Advertisement

“ಉಡುಪಿ ಜಿಲ್ಲೆ: 3 ಸಾವಿರ ಮಂದಿಗೆ ಕೌಶಲ ತರಬೇತಿ ಗುರಿ’

12:10 AM Nov 05, 2019 | Sriram |

ಉಡುಪಿ: ತಾಂತ್ರಿಕ ಸುಧಾರಣೆಗಳಿಂದಾಗಿ ಮುಂದಿನ ದಿನಗಳಲ್ಲಿ ಉದ್ಯೋಗ ಕಡಿತಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನಾನಾ ವೃತ್ತಿ ಕೌಶಲಗಳನ್ನು ಹೆಚ್ಚಿಸಬೇಕಾಗಿದೆ. ಈ ದೃಷ್ಟಿಯಿಂದ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ 3,000 ಯುವಕ/ಯುವತಿಯರಿಗೆ ಕೌಶಲ ತರಬೇತಿ ನೀಡಿ ಅವರನ್ನು ಉದ್ಯೋಗಕ್ಕೆ ಅರ್ಹರನ್ನಾಗಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2017-18ನೇ ಸಾಲಿನಲ್ಲಿ ಯೋಜನೆ ಆರಂಭಗೊಂಡಿತು. ಲಕ್ಷ್ಮೀಂದ್ರನಗರದಲ್ಲಿ ಇದರ ಕಚೇರಿಯನ್ನು ಉದ್ಘಾಟಿಸಲಾಯಿತು. 2018ರ ಫೆಬ್ರವರಿಯಿಂದ 700 ಜನರಿಗೆ ತರಬೇತಿ ನೀಡುವ ಗುರಿ ಇರಿಸಿಕೊಳ್ಳಲಾಗಿತ್ತು. 644 ಜನರಿಗೆ ತರಬೇತಿ ನೀಡಲಾಗಿದೆ.

ಇವರಲ್ಲಿ 12 ಮಂದಿ ಅನುತ್ತೀರ್ಣ ರಾದರು. 632 ಮಂದಿಗೂ ಉದ್ಯೋಗ ದೊರಕಿದೆ ಅಥವಾ ಸ್ವಯಂ ಉದ್ಯೋಗಿಗಳಾಗಿದ್ದಾರೆ. ಟೈಲರಿಂಗ್‌, ಬ್ಯೂಟಿಶಿ ಯನ್‌, ಜೂನಿಯರ್‌ ಸಾಫ್ಟ್ವೇರ್‌ ಡೆವಲಪರ್, ಹಾರ್ಡ್‌ವೇರ್‌ ಇತ್ಯಾದಿ ಕ್ಷೇತ್ರಗಳಲ್ಲಿ ತರಬೇತಿ ಕೊಡಲಾಯಿತು ಎಂದರು.

ಎಲ್ಲರಿಗೂ ತರಬೇತಿ
ಶಾಲೆಯನ್ನು ಮಧ್ಯದಲ್ಲಿ ಬಿಟ್ಟವರಿಂದ ಹಿಡಿದು ಎಂಜಿನಿಯರಿಂಗ್‌ ಕಲಿತವರ ವರೆಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆಯುವವರಿಗೆ ತಿಂಗಳಿಗೆ 1,000 ರೂ.ನಂತೆ ಹೋಗಿ ಬರುವ ಖರ್ಚನ್ನು ನೀಡಲಾಗುತ್ತದೆ ಎಂದರು.

ಏನು ಕಲಿತಿದ್ದಾರೋ ಅವರಿಗೆ ಉದ್ಯೋಗ ದೊರಕುವಂತಾಗಲು 2-3 ತಿಂಗಳ ಮುಂದುವರಿದ ತರಬೇತಿ ನೀಡಲಾಗುತ್ತಿದೆ. ಗ್ರಾ.ಪಂ.ನಿಂದ ಹಿಡಿದು ವಿವಿಧ ಸ್ತರದ ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ವ್ಯಾಪ್ತಿಯ ಯುವಕ/ಯುವತಿಯರನ್ನು ಗುರುತಿಸಿ ತರಬೇತಿಗೆ ಕಳುಹಿಸುವಂತೆ ಮಾಡಬೇಕು ಎಂದು ತಿಳಿಸಿದರು.

Advertisement

ಪ್ರಸ್ತುತ ಲೋಕಸಭಾ ಕ್ಷೇತ್ರಕ್ಕೆ ಒಂದರಂತೆ ಕೇಂದ್ರವನ್ನು ತೆರೆಯಲಾಗಿದೆ. ಚಿಕ್ಕಮಗಳೂರು ಜಿಲ್ಲೆಗೂ ಕೇಂದ್ರವನ್ನು ತೆರೆಯಲು ಬೇಡಿಕೆ ಇರಿಸಿದ್ದೇನೆ. ಚಿಕ್ಕಮಗಳೂರು ಜಿಲ್ಲೆಯವರು ಸಮೀಪದ ಹಾಸನ ಅಥವಾ ಶಿವಮೊಗ್ಗ ಜಿಲ್ಲೆಗೆ ತರಬೇತಿಗಾಗಿ ತೆರಳಬಹುದು. ರೂಮನ್‌ ಸಂಸ್ಥೆ ತರಬೇತಿಯನ್ನು ನೀಡಲಿದೆ ಎಂದರು.

ಶಾಸಕ ಕೆ. ರಘುಪತಿ ಭಟ್‌, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ರೇಷ್ಮಾ ಉದಯ ಶೆಟ್ಟಿ, ಕೇಂದ್ರದ ಮುಖ್ಯಸ್ಥ ರಾಘವೇಂದ್ರ ರಾವ್‌ ಉಪಸ್ಥಿತರಿದ್ದರು.

ಕೇಂದ್ರದ ವಿವರ:
ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ, ಪ್ರಗತಿ ಬಿಸಿನೆಸ್‌ ಡಿಸ್ಟ್ರಿಕ್ಟ್, ಲಕ್ಷ್ಮೀಂದ್ರನಗರ, ಉಡುಪಿ. ದೂ: 9535040711, ಎಸ್‌ಎಂಎಸ್‌ ಸಂದೇಶ: PMKVY” to ” to 56161.ವೆಬ್‌ಸೈಟ್‌: www.rooman.com, ಇಮೇಲ್‌: KA3@rooman.net

Advertisement

Udayavani is now on Telegram. Click here to join our channel and stay updated with the latest news.

Next