ತಿದೆ.

ಹಿಂದೆಲ್ಲ ಪೊಲೀಸ್‌ ಇಲಾಖೆಗೆ ಸ್ಥಳೀಯವಾಗಿ ಒಂದಿಷ್ಟು ಮಾಹಿತಿ ದಾರರು ಇರುತ್ತಿದ್ದರು. ಈಗ ಈ ವ್ಯವಸ್ಥೆ ಸಂಪೂರ್ಣ ಇಲ್ಲದಾಗಿದೆ. ಹೀಗಾಗಿ ಏನೇ ಘಟನೆ ನಡೆದರೂ ಸ್ಥಳೀಯರು ಮಾಹಿತಿ ನೀಡಿದ ಅನಂತರವೇ ಪೊಲೀಸರು ಬರುತ್ತಾರೆ. ಇಂತಹದ್ದೇ ಘಟನೆ ಸಂಭವಿಸಬಹುದು. ಜತೆಗೆ ಎಂಬ ಮಾಹಿತಿ ನೀಡುವವರ ತಂಡ, ವ್ಯವಸ್ಥೆ ಮೊದಲಿನಷ್ಟು ಬಲಿಷ್ಠವಾಗಿಲ್ಲ.

ವಾಹನ ಮಾತ್ರ ನಿಂತಿರುತ್ತದೆ

Advertisement

ನಗರದ ಅನೇಕ ಕಡೆಗಳಲ್ಲಿ ರಾತ್ರಿ 7ರಿಂದ 10 ಗಂಟೆಯ ಒಳಗೆ ಪೊಲೀಸ್‌ ಗಸ್ತು ಪೂರ್ಣಗೊಳ್ಳುತ್ತದೆ. ತಡರಾತ್ರಿಯಲ್ಲಿ ಗಸ್ತು ಪರಿ ಣಾಮಕಾರಿಯಾಗಿ ಇರದು. ಅಲ್ಲಲ್ಲಿ ಪೊಲೀಸ್‌ ವಾಹನ ಮಾತ್ರ ನಿಂತಿರುತ್ತದೆ. ವಾಹನದ ಒಳಗೆ ಪೊಲೀಸರು ಇದ್ದರೂ ಕೆಳಗೆ ಇಳಿಯರು. ಅಷ್ಟು ಮಾತ್ರವಲ್ಲದೆ, ವಾಹನದ ಸಮೀಪದಲ್ಲೆ ಕೆಲವು ಅಕ್ರಮ ಕೂಟ ನಡೆಯುತ್ತಿದ್ದರೂ ತಡೆಯು ವುದಿಲ್ಲ ಎಂಬ ಆರೋಪವೂ ಇದೆ.

ಜಿಲ್ಲಾಧಿಕಾರಿ ಕಚೇರಿಯ ಕೂಗಳತೆ ದೂರದಲ್ಲೇ ಹಲವು ಅಕ್ರಮ ಚಟುವಟಿ ಕೆಗಳು ನಡೆಯುತ್ತಿರುತ್ತವೆ. ಗಾಂಜಾ ಸೇರಿ ಮಾದಕ ವಸ್ತುಗಳ ಸೇವನೆ, ರ್ಯಾಶ್‌ ರೈಡಿಂಗ್‌, ವೀಲ್ಹಿಂಗ್‌ ಇತ್ಯಾದಿ ಸಾಮಾನ್ಯ. ಉಡುಪಿ-ಮಣಿಪಾಲ-ಪರ್ಕಳ ರಸ್ತೆಯಲ್ಲೂ ಈ ರೀತಿಯ ಕೃತ್ಯಗಳು ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ವಾರಾಂತ್ಯದಲ್ಲಿ ರಸ್ತೆ ಮಧ್ಯದಲ್ಲೇ ಮಾದಕ ವ್ಯಸನಿಗಳು ಗುಂಪು ಕಟ್ಟಿಕೊಂಡಿರುತ್ತಾರೆ. ಸವಾರ ರಿಗೂ ಕಿರಿಕಿರಿ. ಪೊಲೀಸ್‌ ವ್ಯವಸ್ಥೆ ಗಸ್ತು ಇನ್ನಷ್ಟು ಗಟ್ಟಿಯಾದರೆ ಇಂತಹ ಎಲ್ಲ ಚಟು ವಟಿಕೆಗಳಿಗೂ ಕಡಿವಾಣ ಹಾಕಬ ಹುದು. ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಈ ಪ್ರಕರಣವನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂಬುದು ಜನಾಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next