Advertisement

ಸಂಚಾರಿ ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮ: ಜಿಲ್ಲಾಧಿಕಾರಿ ಜಿ.ಜಗದೀಶ್

05:45 PM Jun 01, 2020 | sudhir |

ಉಡುಪಿ: ಸಂಚಾರಿ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಡೆಯಬೇಕು. ತಪ್ಪಿದಲ್ಲಿ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಎಚ್ಚರಿಸಿದ್ದಾರೆ.

Advertisement

ಲಾಕ್‌ ಡೌನ್‌ ಸಮಯದಲ್ಲಿ ವಾಹನಗಳ ಸಂಚಾರ ವಿರಳವಾದ ಕಾರಣ ಇತ್ತೀಚಿಗೆ ಅಪಘಾತಗಳ ಸಂಖ್ಯೆ ಇಳಿಮುಖವಾಗಿರುತ್ತದೆ. ಲಾಕ್‌ ಡೌನ್‌ ಸಡಿಲಗೊಳಿಸಿ ಅನೇಕ ವಿನಾಯಿತಿಗಳನ್ನು ನೀಡಲಾಗಿದೆ. ಇದರಿಂದಾಗಿ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ರಸ್ತೆಗಳಲ್ಲಿ ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದೆ ದ್ವಿಚಕ್ರ ವಾಹನ ಸವಾರರು ತಮಗೆ ನಿಗದಿಪಡಿಸಿದ ಪಥದಲ್ಲಿ ಸಂಚರಿಸದೆ ಅತಿ ವೇಗದಲ್ಲಿ ಮೊದಲ ಪಥಗಳಲ್ಲಿ ಸಂಚರಿಸುತ್ತಿರುವ ಕಾರಣ ಅಪಘಾತಗಳಾಗುತ್ತಿರುವುದನ್ನು ಗಮನಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿ 3 ಜನರು ಸಂಚರಿಸುವುದು, ಹೆಲ್ಮೆಟ್‌ ಧರಿಸದೆ ಇರುವುದು, ಮಾಸ್ಕ್ ಧರಿಸದೆ ಇರುವುದು ಕಂಡು ಬಂದಿರುತ್ತದೆ. ಇಂತಹ ಅತಿರೇಕಗಳಿಂದ ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚುತ್ತಿರುವುದು ಕಳವಳಿಕಾರಿಯಾದ ವಿಷಯವಾಗಿದೆ.

ಮಳೆಗಾಲದ ಪ್ರಾರಂಭದಲ್ಲಿ ಗ್ರೀಸ್‌, ಆಯಿಲ್‌ ಇತ್ಯಾದಿಗಳು ರಸ್ತೆಗೆ ಬಿದ್ದಿರುವ ಕಾರಣಗಳಿಂದಾಗಿ ಎಲ್ಲಾ ರೀತಿಯ ವಾಹನಗಳು ಸ್ಕಿಡ್‌ ಆಗಿ ಅಪಘಾತಗಳು ಸಂಭವಿಸುತ್ತಿವೆ.

ಅತೀ ಜಾಗ್ರತೆಯಿಂದ ನಿಯಮಿತ ವೇಗದಲ್ಲಿ ವಾಹನ ಚಲಾಯಿಸಬೇಕು ಮತ್ತು ಸಂಚಾರಿ ನಿಯಮಗಳನ್ನು ಪಾಲಿಸಿ ನಿಗದಿತ ಪಥಗಳಲ್ಲಿಯೆ ಸಂಚರಿಸಬೇಕು, ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ಅಪಘಾತಗಳಾಗುವುದನ್ನು ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ ಸಂಚರಿಸಬೇಕಾಗಿದೆ. ತಪ್ಪಿದಲ್ಲಿ ಕಠಿನ ಕಾನೂನು ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next