Advertisement
ಪ್ರಥಮ ವರದಿ ಬಂದವರ ಎರಡನೆಯ ಮಾದರಿಯನ್ನು ಪ್ರಯೋಗಾಲಯಕ್ಕೆ ಸೋಮವಾರ ಕಳುಹಿಸಲಾಗಿದೆ. ಇನ್ನೊಬ್ಬರ ಮಾದರಿಯ ವರದಿ ಮಂಗಳವಾರ ಕೈಸೇರುವ ನಿರೀಕ್ಷೆ ಇದೆ. ಮೊದಲ ವರದಿ ಬಂದ ಬಳಿಕ ಎರಡನೆಯ ಮಾದರಿಯನ್ನು ಕಳುಹಿಸಲಾಗುವುದು. ಎರಡೂ ವರದಿಗಳು ನೆಗೆಟಿವ್ ಬಂದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾಣ ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ನಲ್ಲಿದ್ದಾರೆ. ಸೋಮವಾರ 10 ಮಂದಿ ವಾರ್ಡ್‌ನಿಂದ ಬಿಡುಗಡೆಗೊಂಡಿದ್ದರೆ, ಇದುವರೆಗೆ ಒಟ್ಟು 186 ಮಂದಿ ಬಿಡುಗಡೆಗೊಂಡಿದ್ದಾರೆ.
ಸೋಮವಾರ ತೀವ್ರ ಉಸಿರಾಟದ ಸಮಸ್ಯೆ ಇರುವ ಇಬ್ಬರು, ಕೋವಿಡ್ 19 ಸೋಂಕಿನ ಸಂಪರ್ಕದ 51 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈಗಾಗಲೇ ಕಳುಹಿಸಿದ 41 ಜನರ ಮಾದರಿಗಳ ನೆಗೆಟಿವ್ ವರದಿ ಕೈಸೇರಿದೆ. 56 ಮಂದಿಯ ವರದಿ ಬರಬೇಕಾಗಿದೆ. ಸೋಮವಾರ 16 ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದುವರೆಗೆ ಒಟ್ಟು 2,129 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಸೋಮವಾರ 141 ಮಂದಿ 28 ದಿನಗಳ, 12 ಮಂದಿ 14 ದಿನಗಳ ನಿಗಾ ಮುಗಿಸಿದ್ದಾರೆ. ಇದುವರೆಗೆ 1,117 ಮಂದಿ 28 ದಿನಗಳ, 1,951 ಮಂದಿ 14 ದಿನಗಳ ನಿಗಾವನ್ನು ಮುಗಿಸಿದ್ದಾರೆ. ಪ್ರಸ್ತುತ 112 ಮಂದಿ ಗೃಹ ನಿಗಾದಲ್ಲಿಯೂ 37 ಮಂದಿ ಆಸ್ಪತ್ರೆ ನಿಗಾದಲ್ಲಿಯೂ ಇದ್ದಾರೆ. ಸೋಮವಾರ 9 ಮಂದಿ ಆಸ್ಪತ್ರೆ ನಿಗಾಕ್ಕೆ ಸೇರ್ಪಡೆಗೊಂಡರೆ 29 ಮಂದಿ ಆಸ್ಪತ್ರೆ ನಿಗಾದಿಂದ ಬಿಡುಗಡೆಗೊಂಡಿದ್ದಾರೆ.