Advertisement

ಉಡುಪಿ, ದ.ಕ. ಜಿಲ್ಲೆಯ 430 ಮದ್ಯದಂಗಡಿ ಬಂದ್‌ !

03:45 AM Jul 02, 2017 | Harsha Rao |

ಕಾಪು: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿ ಬದಿಯಲ್ಲಿ ಮದ್ಯ ಪೂರೈಸುತ್ತಿದ್ದ 430ಕ್ಕೂ ಅಧಿಕ ಮದ್ಯದಂಗಡಿಗಳು ಅಬಕಾರಿ ಇಲಾಖೆಯ ಸೂಚನೆಯಂತೆ ಸುಪ್ರೀಂ ಕೋರ್ಟ್‌ನ ಆದೇಶದಂತೆ ಸ್ವಯಂ ಪ್ರೇರಿತವಾಗಿ ವ್ಯವಹಾರವನ್ನು ಸ್ಥಗಿತಗೊಳಿಸಿವೆ.

Advertisement

ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ ಜನಸಂಖ್ಯೆಯ ಆಧಾರದಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಕ್ರಮವಾಗಿ 220 ಮೀಟರ್‌ ಮತ್ತು 500 ಮೀಟರ್‌ ವ್ಯಾಪ್ತಿಯಲ್ಲಿ ಬರುವ ಮದ್ಯದಂಗಡಿ, ಬಾರ್‌ ಮತ್ತು ವೈನ್‌ಶಾಪ್‌ಗ್ಳನ್ನು ಜೂ. 30ರೊಳಗೆ ತೆರವುಗೊಳಿಸಲು ಸರಕಾರ ಅಬಕಾರಿ ಇಲಾಖೆಯ ಮೂಲಕ ಆದೇಶ ಹೊರಡಿಸಿತ್ತು.

ಅದರಂತೆ ಉಡುಪಿ ಜಿಲ್ಲೆಯ ಹೆದ್ದಾರಿ ಬದಿಯಲ್ಲಿರುವ 230 ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 200ಕ್ಕೂ ಅಧಿಕ ಮದ್ಯದಂಗಡಿಗಳು ಮದ್ಯ ಮಾರಾಟ ಪ್ರಕ್ರಿಯೆಯನ್ನು ಶುಕ್ರವಾರ ರಾತ್ರಿಯಿಂದಲೇ ಸ್ಥಗಿತಗೊಳಿಸಿವೆ.

ರೆಸ್ಟೋರೆಂಟ್‌ ಮೇಲೂ ಇಲಾಖೆ ಕಣ್ಣು
ಶುಕ್ರವಾರ ರಾತ್ರಿಯ ವರೆಗೆ ಬಾರ್‌ಗಳ ಮೇಲೆ ಮಾತ್ರ ತೂಗಾಡುತ್ತಿದ್ದ ಅಬಕಾರಿ ಇಲಾಖೆಯ ತೂಗು
ಗತ್ತಿ ರೆಸ್ಟೋರೆಂಟ್‌ಗಳ ಮೇಲೂ ತೂಗಲಾರಂಭಿಸಿದೆ. ಸಿಎಲ್‌ – 9 ಲೈಸನ್ಸ್‌ ಹೊಂದಿರುವ ಬಾರ್‌ ವಿತ್‌ ಅಟ್ಯಾಚ್‌ಡ್‌ ರೆಸ್ಟೋರೆಂಟ್‌ಗಳನ್ನು ಕೂಡ ಮುಂದಿನ ಆದೇಶದವರೆಗೆ ತೆರೆಯದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮೌಖೀಕ ಆದೇಶ ನೀಡಿದ್ದು, ಹೆದ್ದಾರಿ ಬದಿಯಲ್ಲಿ ಹಾಗೂ ಪ್ರಮುಖ ಪೇಟೆ ಮತ್ತು ಪಟ್ಟಣ ಪ್ರದೇಶಗಳಲ್ಲಿ ನಾನ್‌ವೆಜ್‌ ಊಟಕ್ಕೂ ಜನ ಪರದಾಡುವಂತಾಗಿದೆ.

ಸಿಎಲ್‌ – 7 ರೆಸ್ಟೋರೆಂಟ್‌ಗಳಿಗೆ ಮಾತ್ರ ರೆಸ್ಟೋರೆಂಟ್‌ ಅವಕಾಶ ಅಬಕಾರಿ ಇಲಾಖೆ ನೀಡುವ ಬಾರ್‌ ಲೈಸನ್ಸ್‌ಗಳನ್ನು ಸಿಎಲ್‌-7 (ಪ್ರವಾಸೋದ್ಯಮ ಇಲಾಖೆಯಡಿ ನೋಂದಾಯಿತ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌), ಸಿಎಲ್‌-9 (ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌), ಸಿಎಲ್‌-2 (ವೈನ್‌ಶಾಪ್‌) ಲೈಸನ್ಸ್‌ಗಳನ್ನಾಗಿ ವಿಂಗಡಿಸಲಾಗಿದ್ದು, ಇದರಲ್ಲಿ ಸಿಎಲ್‌-9 ಮತ್ತು ಸಿಎಲ್‌-2 ಲೈಸನ್ಸ್‌ ಹೊಂದಿರುವವರಿಗೆ ಮದ್ಯದಂಗಡಿಗಳನ್ನು ಸ್ಥಳಾಂತರಿಸಲು ಅವಕಾಶವಿದೆ. ಆದರೆ ಸಿಎಲ್‌ -7 ಲೈಸನ್ಸ್‌ ಹೊಂದಿರುವವರ ಬಾರ್‌ ಲೈಸನ್ಸ್‌ ಸಂಪೂರ್ಣ ರದ್ದಾಗಲಿದ್ದು, ಅವರಿಗೆ ರೆಸ್ಟೋರೆಂಟ್‌ ಮುಂದುವರಿಸಲು ಅವಕಾಶ ನೀಡಿದ್ದು, ಇಲಾಖೆ ಇಲ್ಲೂ ಇಬ್ಬಗೆಯ ನೀತಿಯನ್ನು ಅನುಸರಿಸಿದೆ ಎಂದು ಬಾರ್‌ ಮಾಲಕರು ಆರೋಪಿಸುತ್ತಿದ್ದಾರೆ.

Advertisement

ಮದ್ಯಕ್ಕಿಂತ ಹೆಚ್ಚು ಹಣ ಪ್ರಯಾಣಕ್ಕೆ ವ್ಯಯ !
ಪೇಟೆ ಪ್ರದೇಶದಲ್ಲಿರುವ ಮದ್ಯದಂಗಡಿಗಳು ಜು. 1ರಿಂದ ಕಡ್ಡಾಯವಾಗಿ ಮುಚ್ಚಲ್ಪಟ್ಟಿರುವುದರಿಂದ ಪಾನಪ್ರಿಯರು ಪೇಟೆಗಿಂತ ದೂರದ ಮದ್ಯದಂಗಡಿಗೆ ತೆರಳಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಪಾನ ಪ್ರಿಯರು ತಾವು ಕುಡಿಯುವ ಮದ್ಯಕ್ಕಿಂತ ಹೆಚ್ಚಿನ ಹಣವನ್ನು ರಿಕ್ಷಾ ಅಥವಾ ಬಸ್ಸಿನಲ್ಲಿ ತೆರಳಲು ವ್ಯಯಿಸಬೇಕಾದ ಅನಿವಾರ್ಯತೆಗೂ ಸಿಲುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next