Advertisement
ಕಳೆದ 2015 ರಲ್ಲಿ ಉಡುಪಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಮಾರ್ಚ್ ವೇಳೆಗೆ 7.19 ಮೀಟರ್‌ನಷ್ಟಿದ್ದರೆ, ಈ ವರ್ಷದ ಮಾರ್ಚ್‌ನಲ್ಲಿ ಅಂತರ್ಜಲ ಮಟ್ಟ 9.06 ದಷ್ಟು ಆಳಕ್ಕಿಳಿದಿದೆ. ಕಾರ್ಕಳ ಹಾಗೂ ಕುಂದಾಪುರ ತಾಲೂಕಿನಲ್ಲಿ ಸ್ವಲ್ಪ ಮಟ್ಟಿಗೆ ಪರಾÌಗಿಲ್ಲ ಅನ್ನಿಸಿದರೂ, ಉಡುಪಿ ತಾಲೂಕಿನಲ್ಲಂತೂ ಇದು ಇನ್ನಷ್ಟು ಆತಂಕ ಮೂಡಿಸುವಂತಿದೆ. ಇಲ್ಲಿ 2015 ರಲ್ಲಿ 6.19 ಇದ್ದರೆ, 2019 ರಲ್ಲಿ ಅಂತರ್ಜಲ 10.35 ಮೀ. ನಷ್ಟು ಆಳದಲ್ಲಿದೆ.
ಈಗಾಗಲೇ ಜಿಲ್ಲೆಯಾದ್ಯಂತ ಬೋರ್‌ವೆಲ್ ಕೊರೆಯಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ದಿನಕ್ಕೆ ಸರಾಸರಿ 8-10 ಬೋರ್‌ವೆಲ್‌ಗಳನ್ನು ಕೊರೆಯಲಾಗುತ್ತಿದೆ. 4-5 ವರ್ಷಗಳ ಹಿಂದೆ 200 ರಿಂದ 250 ಅಡಿ ಆಳದಲ್ಲಿ ಸಿಗುತ್ತಿದ್ದ ನೀರು, ಈಗ ಕನಿಷ್ಠ 350 ರಿಂದ 400 ಅಡಿ ಆಳದವರೆಗಾದರೂ ಕೊರೆಯಿಸಿದರೆ ಮಾತ್ರ ನೀರಿನ ಸೆಲೆ ಸಿಗುತ್ತದೆ ಎನ್ನುತ್ತಾರೆ ಭೂವಿಜ್ಞಾನಿಗಳು.
Related Articles
ಕಳೆದ 5 ವರ್ಷಗಳಲ್ಲಿ ಒಟ್ಟು ಉಡುಪಿ ಜಿಲ್ಲೆ ಹಾಗೂ ತಾಲೂಕುವಾರು ಮಾರ್ಚ್ ವೇಳೆಗೆ ಅಂತರ್ಜಲ ಮಟ್ಟ ಎಷ್ಟಿತ್ತು ಎನ್ನುವುದು ಜಿಲ್ಲಾ ಅಂತರ್ಜಲ ಇಲಾಖೆಯ ಅಂಕಿ – ಅಂಶಗಳ ಪ್ರಕಾರ ಇಲ್ಲಿದೆ.
Advertisement
ಕಳೆದ ವರ್ಷವೂ ನೀರಿನ ಸಮಸ್ಯೆ ಎಲ್ಲ ಕಡೆಗಳಲ್ಲಿ ಇದ್ದರೂ ಕೂಡ, ಇಷ್ಟೊಂದು ಗಂಭೀರವಾಗಿರಲಿಲ್ಲ. ಇದಕ್ಕೆ ಕಾರಣ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಂದರೂ ಸಹ ಮಳೆ ನೀರು ಭೂಮಿಯೊಳಗೆ ಇಳಿದಿಲ್ಲ. ಅಂದರೆ ಕಾಡು, ಕೃಷಿ ಭೂಮಿಗಳು ಕಾಂಕ್ರೀಟ್ ಜಾಗವಾಗಿ ಪರಿವರ್ತನೆಯಾಗಿದೆ. ಅದಲ್ಲದೆ ಹಿಂದೆಲ್ಲ ಸುಗ್ಗಿ ಬೇಸಾಯ ಮಾಡುತ್ತಿದ್ದು, ಆಗ ಗದ್ದೆಯ ನೀರಿಗಾಗಿ ನದಿಗಳಲ್ಲಿ ಕಟ್ಟಗಳನ್ನು ನಿರ್ಮಿಸಿ, ನೀರನ್ನು ಸಂಗ್ರಹಿಸುತ್ತಿದ್ದರು. ಇದರಿಂದ ಅಲ್ಲಿರುವ ಸುತ್ತಮುತ್ತಲಿನ ಜಾಗದ ಅಂತರ್ಜಲ ಮಟ್ಟ ಕುಸಿಯುತ್ತಿರಲಿಲ್ಲ. ಇನ್ನು ಕಳೆದ ಬಾರಿ ಮಾರ್ಚ್‌ನಲ್ಲಿ ಒಂದೆರಡು ಮಳೆ ಬಂದಿತ್ತು. ಇದರಿಂದ ಸ್ವಲ್ಪ ಮಟ್ಟಿಗೆ ಕೃಷಿಕರಿಗೆ, ಸಹಿತ ಎಲ್ಲರಿಗೂ ಅನುಕೂಲವಾಗಿತ್ತು. ಆದರೆ ಈ ಬಾರಿ ಮಾರ್ಚ್‌ನಲ್ಲಿ ಉಡುಪಿ ಜಿಲ್ಲೆಯಲ್ಲಿ ಮಳೆ ಆಗಿಲ್ಲದಿರುವುದರಿಂದ ಅಂತರ್ಜಲ ಮಟ್ಟದ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. ಬದ್ಧತೆ ಇರಲಿ
ನೀರು ಬಳಕೆ ಮಾಡುವವರಿಗೂ ಮುಂದಿನ ದಿನಗಳಿಗೂ ಬೇಕು ಎನ್ನುವ ಬದ್ಧತೆ ಇರಲಿ ಹಾಗೂ ಅದಕ್ಕಾಗಿ ಅಂತರ್ಜಲ ಮಟ್ಟ ಏರಿಸಲು ಮುಂದಾಗಲಿ. ಬೋರ್‌ವೆಲ್‌ಗಳನ್ನು ಕೊರೆಯಿಸಿದ್ದರೆ, ಅದರನ್ನು ಮಳೆಗಾಲ ಸಮಯದಲ್ಲಿ ರೀಚಾರ್ಜ್ ಮಾಡಲಿ. ಎಲ್ಲ ಕಡೆಗಳಲ್ಲಿ ಮಳೆ ಕೊಯ್ಲು ಮಾಡಲು ಮುಂದಾಗಲಿ. ನಿಮ್ಮ – ನಿಮ್ಮ ಜಾಗದಲ್ಲಿರುವ ಮದಗ, ಕೆರೆಗಳನ್ನು ಮಳೆಗಾಲಕ್ಕೂ ಮುನ್ನ ಹೂಳೆತ್ತಿ, ಮುಂಗಾರಿನಲ್ಲಿ ನೀರು ತುಂಬುವಂತೆ ನೋಡಿಕೊಳ್ಳಿ. ಬೋರ್‌ವೆಲ್‌ಗಳಲ್ಲಿ ಸಮೃದ್ಧ ನೀರಿದ್ದರೂ, ಕೃಷಿಗೆ ನಿರಂತರ 24 ಗಂಟೆ ಹಾಕುವುದು ಸರಿಯಲ್ಲ. ದಿನಕ್ಕೆ ಬೆಳಗ್ಗೆ 4 ಸಂಜೆ ಬಳಿಕ 4 ಗಂಟೆ ನೀರು ಹಾಕುವಂತಹ ಯೋಜನೆ ಹಾಕಿಕೊಳ್ಳಿ.
– ಡಾ| ಎಂ. ದಿನಕರ ಶೆಟ್ಟಿ, ಹಿರಿಯ ಭೂ ವಿಜ್ಞಾನಿ, ಜಿಲ್ಲಾ ಅಂತರ್ಜಲ ಇಲಾಖೆ ಪ್ರಶಾಂತ್ ಪಾದೆ