Advertisement

ಉಡುಪಿ : ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಫೋಟೋ ಹಾಕಿ ಬೆದರಿಕೆ, ವ್ಯಕ್ತಿಯಿಂದ ದೂರು

08:56 PM May 20, 2022 | Team Udayavani |

ಉಡುಪಿ : ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಫೋಟೋ ಹಾಕಿ ವ್ಯಕ್ತಿಯೋರ್ವರನ್ನು ಬೆದರಿಸಿದ ಘಟನೆ ನಡೆದಿದೆ.

Advertisement

ಪ್ರಸ್ತುತ ಬಾಗಲಕೋಟೆಯ ಮೂಲತಃ ಉಡುಪಿ ನಿವಾಸಿ ಅಶೋಕ್‌ ಶೆಟ್ಟಿ ಅವರು ಇತ್ತೀಚೆಗೆ ಲೂಡೋ ಆ್ಯಪ್‌ ಡೌನ್‌ಲೌಡ್‌ ಮಾಡಿಕೊಂಡಿದ್ದರು. ಸ್ವಲ್ಪ ಸಮಯದ ಬಳಿಕ ಮಹಿಳೆಯೊಬ್ಬರು ವೀಡಿಯೋ ಕರೆ ಮಾಡಿ ಮಾತನಾಡಿದ್ದಾರೆ.

ಅನಂತರ ಅವರ ಫೋಟೋಗಳನ್ನು ಎಡಿಟ್‌ ಮಾಡಿ 25 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾರೆ. ಕೊಡದಿದ್ದಾಗ ಆ ವೀಡಿಯೋವನ್ನು ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಹಾಕಿದ್ದಾರೆ. ಈ ಬಗ್ಗೆ ಅಶೋಕ್‌ ಶೆಟ್ಟಿ ಅವರು ಬಾಗಲಕೋಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ : 2024ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠೆ: ವಿಶ್ವಪ್ರಸನ್ನತೀರ್ಥ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next