Advertisement

ಉಡುಪಿ ಜಿಲ್ಲೆ: 3 ದಿನಗಳಲ್ಲಿ 1.75 ಲ.ರೂ. ದಂಡ ವಸೂಲಿ

12:58 AM Sep 08, 2019 | Sriram |

ಉಡುಪಿ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಹೆಚ್ಚಳ ಆದೇಶ ಉಡುಪಿ ಜಿಲ್ಲೆಯಲ್ಲಿ ಸೆ.5ರಂದು ಜಾರಿಗೆ ಬಂದಿದ್ದು, ಇದುವರೆಗೆ 1,75,800 ರೂ. ಸ್ಥಳದಲ್ಲೇ ದಂಡ ವಸೂಲಿ ಮಾಡಲಾಗಿದೆ.

Advertisement

ಶನಿವಾರ ಒಂದೇ ದಿನ 1,12,500 ರೂ. ದಂಡ ವಸೂಲಿ ಮಾಡಲಾಗಿದೆ. ಇದರಲ್ಲಿ 66 ಸೀಟ್‌ ಬೆಲ್ಟ್ ಹಾಕದಿರುವುದು, 72 ಹೆಲ್ಮೆಟ್‌ ರಹಿತ ದ್ವಿಚಕ್ರ ವಾಹನ ಚಾಲನೆ ಪ್ರಕರಣಗಳು ಸೇರಿವೆ. ಇತರ ಕೆಲವು ಪ್ರಕರಣಗಳಿಗೆ ಕೋರ್ಟ್‌ ನೋಟೀಸು ನೀಡಲಾಗಿದೆ.

3 ದಿನಗಳಲ್ಲಿ ಒಟ್ಟು 300 ಪ್ರಕರಣಗಳನ್ನು ದಾಖಲಿಸಿ ಸ್ಥಳದಲ್ಲಿ ದಂಡ ವಸೂಲಿ ಮಾಡಿರುವ ಜತೆಗೆ ಕೆಲವು ಪ್ರಕರಣಗಳಿಗೆ ಕೋರ್ಟ್‌ ನೋಟಿಸ್‌ ನೀಡಲಾಗಿದೆ.

ವಿದ್ಯಾರ್ಥಿಗಳಿಗೂ ದಂಡ ಬಿಸಿ
ಶನಿವಾರ ವಿದ್ಯಾರ್ಥಿ ಸಂಘದ ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ನಗರದಲ್ಲಿ ಹತ್ತಕ್ಕೂ ಅಧಿಕ ತೆರೆದ ವಾಹನಗಳಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಮೆರವಣಿಗೆ ನಡೆಯಿತು. ಇದರಲ್ಲಿ ಇತರ ವಾಹನಗಳೂ ಪಾಲ್ಗೊಂಡಿದ್ದವು.

ಮೆರವಣಿಗೆಗೆ ಪೊಲೀಸರು ಭದ್ರತೆ ಒದಗಿಸಿದ್ದರು. ಆದರೆ ಮೆರವಣಿಗೆ ಸಂಜೆ ಎಂಜಿಎಂ ಕಾಲೇಜು ಬಳಿ ತೆರಳಿ ಅನಂತರ ಕೆಲವು ವಿದ್ಯಾರ್ಥಿಗಳು ಎಂಜಿಎಂ ಮೈದಾನ ಪ್ರವೇಶಿಸಲು ಯತ್ನಿಸಿದರು. ಇದನ್ನು ಪೊಲೀಸರು ತಡೆದರು. ಅನಂತರ ದಾಖಲೆ ಸಮರ್ಪಕ ಇಲ್ಲದಿರುವುದು ಸೇರಿದಂತೆ ವಿವಿಧ ಸಂಚಾರ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದರು.

Advertisement

ಮಂಗಳೂರಿನಲ್ಲಿ ನೂತನ ದಂಡ ವಸೂಲಿ ಆದೇಶ ಇನ್ನೂ ಜಾರಿಗೆ ಬಂದಿಲ್ಲ. ಸಾಫ್ಟ್‌ವೇರ್‌ ಅಪ್‌ಡೇಟ್‌ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ಶುಕ್ರವಾರ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next