Advertisement

ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವರ್ಗಾವಣೆ..?

06:06 PM Aug 11, 2021 | Team Udayavani |
ದೇಶದಲ್ಲಿ ಮತ್ತೆ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಏರಿಕೆ ಭಾರತದಲ್ಲಿ ಮತ್ತೆ ಸೋಂಕಿನ ಪ್ರಮಾಣ ಏರಿಕೆಯಾಗಿದೆ.  ಕಳೆದ 24ಗಂಟೆಗಳಲ್ಲಿ 38,353 ನೂತನ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 497 ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ(ಆಗಸ್ಟ್ 11) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ. ಅದಲು ಬದಲು ಲಸಿಕಾ ಸ್ವೀಕಾರಕ್ಕೆ ಡಿಸಿಜಿಐ ಅನುಮತಿ  ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಅದಲು ಬದಲು ಲಸಿಕೆ ಸ್ವೀಕಾರಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ. ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು, ವೆಲ್ಲೂರ್ ನಡೆಸಿದ ಅದಲು ಬದಲು ಲಸಿಕಾ ವೈದ್ಯಕೀಯ ಪ್ರಯೋಗಗಳನ್ನು ಡಿಸಿಜಿಐ ಅನಮತಿಸಿದೆ. ರಾಹುಲ್ ಪೋಸ್ಟ್ ನಮ್ಮ ಪಾಲಿಸಿಗೆ ವಿರುದ್ಧವಾಗಿದೆ : ಟ್ವೀಟರ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವೀಟರ್ ಖಾತೆ ತಾತ್ಕಾಲಿಕವಾಗಿ ಬ್ಲಾಕ್ ಮಾಡಿರುವುದನ್ನು ಟ್ವೀಟರ್ ಇಂಡಿಯಾ ಸಂಸ್ಥೆ ಸಮರ್ಥಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಗೆ  ಪ್ರತಿಕ್ರಿಸಿದ ಟ್ವೀಟರ್, ರಾಹುಲ್ ಗಾಂಧಿ ಅವರು ಪೋಸ್ಟ್ ನಮ್ಮ ಪಾಲಿಸಿಗೆ ವಿರುದ್ಧವಾಗಿತ್ತು ಎಂದು ಹೇಳಿದೆ. ಅಫ್ಘಾನಿಸ್ತಾನದ ಎಂಟನೇ ನಗರ ತಾಲಿಬಾನ್ ವಶಕ್ಕೆ..! ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರು ಇಂದು ಉತ್ತರ ಅಫ್ಘಾನಿಸ್ತಾನದ ಮತ್ತೊಂದು ಪ್ರಾಂತೀಯ ನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿ ತಿಳಿಸಿದೆ. ಇದರೊಂದಿಗೆ ಕಳೆದ ಆರು ದಿನಗಳಲ್ಲಿ ಎಂಟು ನಗರಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿರುವುದಾಗಿ ಹೇಳಿದೆ. ವರಿಷ್ಠರಿಂದ ಯಾವುದೇ ಸೂಚನೆ ಈವರೆಗೆ ಬಂದಿಲ್ಲ : ಬೊಮ್ಮಾಯಿ ಆನಂದ್ ಸಿಂಗ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಎಲ್ಲವೂ ಬಗೆ ಹರಿಯುವ ವಿಶ್ವಾಸ ಇದೆ. ಖಾತೆ ಬದಲಾವಣೆಯ ವಿಚಾರದ ಬಗ್ಗೆ  ವರಿಷ್ಠರಿಂದ ಯಾವುದೇ ಸೂಚನೆ ಈವರೆಗೆ ಬಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದ ನಾಯಕರೂ ಮಾತನಾಡುತ್ತಾರೆ. ಆನಂದ್ ಸಿಂಗ್ ಜೊತೆ ಮಾತಾಡಿದ ಮೇಲೆ ವರಿಷ್ಟರ ಜೊತೆ ಚರ್ಚೆ ಮಾಡುತ್ತೇನೆ ಎಂದಿದ್ದಾರೆ. ಬೆಂಕಿ ಬಂಡಾಯ ಏನೂ ಇಲ್ಲ : ಶ್ರೀರಾಮುಲು ನಮಗೆ ಬೆಂಕಿ ಬಂಡಾಯ ಏನೂ ಇಲ್ಲ ನಮ್ಮದು ಶಿಸ್ತಿನ ಪಕ್ಷ, ನಮ್ಮ ಹೈಕಮಾಂಡ್ ಇದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವ ಅಸಮಾಧಾನ ಇಲ್ಲ, ನಮ್ಮದು ಶಿಸ್ತಿನ ಪಕ್ಷ,  ಹೈಕಮಾಂಡ್ ಎಲ್ಲವನ್ನು ನಿರ್ಧರಿಸುತ್ತದೆ ಎಂದಿ ಹೇಳಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ವರ್ಗಾವಣೆ..? ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಸುದ್ದಿಗಳು ಹರಿದಾಡುತ್ತಿದೆ.  ಆದರೆ ಈ ಬಗ್ಗೆ ಈವರೆಗೆ ಯಾವುದೇ ಅಧಿಕೃತ ಆದೇಶ ಬಂದಿಲ್ಲ ಎಂದು ವರದಿ ಹೇಳಿದೆ. ಸುದ್ದಿ ಮೂಲಗಳ ಪ್ರಕಾರ, ಜಿಲ್ಲಾಧಿಕಾರಿ ಜಗದೀಶ್ ಅವರನ್ನು ಮುಖ್ಯಮಂತ್ರಿ ಕಚೇರಿಗೆ ವರ್ಗಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ನಾನು ಎಂಗೇಜ್ ಆಗಿದ್ದೇನೆ : ಬಹುಭಾಷಾ ನಟಿ ನಯನತಾರಾ ಬಹುಭಾಷಾ ನಟಿ, ಲೇಡಿ ಸೂಪರ್​ಸ್ಟಾರ್​ ನಯನತಾರಾ ಕೊನೆಗೂ ತಾವು ಎಂಗೇಜ್ ಮೆಂಟ್ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಈ ಬಗ್ಗೆ ಹಂಚಿಕೊಂಡಿರುವ ನಯನತಾರಾ, ತಮ್ಮ ಬಹುಕಾಲದ ಗೆಳೆಯ ವಿಘ್ನೇಶ್​ ಶಿವನ್​ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next