Advertisement

 ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣ: ಅನ್ಯಜಿಲ್ಲೆಯ ಬಾಲ್ಯವಿವಾಹ ಸವಾಲು

08:36 PM Sep 21, 2021 | Team Udayavani |

ಉಡುಪಿ: ಉತ್ತರ ಕನ್ನಡ ಭಾಗದಲ್ಲಿ ಈಗಲೂ ಚಾಲ್ತಿಯಲ್ಲಿರುವ ಬಾಲ್ಯವಿವಾಹ ಪದ್ಧತಿ ಉಡುಪಿ ಜಿಲ್ಲೆಯ ಪಾಲಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಜಿಲ್ಲೆಯಲ್ಲಿ ದಾಖಲಾಗುವ ಪೋಕ್ಸೋ ಪ್ರಕರಣದಲ್ಲಿ ಶೇ.80ಕ್ಕೂ ಅಧಿಕ ಪ್ರಕರಣಗಳು ಅನ್ಯಜಿಲ್ಲೆಯ ಮಂದಿಯದ್ದೇ ಆಗಿವೆ.

Advertisement

ಹೊರಜಿಲ್ಲೆಯಲ್ಲಿ ಮದುವೆ ಆಗಿಕೊಂಡು ಉದ್ಯೋಗ ಅರಸಿ ಉಡುಪಿ ಜಿಲ್ಲೆಗೆ ಆಗಮಿ ಸುವಾಗ ಇಂತಹ ಪ್ರಕರಣ ಬೆಳಕಿಗೆ ಬರುತ್ತವೆ. ಯುವತಿ ಗರ್ಭವತಿಯಾಗಿ ಆಸ್ಪತ್ರೆಗೆ ದಾಖ ಲಾಗುವ ವೇಳೆ ಸಂಬಂಧ ಪಟ್ಟ ವರಿಗೆ ಮಾಹಿತಿ ಲಭಿಸುತ್ತದೆ. ಈ ವೇಳೆ ಅವರನ್ನು ಗುರುತಿಸಿ ಪೋಕ್ಸೋ ಪ್ರಕರಣ ದಾಖಲಿಸಲಾಗುತ್ತದೆ.

ಹಲವು ಕಾರಣ:

ಜಿಲ್ಲೆಯಲ್ಲಿ ದಾಖಲಾದ ಹೆಚ್ಚಿನ ಪ್ರಕರಣ ಗಳು ಬೀದರ್‌, ಬಿಜಾಪುರ, ಗದಗ, ಬೆಳಗಾಂ, ಬಾಗಲಕೋಟೆ, ಬಳ್ಳಾರಿ, ಹಾವೇರಿ ಮೂಲ ದವರದ್ದಾಗಿದೆ. ಅವರಲ್ಲಿ ಮದುವೆಯಾದ ಬಗ್ಗೆ ಯಾವ ದಾಖಲೆಯೂ ಇರುವುದಿಲ್ಲ. ತಮ್ಮ ಊರಿನಲ್ಲಿ ಕುಟುಂಬದೊಳಗೆ, ಸಂಬಂಧಿಕರೊಂದಿಗೆ ಮದುವೆಯಾಗುತ್ತಾರೆ. ಮುಖ್ಯವಾಗಿ ಆಸ್ತಿ ಬೇರೆಯವರ ಪಾಲಾಗ ಬಾರದು ಎಂಬ ಕಾರಣಕ್ಕೆ ಬಾಲ್ಯದಲ್ಲಿಯೇ ವಿವಾಹ ನಿಗದಿಯಾಗಿರುತ್ತದೆ. ಇಂಥ‌ವರು ಅನ್ಯ ಜಿಲ್ಲೆಗೆ ಹೋಗಿ ನೆಲೆಸಿದಾಗ ಸಮಸ್ಯೆ ಕಂಡುಬರುತ್ತದೆ.

ಸ್ವಯಂಪ್ರೇರಿತ ದೂರು  ದಾಖಲಿಸಲು ಅವಕಾಶ :‌

Advertisement

ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಅಧಿನಿಯಮ-2016ರ ಪ್ರಕಾರ ಪ್ರತೀ ಬಾಲ್ಯ ವಿವಾಹವು ಪ್ರಾರಂಭದಿಂದಲೇ ಅನೂರ್ಜಿತವಾಗುತ್ತದೆ. ಬಾಲ್ಯ ವಿವಾಹ ಕಂಡುಬಂದಲ್ಲಿ ಆಯಾ ಪೊಲೀಸ್‌ ಠಾಣೆಯ ಅಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲು ಅವಕಾಶವಿದೆ. ಈ ಕಾಯ್ದೆಯಡಿ ಮಹಿಳೆಯರೂ ಜೈಲು ವಾಸ ಶಿಕ್ಷೆಗೆ ಅರ್ಹರಾಗಿರುತ್ತಾರೆ. 2011ರ ನವೆಂಬರ್‌ ತಿಂಗಳಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯದಡಿ ಬಾಲ್ಯ ವಿವಾಹ ನಿಷೇಧ ಉಸ್ತುವಾರಿ ಕೋಶವನ್ನು ಸ್ಥಾಪಿಸಲಾಗಿದೆ. ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಜಿಲ್ಲಾಮಟ್ಟದ ಸಮಿತಿಗಳು ನಿರಂತರವಾಗಿ ಶ್ರಮಿಸುತ್ತಿವೆ. ಉಡುಪಿ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳಿಲ್ಲ. ಆದರೆ ಅನ್ಯ ಜಿಲ್ಲೆಯಲ್ಲಿ ಇದು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದಕ್ಕೆ ಕಡಿವಾಣ ಅತ್ಯಗತ್ಯವಾಗಿದೆ.

ಬಾಲ್ಯವಿವಾಹವನ್ನು ಕಟ್ಟುನಿಟ್ಟಾಗಿ ನಿಷೇಧಿಸಿದರಷ್ಟೇ ಪೋಕೊÕà ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿದೆ. ಸ್ಥಳೀಯವಾಗಿ ಪೋಕ್ಸೋ ಪ್ರಕರಣಗಳು ನಡೆಯುವುದು ವಿರಳ. ಅನ್ಯ ಜಿಲ್ಲೆಯಲ್ಲಿ ಮದುವೆಯಾಗಿ ಕೆಲಸ ಅರಸಿ ಜಿಲ್ಲೆಗೆ ಆಗಮಿಸಿದಾಗ ಒಂದೊಂದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕುಮಾರ್‌ ನಾಯ್ಕ,  ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ (ಪ್ರಭಾರ)

 

-ವಿಶೇಷ ವರದಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next