Advertisement
ಬೆಳಗ್ಗೆ 7ರಿಂದ 11ರ ವರೆಗೆ ಅನುಮತಿಇರುವ ಅಂಗಡಿಗಳು ಕಾರ್ಯಾ ಚರಿಸುತ್ತಿವೆ. ಪಕ್ಕದ ದ.ಕ. ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೆ ಏರುತ್ತಿದೆ. ಈ ನಡುವೆ ಉಡುಪಿ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ಇಲ್ಲ ಒಮ್ಮೆಲೇ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸಿದರೆ ಮತ್ತೆ ಪ್ರಕರಣಗಳು ಉದ್ಭವವಾದರೆ ಯಾರು ಹೊಣೆ ಎಂಬ ಪ್ರಶ್ನೆ ಈಗ ಜಿಲ್ಲೆಯಲ್ಲಿ ಕೇಳಿಬರುತ್ತಿದೆ.
ವಾಹನಗಳ ದಟ್ಟಣೆ
ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣ ಗಳು ಇರುವ ಸಂದರ್ಭದಲ್ಲಿಯೂ ಜನರು ಅಗತ್ಯ ವಸ್ತುಗಳ ಖರೀದಿಗೆಂದು ರಸ್ತೆಗಿಳಿಯುತ್ತಿದ್ದರು. ಈಗ ಆ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ. ಅಂಗಡಿಗಳೆಲ್ಲ ತೆರೆದು ವ್ಯಾಪಾರ ನಡೆಸುತ್ತಿದೆ. ಸಾಮಾಜಿಕ ಅಂತರಗಳೂ ಪಾಲನೆಯಾಗುತ್ತಿಲ್ಲ. ಈ ನಡುವೆ ಕೆಲವೆಡೆ ಆಟೋ ರಿಕ್ಷಾಗಳು ಕೂಡ ರಸ್ತೆಗಿಳಿದಿವೆ. ತುರ್ತು ವೈದ್ಯಕೀಯ ಕಾರಣಗಳಿದ್ದರೆ ರೋಗಿಗಳನ್ನು ಆಟೋಗಳಲ್ಲಿ ಸಾಗಿಸಬಹುದಾಗಿದೆ. ಆದರೆ ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಹೋಗುವ ಆಟೋರಿಕ್ಷಾಗಳನ್ನು ಪೊಲೀಸರು ವಿಚಾರಿಸುತ್ತಿದ್ದಾರೆ. ಕೆಲವು ಬಂದ್… ಹಲವು ಓಪನ್
ಚಿತ್ರಮಂದಿರಗಳು, ಮದ್ಯದಂಗಡಿಗಳು, ಕ್ಷೌರದಂಗಡಿಗಳು, ಜುವೆಲರಿ ಶಾಪ್ ಗಳು, ಹೊಟೇಲ್, ರೆಸ್ಟೋರೆಂಟ್‌ಗಳು ಸಹಿತ ಕೆಲವು ಉದ್ದಿಮೆಗಳು ನಡೆಯುತ್ತಿಲ್ಲ. ಅಗತ್ಯ ವಸ್ತುಗಳ ಅಂಗಡಿಗಳು ಬೆಳಗ್ಗೆ 7ರಿಂದ 11ರ ವರೆಗೆ ವ್ಯಾಪಾರ ನಡೆಸಬೇಕೆಂದಿದ್ದರೂ ಕೆಲವರು ಮಾತ್ರ 11ರ ಅನಂತರವೂ ವ್ಯಾಪಾರ ನಡೆಸುತ್ತಿದ್ದಾರೆ. ಇಂತಹವರಿಗೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.
Related Articles
ಜಿಲ್ಲೆಯಲ್ಲಿ ಯಾವುದೇ ಕೋವಿಡ್ -19 ಪ್ರಕರಣ ಇಲ್ಲ ಎಂದು ಅನಾವಶ್ಯಕವಾಗಿ ಓಡಾಡುವ ಮುನ್ನ ನಾಗರಿಕರು ಸಾಕಷ್ಟು ಬಾರಿ ಯೋಚಿಸಿಕೊಳ್ಳಬೇಕಾಗುತ್ತದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು. ಹೊರಗೆ ಹೋಗುವ ಸಂದರ್ಭ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿದರೂ ಇದನ್ನು ಪಾಲಿಸದಿರುವುದು ಕಂಡುಬರುತ್ತಿದೆ. ಅಪಾಯ ಬಂದ ಬಳಿಕ ಎಚ್ಚರಗೊಳ್ಳುವುದಕ್ಕಿಂತ ಮೊದಲೇ ಜಾಗೃತೆ ವಹಿಸುವುದು ಉತ್ತಮ.
Advertisement
ಹೊರಜಿಲ್ಲೆಗಳಿಂದ ಆಗಮಿಸುವವರಿಗೆ ಕ್ವಾರಂಟೈನ್ಜಿಲ್ಲೆಯ ಹೊರಗೆ ತೆರಳಲು ಹಾಗೂ ಜಿಲ್ಲೆಯೊಳಗೆ ವಿನಾ ಕಾರಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ತುರ್ತು ಕೆಲಸಕ್ಕೆ ತೆರಳುವವರು ಜಿಲ್ಲಾಡಳಿತದ ಅನುಮತಿ ಪಡೆದರೆ ಅಗತ್ಯವಿದ್ದರೆ ಮಾತ್ರ ಪಾಸ್‌ಗಳನ್ನು ಒದಗಿಸಲಾಗುವುದು. ಹೊರಜಿಲ್ಲೆಯಿಂದ ಬರುವವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ.
-ಸದಾಶಿವ ಪ್ರಭು,
ಅಪರ ಜಿಲ್ಲಾಧಿಕಾರಿಗಳು, ಉಡುಪಿ.