ಮಲ್ಪೆ: ದೀಪಕ್ಕೆ ಹಚ್ಚಿದ ಬೆಂಕಿ ಸೀರೆಗೆ ತಗಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕಲ್ಯಾಣಪುರ ನೇಜಾರಿನ ಪ್ರೇಮಾ ಆರ್. ಕಾಮತ್ (89) ಅವರು ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾರೆ.
Advertisement
ಅ. 24ರ ದೀಪಾವಳಿ ಹಬ್ಬದಂದು ಮನೆಯಂಗಳದಲ್ಲಿ ಹಚ್ಚಿದ್ದ ಹಣತೆಯ ಬೆಂಕಿ ಅವರು ಉಟ್ಟಿದ್ದ ಸೀರೆಗೆ ಹತ್ತಿಕೊಂಡಿತ್ತು. ತತ್‌ಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿತ್ತು. ಚೇತರಿಸಿಕೊಳ್ಳದ ಅವರನ್ನು ಅಲ್ಲಿಂದ ಕಲ್ಯಾಣಪುರದ ಗೊರಟ್ಟಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ಇದನ್ನೂ ಓದಿ : ವಿವಿಧೆಡೆ ಹೆಜ್ಜೇನು ದಾಳಿ; ಓರ್ವ ಮಹಿಳೆ ಸಾವು, ಇನ್ನೋರ್ವ ಮಹಿಳೆ ಆಸ್ಪತ್ರೆಗೆ ದಾಖಲು