Advertisement

ಜನರ ಸಮಸ್ಯೆಗೆ ತತ್‌ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್‌ ಸೂಚನೆ

12:00 AM May 28, 2022 | Team Udayavani |

ಅಜೆಕಾರು: ವಿದ್ಯುತ್‌, ಕುಡಿಯುವ ನೀರು, ರಸ್ತೆ, ಹಕ್ಕುಪತ್ರ ಸೇರಿದಂತೆ ಮೂಲಸೌಕರ್ಯಗಳ ಸಮಸ್ಯೆಗೆ ಸ್ಥಳೀಯ ಅಧಿಕಾರಿಗಳು ತತ್‌ಕ್ಷಣ ಸ್ಪಂದಿಸಿ ತ್ವರಿತವಾಗಿ ಪರಿಹರಿಸಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್‌ ಸೂಚಿಸಿದರು.

Advertisement

ಅವರು ವರಂಗ ಗ್ರಾಮದಲ್ಲಿ ಶುಕ್ರವಾರ ನಡೆದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ನಾಗರಿಕರ ಸಮಸ್ಯೆ ಆಲಿಸಿ ಮಾತನಾಡಿದರು. ಅಭಿವೃದ್ಧಿಗೆ ಮಠದ ಆಕ್ಷೇಪ ವರಂಗ ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರು, ಸುಮಾರು 65 ಕುಟುಂಬಗಳಿಗೆ ಹಕ್ಕುಪತ್ರ ಸಮಸ್ಯೆ ಗಳಿವೆ. ಮೂಲಸೌಕರ್ಯ ಅಭಿವೃದ್ಧಿಗೆ ವರಂಗ ಮಠದ ಆಕ್ಷೇಪ ಇದ್ದು ಜನರು ತೊಂದರೆ ಎದುರಿಸುವಂತಾಗಿದೆ. 50 ವರ್ಷಗಳಿಂದ ವಾಸವಾಗಿದ್ದು ಮನೆ ನಂಬರ್‌, ಪಡಿತರ ಚೀಟಿ, ಆಧಾರ ಕಾರ್ಡ್‌ ಹೊಂದಿದ್ದರೂ ಹಕ್ಕುಪತ್ರ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಗಮನಕ್ಕೆ ತಂದರು.

65 ಮನೆಯವರಿಗೆ ಹಕ್ಕುಪತ್ರ ಸಮಸ್ಯೆ ಒಂದೆ ಕಡೆ ಇರುವುದರಿಂದ ವರಂಗ ಕಂದಾಯ ಗ್ರಾಮ ರಚನೆಯ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಹಶೀ ಲ್ದಾರ್‌ಗೆ ಜಿಲ್ಲಾಧಿಕಾರಿ ಸೂಚಿಸಿದರು.

ನೆಟವರ್ಕ್‌ ಸಮಸ್ಯೆ
ಮುಟ್ಲುಪಾಡಿ ಪ್ರದೇಶದಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಇದ್ದು ಟವರ್‌ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಮರಳು ನಿಕ್ಷೇಪ
ಪಂಚಾಯತ್‌ ವ್ಯಾಪ್ತಿಯಲ್ಲಿರುವ ಮರಳು ನಿಕ್ಷೇಪವನ್ನು ಗ್ರಾ.ಪಂ. ಅಧಿಕಾರಿಗಳು ಹಾಗೂ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗುರು
ತಿಸುವಂತೆ ಸೂಚಿಸಿದರು.

Advertisement

ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ, ಹಳೆ ವಿದ್ಯುತ್‌ ತಂತಿ ಬದಲಾಯಿಸುವಂತೆ, ಶ್ಮಶಾನ ಜಾಗ ಒತ್ತುವರಿಯಾಗದಂತೆ ಎಚ್ಚರದಿಂದಿರು ವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧೆಡೆ ಭೇಟಿ
ಮುನಿಯಾಲು ಕೊರಗರ ಕಾಲನಿ, ಮುಟ್ಲುಪಾಡಿ ಶಾಲೆ, ವರಂಗ ಬೈದಡ್ಕ ರಸ್ತೆ, ಪಡುಕುಡೂರು ಶ್ಮಶಾನ ಮೊದಲಾದೆಡೆ ಭೇಟಿ ನೀಡಿ ಪರಿಶೀಲಿಸಿದರು.

ಕೊರಗರ ಕಾಲನಿಯ ನಿವಾಸಿಗಳು ಕುಡಿಯುವ ನೀರು, ವಿದ್ಯುತ್‌ ಕಂಬಕ್ಕೆ ಬೇಡಿಕೆ ಸಲ್ಲಿಸಿದರು.
ವರಂಗ ಗ್ರಾ.ಪಂ. ಅಧ್ಯಕ್ಷೆ ಉಷಾ ಹೆಬ್ಟಾರ್‌, ಎಡಿಸಿ ವೀಣಾ, ಮೆಸ್ಕಾಂ ನಿರ್ದೇಶಕ ದಿನೇಶ್‌ ಪೈ, ಜಿ.ಪಂ. ಸಿಇಒ ಪ್ರಸನ್ನ ಎಚ್‌., ಡಿಸಿಎಫ್ ಗಣಪತಿ, ಕುಂದಾಪುರ ವಿಭಾಗದ ಡಿಸಿಎಫ್ ಆಶಿಶ್‌ ಶೆಟ್ಟಿ, ಎಸಿಎಫ್ ಕಾಜಲ್‌, ತಹಶೀಲ್ದಾರ್‌ ಪುರಂದರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಶಶಿಧರ್‌ ಉಪಸ್ಥಿತರಿದ್ದರು. ಪಿಡಿಒ ಪ್ರಕಾಶ್‌ ಸ್ವಾಗತಿಸಿದರು. ತಹಶಿಲ್ದಾರ್‌ ಪುರಂದರ ಪ್ರಸ್ತಾವನೆ ಗೈದರು. ರತ್ನಾಕರ ಪೂಜಾರಿ ನಿರ್ವಹಿಸಿದರು.ಈ ಸಂದರ್ಭ 150 ಅರ್ಜಿಗಳು ಸಲ್ಲಿಕೆಯಾದವು.

ಶಾಲೆ ಕಟ್ಟಡ ದುರಸ್ತಿಗೆ ಸೂಚನೆ
ಮುನಿಯಾಲಿನ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಪ್ರಾಥಮಿಕ ವಿಭಾಗದ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು ಕೂಡಲೇ ದುರಸ್ತಿ ಪಡಿಸಬೇಕು ಎಂದು ನಾಗರಿಕರು ಮನವಿ ಮಾಡಿದರು. ತ್ವರಿತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಕ್ಷಣ ಇಲಾಖೆ ಅಧಿಕಾರಿಗೆ ಸೂಚಿಸಿ ತತ್‌ಕ್ಷಣ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಅಪಾಯಕಾರಿ ಕಟ್ಟಡದಿಂದ ಮಕ್ಕಳನ್ನು ಸ್ಥಳಾಂತರಿಸುವಂತೆ ಸೂಚಿಸಿದರು.

ಬಸ್‌ ವ್ಯವಸ್ಥೆಗೆ ಮನವಿ: ಅಂಡಾರು ಗ್ರಾಮದಿಂದ ಹೆಬ್ರಿಗೆ ಬಸ್‌ ಸಂಚಾರ ಮಾಡುವಂತೆ ನೂರಾರು ಗ್ರಾಮಸ್ಥರು ಸಹಿ ಸಂಗ್ರಹಿಸಿ ಮನವಿ ಮಾಡಿದರು. ಖಾಸಗಿ ಬಸ್‌ನವರೊಂದಿಗೆ ಮಾತನಾಡಿ ಹೆಬ್ರಿ-ಕಾರ್ಕಳ ನಡುವೆ ಸಂಚರಿಸುವ ಕೆಲವೊಂದು ಬಸ್‌ಗಳನ್ನು ಅಂಡಾರು ಮಾರ್ಗವಾಗಿ ಸಂಚಾರ ಮಾಡುವಂತೆ ತಹಶಿಲ್ದಾರ್‌ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next