Advertisement
ಜಿಲ್ಲಾಧಿಕಾರಿಯ ಬಳಿ ಅಳಲು ತೋಡಿಕೊಂಡ ವಯೋವೃದ್ಧೆ : ಜಿಲ್ಲಾಧಿಕಾರಿ ಅವರು ಗ್ರಾಮಕರಣಿಕರ ಕಚೇರಿಯಲ್ಲಿ ಕಡತವನ್ನು ಪರಿಶೀಲಿಸಿ, ಅನಂತರ ತೆಕ್ಕಟ್ಟೆ ಗ್ರಾ.ಪಂ.ಕಚೇರಿಗೆ ಆಗಮಿಸಿದ ಸಾರ್ವಜನಿಕರ ಬಳಿ ಗ್ರಾಮ ಮಟ್ಟದ ಅಧಿಕಾರಿಗಳ ಕಾರ್ಯವೈಖರಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಆಶ್ರಯ ಯೋಜನೆಗಾಗಿ ಅರ್ಜಿ ಸಲ್ಲಿಸಲು ಬಂದಿದ್ದ ಆಲುಗುಡ್ಡೆ ನಿವಾಸಿ ಬಾಬಿ (60) ಎಂಬ ಬಡ ವಯೋವೃದ್ಧೆಯೋರ್ವರು ಇದ್ದ ಹಳೆಯ ಮನೆ ಸೋರುತ್ತಿದ್ದು ಅದನ್ನು ಕೆಡವಲಾಗಿದೆ. ಆದರೆ ಪ್ರಸ್ತುತ ಸರಕಾರ ಈಗ ಮನೆ ನಿರ್ಮಾಣದ ಅರ್ಜಿ ಸ್ವೀಕಾರವನ್ನು ಸ್ಥಗಿತಗೊಳಿಸಿದೆ. ಅಲ್ಲದೆ ಆಶ್ರಯಿಸಲು ಸೂರು ಇಲ್ಲ. ಮಳೆಯಿಂದ ರಕ್ಷಣೆಗಾಗಿ ಬೇರೆಯವರ ಮನೆಯನ್ನು ಆಶ್ರಯಿಸಿದ್ದೇನೆ ಎಂದು ತನ್ನ ಅಳಲು ತೋಡಿಕೊಂಡರು.
Related Articles
Advertisement
ಈ ಸಂದರ್ಭದಲ್ಲಿ ಬೈಂದೂರು ತಾಲೂಕಿನ ಉಪ ತಹಶೀಲ್ದಾರ್ ನರಸಿಂಹ ಕಾಮತ್, ಗ್ರಾಮಲೆಕ್ಕಾಧಿಕಾರಿ ದೀಪಿಕಾ ಶೆಟ್ಟಿ, ಪಿಡಿಒ ಸುನಿಲ್, ಗ್ರಾ.ಪಂ. ಸದಸ್ಯ ವಿಜಯ ಭಂಡಾರಿ. ಕಾರ್ಯದರ್ಶಿ ಚಂದ್ರ , ಗ್ರಾಮ ಸಹಾಯಕ ಚಂದ್ರ ದೇವಾಡಿಗ ಹಾಗೂ ಗ್ರಾ.ಪಂ. ಸಿಬಂದಿ ಉಪಸ್ಥಿತರಿದ್ದರು.
ಗ್ರಾಮ ಮಟ್ಟದ ಅಧಿಕಾರಿಗಳ ಕಾರ್ಯವೈಖರಿಗಳನ್ನು ಪರಿಶೀಲಿಸುವ ನಿಟ್ಟಿನಿಂದ ಗ್ರಾಮಗಳಿಗೆ ತೆರಳಿ ದಫ್ತಾ ತಪಾಸಣೆ ಮಾಡುತ್ತಿದ್ದೇನೆ. ಅಲ್ಲದೆ ಸಾರ್ವಜನಿಕರಿಗೆ ಅಧಿಕಾರಿಗಳ ಸ್ಪಂದನೆ ಹಾಗೂ ಯಾವುದಾದರೂ ಲೋಪದೋಷಗಳಿವೆ ಎನ್ನುವುದನ್ನು ಕೂಲಂಕಷವಾಗಿ ಪರೀಕ್ಷಿಸಲಾಗುವುದು. ತೆಕ್ಕಟ್ಟೆ ಗ್ರಾಮ ಕರಣಿಕರ ಕಚೇರಿಯ ದಾಖಲಾತಿಗಳು ಅತ್ಯಂತ ಪಾರದರ್ಶಕವಾಗಿದೆ ಹಾಗೂ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ.– ಜಿ.ಜಗದೀಶ್ ಜಿಲ್ಲಾಧಿಕಾರಿ, ಉಡುಪಿ.