Advertisement

ಉಡುಪಿ ಜಿಲ್ಲೆಯಲ್ಲಿ  9.93 ಲಕ್ಷ ಮತದಾರರು

08:17 AM May 06, 2018 | Team Udayavani |

ಉಡುಪಿ: ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 9,93,415 ಮತದಾರರು ಮತ ಚಲಾಯಿಸಲಿದ್ದಾರೆ. ಅದರಲ್ಲಿ 4,78,350 ಪುರುಷರು, 5,15,041 ಮಹಿಳೆಯರು, 24 ಮಂದಿ ಇತರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿ.ಪಂ. ಸಿಇಒ ಶಿವಾನಂದ ಕಾಪಶಿ ಉಪಸ್ಥಿತರಿದ್ದರು. 

Advertisement

ಬೈಂದೂರು ವಿಧಾನ ಸಭಾ ಕ್ಷೇತ್ರದಲ್ಲಿ, 1,08,154 ಪುರುಷರು, 1,14,259 ಮಹಿಳೆ ಯರು, 14 ಇತರ ಮತದಾರರು ಸೇರಿ ಒಟ್ಟು 2,22,427 ಮತದಾರರು ಇದ್ದಾರೆ.

ಕುಂದಾಪುರ ಕ್ಷೇತ್ರದಲ್ಲಿ, 95,927 ಪುರುಷರು, 1,03,648 ಮಹಿಳಾ ಮತದಾರರು ಸೇರಿ ಒಟ್ಟು 1,99,575 ಮತದಾರರು ಇದ್ದಾರೆ.

ಉಡುಪಿ ಕ್ಷೇತ್ರದಲ್ಲಿ 1,00,535 ಪುರುಷರು, 1,06,892 ಮಹಿಳೆಯರು, 4 ಇತರ ಮತದಾರರು ಸೇರಿ ಒಟ್ಟು 2,07,431 ಮತದಾರರು ಇದ್ದಾರೆ.

ಕಾಪು ಕ್ಷೇತ್ರದಲ್ಲಿ 87,020 ಪುರುಷರು, 95,948 ಮಹಿಳೆಯರು, 4 ಇತರ ಮತದಾರರು ಸೇರಿ ಒಟ್ಟು 1,82,972 ಮತದಾರರು ಇದ್ದಾರೆ.

Advertisement

ಕಾರ್ಕಳ ಕ್ಷೇತ್ರದಲ್ಲಿ 86,714 ಪುರುಷರು, 94,294 ಮಹಿಳೆಯರು, 2 ಇತರ ಮತದಾರರು ಸೇರಿ ಒಟ್ಟು 1,81,010 ಮತದಾರರು ಇದ್ದಾರೆ.

ರಾಜ್ಯ ಚುನಾವಣಾ ಆಯೋಗವು ಚುನಾ ವಣ ಆ್ಯಪ್‌ನ್ನು ನಿರ್ಮಿಸಿದೆ. ಈ ಆ್ಯಪ್‌ ಪ್ರಸ್ತುತ ಸ್ಥಳದಲ್ಲಿರುವ ಮತ ಕೇಂದ್ರ ಕುರಿತು ಮಾರ್ಗ ದರ್ಶನ ನೀಡುತ್ತದೆ. ಎಪಿಕ್‌ ಸಂಖ್ಯೆ ಬಳಸಿ ಮಾಹಿತಿ ಹುಡುಕಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಅಕ್ರಮ ಹಣ 93.62 ಲ.ರೂ.
ಜಿಲ್ಲೆಯಲ್ಲಿ ಅಕ್ರಮ ಹಣ ಸಾಗಾಟದ ಒಟ್ಟು 93.62 ಲ.ರೂ. ವಶಪಡಿಸಿಕೊಳ್ಳಲಾಗಿದೆ. ಇದ ರಲ್ಲಿ ದಾಖಲೆ ಒದಗಿಸಿದವರ 21.65 ಲ.ರೂ. ಹಿಂದಿರುಗಿಸಲಾಗಿದೆ. ಇದರಲ್ಲಿ ಬೈಂದೂರು ಕ್ಷೇತ್ರದಲ್ಲಿ 5 ಪ್ರಕರಣ- 70.04 ಲ.ರೂ., ಕುಂದಾಪುರದಲ್ಲಿ 3 ಪ್ರಕರಣ – 7.2 ಲ.ರೂ., ಉಡುಪಿ ಕ್ಷೇತ್ರದಲ್ಲಿ 2 ಪ್ರಕರಣ 1.39 ಲ.ರೂ., ಕಾಪುವಿನಲ್ಲಿ 5 ಪ್ರಕರಣ- 14.98 ಲ.ರೂ.

35 ಸಂಹಿತೆ ಉಲ್ಲಂಘನೆ ಪ್ರಕರಣ
ಮಾದರಿ ನೀತಿ ಸಂಹಿತೆ ಉಲ್ಲಂ ಸಿದ 35 ಪ್ರಕರಣಗಳಿವೆ. ಬೈಂದೂರಿನಲ್ಲಿ 3, ಕುಂದಾ ಪುರದಲ್ಲಿ 5, ಉಡುಪಿಯಲ್ಲಿ 11, ಕಾಪುವಿನಲ್ಲಿ 6, ಕಾರ್ಕಳದಲ್ಲಿ 10 ಪ್ರಕರಣಗಳು ಇವೆ. 

ಅಕ್ರಮ ಮದ್ಯ 150 ಪ್ರಕರಣ
13,207.4 ಲೀ. ಮದ್ಯವನ್ನು ಅಬಕಾರಿ ಇಲಾಖೆಯವರು, 251.57 ಲೀ. ಮದ್ಯವನ್ನು ಪೊಲೀಸ್‌ ಇಲಾಖೆಯವರು ವಶಪಡಿಸಿಕೊಂಡು 150 ಪ್ರಕರಣ ದಾಖಲಿಸಿದ್ದಾರೆ. 

ತೆಕ್ಕಟ್ಟೆ- ದಿವ್ಯಾಂಗ ಮತಗಟ್ಟೆ
555 ಸ್ಥಳಗಳಲ್ಲಿ ಅಶಕ್ತರಿಗೆ ವೀಲ್‌ ಚೆಯರ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ತೆಕ್ಕಟ್ಟೆ ಬೂತ್‌ನಲ್ಲಿ 398 ದಿವ್ಯಾಂಗರಿದ್ದು ಈ ಮತಗಟ್ಟೆಯನ್ನು ದಿವ್ಯಾಂಗ ಮತಗಟ್ಟೆ ಎಂದು ಘೋಷಿಸಲಾಗಿದೆ. ಇಲ್ಲಿ ದಿವ್ಯಾಂಗ ಸಿಬಂದಿಗಳೇ ಇರುತ್ತಾರೆ.

1.19 ಲಕ್ಷ ಮತದಾರರ ಹೆಚ್ಚಳ
2013ರ ವಿಧಾನಸಭಾ ಚುನಾವಣೆ ಯಲ್ಲಿ 8,74,124 ಮತದಾರರು ಇದ್ದರು. ಈ ಬಾರಿ 1,19,291 ಮತದಾರರು ಹೆಚ್ಚಳವಾಗಿದ್ದಾರೆ. 

6,354 ಸಿಬಂದಿ ನೇಮಕ
ಮೇ 12ರ ಚುನಾವಣೆಗೆ 6,354 ಸಿಬಂದಿಗಳನ್ನು ನೇಮಿಸಲಾಗಿದೆ. ಈಗಾಗಲೇ ಒಂದು ಸುತ್ತಿನ ತರಬೇತಿ ನೀಡಿದ್ದು ಮೇ 6ರಂದು ಎರಡನೆಯ ಸುತ್ತಿನ ತರಬೇತಿ ನೀಡಲಾಗುತ್ತಿದೆ. ಚುನಾವಣಾ ಕರ್ತವ್ಯದಂದು ವಿನಾಯಿತಿ ನೀಡಲಾಗಿದ್ದರೂ ಅವರು ಈ ತರಬೇತಿ ಯಲ್ಲಿ ಹಾಜರಾಗಬೇಕು.

ಬಹಿರಂಗ ಸಭೆ ಮುಕ್ತಾಯ
ಮೇ 10ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯಗೊಳ್ಳಲಿದೆ. 

25 ಮಂದಿ ಸಹಸ್ರಮಾನದ ಮತದಾರರು
ಸಹಸ್ರಮಾನದ ಮತದಾರರು ಜಿಲ್ಲೆಯಲ್ಲಿ 25 ಮಂದಿ ಇದ್ದಾರೆ. ಇವರು 1-1-2000ರಂದು ಹುಟ್ಟಿದವರು.

Advertisement

Udayavani is now on Telegram. Click here to join our channel and stay updated with the latest news.

Next