ಉಡುಪಿ: ಕೆವೈಸಿ ಅಪ್‌ಡೇಟ್ ನೆಪದಲ್ಲಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಸಾವಿರಾರು ರೂ. ನಗದು ವರ್ಗಾಯಿಸಿಕೊಂಡ ಘಟನೆ ನಡೆದಿದೆ.
ಕುಂದಾಪುರದ ಕೆ. ನಝೀರ್ ಅವರು ಕೆನರಾ ಬ್ಯಾಂಕ್‌ನ ಕುಂದಾಪುರ ಶಾಖೆಯಲ್ಲಿ ಖಾತೆ ಹೊಂದಿದ್ದು, ಮಾ.22ರಂದು ಅಪರಿಚಿತ ವ್ಯಕ್ತಿ ಕರೆ ಮಾಡಿ 24 ಗಂಟೆಯೊಳಗೆ ಕೆವೈಸಿ ಅಪ್‌ಡೇಟ್ ಮಾಡಲು ಸಂದೇಶ ಕಳುಹಿಸಿ ಅದರಲ್ಲಿ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಎಂದು ಮೊಬೈಲ್ ಸಂಖ್ಯೆ ನಮೂದಿಸಿದ್ದರು.
ಸಂದೇಶದಲ್ಲಿದ್ದ ಸಂಖ್ಯೆಗೆ ಕರೆ ಮಾಡಿದಾಗ ಬ್ಯಾಂಕ್ ಅಧಿಕಾರಿ ಎಂದು ಹೇಳಿ ನಂಬಿಸಿ ಆಧಾರ್ ಕಾರ್ಡ್, ಎ.ಟಿ.ಎಂ. ಕಾರ್ಡ್ ವಿವರ, ಸಿವಿವಿ ನಂಬ್ರ ಹಾಗೂ ಒಟಿಪಿ ವಿವರ ಪಡೆದು ನಝೀರ್ ಅವರ ಖಾತೆಯಿಂದ 96,403 ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದರು. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.