Advertisement

ಬೀಚ್‌ನಲ್ಲಿ ಪ್ರವಾಸಿಗರ ಸುರಕ್ಷೆಗೆ ಗರಿಷ್ಠ ಆದ್ಯತೆ ನೀಡಿ: ಕೂರ್ಮಾ ರಾವ್‌

12:12 PM Nov 17, 2022 | Team Udayavani |

ಉಡುಪಿ: ಮಲ್ಪೆ ಬೀಚ್‌ ಮತ್ತು ಸೈಂಟ್‌ ಮೇರಿಸ್‌ ದ್ವೀಪಕ್ಕೆ ಅಗಮಿಸುವ ಪ್ರವಾಸಿಗರ ಸುರಕ್ಷೆಗೆ ಬೀಚ್‌ ನಿರ್ವಹಣೆ ವಹಿಸಿಕೊಂಡಿರುವವರು ಗರಿಷ್ಠ ಆದ್ಯತೆ ನೀಡಬೇಕು. ಪ್ರತ್ಯೇಕ ಪ್ರಮಾಣೀಕೃತ ಕಾರ್ಯ ವಿಧಾನಗಳನ್ನು (ಎಸ್‌ಒಪಿ) ರಚಿಸಿ ಅದರನ್ವಯ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ. ಸೂಚನೆ ನೀಡಿದರು.

Advertisement

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಲ್ಪೆ ಬೀಚ್‌ಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಅವಘಡಗಳು ಸಂಭವಿಸದಂತೆ ಪಾಲಿಸಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ವಿವಿಧೆಡೆಗಳಲ್ಲಿ ಇರುವ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅಧ್ಯಯನ ಮಾಡಿ, ಮಲ್ಪೆ ಬೀಚ್‌ನಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ ಪ್ರತ್ಯೇಕ ಎಸ್‌ಒಪಿ ರಚಿಸಿ, ಅದರಂತೆ ಬೀಚ್‌ ಉಸ್ತುವಾರಿ ವಹಿಸಿಕೊಂಡಿರುವವರು ಮತ್ತು ಜೀವ ರಕ್ಷಕರು ಕಾರ್ಯನಿರ್ವ ಹಿಸುವ ಮೂಲಕ ಪ್ರವಾಸಿಗರು ಅತ್ಯಂತ ಸುರಕ್ಷಿತ ವಾತಾವರಣದಲ್ಲಿ ತಮ್ಮ ಪ್ರವಾಸ ಕ್ಷಣಗಳನ್ನು ಆನಂದಿಸಲು ವ್ಯವಸ್ಥೆ ಮಾಡಬೇಕು ಎಂದರು.

ಜ. 21-23: ಬೀಚ್‌ ಉತ್ಸವ
ಬೀಚ್‌ನಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಅಂಗಡಿಗಳ ಕುರಿತು, ಆಹಾರ ಸುರಕ್ಷಾ ಅಧಿಕಾರಿಗಳು, ನಗರಸಭೆ ಮತ್ತು ಪೊಲೀಸ್‌ ಇಲಾಖೆ ಜಂಟಿ ತಪಾಸಣೆ ನಡೆಸಿ ವರದಿ ನೀಡಬೇಕು. ರಜತ ಮಹೋತ್ಸವ ಅಂಗವಾಗಿ 2023ರ ಜ. 21ರಿಂದ 23ರ ವರೆಗೆ ಬೀಚ್‌ ಉತ್ಸವ ಆಯೋಜಿಸುವ ಕುರಿತಂತೆ ಹಾಗೂ ಮಲ್ಪೆ ಹಾಗೂ ಪಡುಕೆರೆಯಲ್ಲಿರುವ ಬಂದರು ಇಲಾಖೆ ಜಾಗವನ್ನು ಉಪಯೋಗಿಸಿಕೊಂಡು ಆ ಪ್ರದೇಶ ದಲ್ಲಿ ಹೆಚ್ಚಿನ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಿತು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ಸ್ಥಾಯೀ ಸಮಿತಿ ಅಧ್ಯಕ್ಷ ಡಿ. ಬಾಲಕೃಷ್ಣ ಶೆಟ್ಟಿ, ಮೀನುಗಾರಿಕಾ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಜಿ.ಪಂ. ಸಿಇಒ ಪ್ರಸನ್ನ, ಪೌರಾಯುಕ್ತ ಉದಯ ಕುಮಾರ್‌ ಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ (ಪ್ರಭಾರ) ಗುರುಪ್ರಸಾದ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಪಡುಕೆರೆ ಬೀಚ್‌ಗೆ ಪ್ರತ್ಯೇಕ ಸಮಿತಿ
ಮಲ್ಪೆ ಅಭಿವೃದ್ಧಿ ಸಮಿತಿ ಮಾದರಿಯಲ್ಲಿ ಪಡುಕೆರೆ ಬೀಚ್‌ ಅಭಿವೃದ್ಧಿಗೂ ಸಹ ಪ್ರತ್ಯೇಕ ಸಮಿತಿ ರಚಿಸಿ, ಪಡುಕೆರೆಯಲ್ಲಿ ಹೆಚ್ಚಿನ ಪ್ರವಾಸೋದ್ಯಮ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸುವಂತೆ ಸೂಚಿಸಿದ ಶಾಸಕ ರಘುಪತಿ ಭಟ್‌, ಮಲ್ಪೆ ಬೀಚ್‌ನ ಉತ್ತರಭಾಗದಲ್ಲಿ ಪ್ರವಾಸೋದ್ಯ ಮವನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿದ್ದು, ಈ ಬಗ್ಗೆ ಮಾಸ್ಟರ್‌ ಪ್ಲಾನ್‌ ತಯಾರಿಸುವಂತೆ ಸೂಚಿಸಿದರು.

ಪ್ರವಾಸಿಗರ ಸ್ನೇಹಿಯಾಗಿ ವರ್ತಿಸಿ
ಬೀಚ್‌ ನಿರ್ವಹಣ ಸಂಸ್ಥೆಯ ಸಿಬಂದಿಗೆ ಪ್ರವಾಸಿಗರ ಸ್ನೇಹಿಯಾಗಿ ವರ್ತಿಸುವ ಬಗ್ಗೆ ಮತ್ತು ಸುರಕ್ಷಾ ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮತ್ತು ನಿರಂತರವಾಗಿ ಪಾಲನೆ ಮಾಡಲು ತರಬೇತಿ ಕಾರ್ಯಾಗಾರ ಆಯೋಜಿಸಬೇಕು ಎಂದು ಡಿಸಿ ಹೇಳಿದರು. ಬೋಟುಗಳಲ್ಲಿ ಲೈಫ್ ಜಾಕೆಟ್‌ ಇಲ್ಲದೆ ಪ್ರಯಾಣಿಕರನ್ನು ಕರೆದುಕೊಂಡು ಹೋದಲ್ಲಿ ಸಂಬಂಧಪಟ್ಟ ಬೋಟುಗಳಿಗೆ ದಂಡ ವಿಧಿಸಲಾಗುವುದು ಮತ್ತು ಲೈಸನ್ಸ್‌ ರದ್ದುಪಡಿಸಲಾಗುವುದು ಎಂದ ಅವರು ಈ ಬಗ್ಗೆ ಕರಾವಳಿ ಕಾವಲು ಪಡೆ ವತಿಯಿಂದ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದರು.

ಇದನ್ನೂ ಓದಿ : ವಿಡಿಯೋ: ಚಾಲಕನ ಅಶ್ಲೀಲ ಪ್ರಶ್ನೆಗೆ ಹೆದರಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಬಾಲಕಿ ಗಂಭೀರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next