ಉಡುಪಿ: ಟಾಸ್ಕ್ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.
ಕಳತ್ತೂರು ಮುರುಳಿಧರ್ ರಾವ್ ಅವರು ಟೆಲಿಗ್ರಾಮ್ ಆ್ಯಪ್‌ನಲ್ಲಿ ಟಾಸ್ಕ್ ನಡೆಸಿ ಹೆಚ್ಚಿನ ಲಾಭ ಪಡೆಯುವ ಬಗ್ಗೆ ಬಂದಿರುವ ಸಂದೇಶವನ್ನು ಗಮನಿಸಿದ್ದರು. ಬಳಿಕ ಟೆಲಿಗ್ರಾಮ್ ಮೂಲಕ ಆ ವ್ಯಕ್ತಿಯನ್ನು ಸಂಪರ್ಕಿಸಿದಾಗ ಆತ ಟಾಸ್ಕ್ ನಡೆಸಲು ಹಣ ಪಾವತಿಸುವಂತೆ ಬ್ಯಾಂಕ್ ಖಾತೆಗಳನ್ನು ನೀಡಿದ್ದ.
ಇದನ್ನು ನಂಬಿದ ಅವರು ಮೇ 12ರಿಂದ 14ರ ನಡುವೆ ಒಟ್ಟು 2,78,000 ರೂ.ಗಳನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು. ಆದರೆ ಬಳಿಕ ಆರೋಪಿಗಳು ಟಾಸ್ಕ್ ನೀಡದೆ ಹಣವನ್ನು ವಾಪಸು ನೀಡದೆ ವಂಚಿಸಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸ್ವಲ್ಪ ಸಮಸ್ಯೆ ಇದೆ…:ಕೊನೆ ಕ್ಷಣದಲ್ಲಿ ಡಿಕೆಶಿ ದೆಹಲಿ ಭೇಟಿ ರದ್ದು