ಉಡುಪಿ: ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ಯುವತಿಗೆ ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಕೋಟೇಶ್ವರದ ನಿವಾಸಿ ರೂಪಶ್ರೀ ಅವರು ವಿದ್ಯಾಭ್ಯಾಸಕ್ಕಾಗಿ ಆನ್‌ಲೈನ್‌ನಲ್ಲಿ ಪುಸ್ತಕಗಳನ್ನು ಖರೀದಿಸಿದ್ದರು. ಆದರೆ ಆರ್ಡರ್ ಮಾಡಿ ವಾರ ಕಳೆದರೂ ಪುಸ್ತಕಗಳು ಬಾರದಿರುವುದನ್ನು ಕಂಡು ಗೂಗಲ್‌ನಲ್ಲಿ ಕೊರಿಯರ್ ಸಂಸ್ಥೆಯ ವಿವರವನ್ನು ಹುಡುಕಾಡಿದ್ದರು. ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಆತ ತಾನು ಕೋರಿಯರ್ ಸಂಸ್ಥೆಯವನೆಂದು ನಂಬಿಸಿ, ರೂಪಶ್ರೀ ಅವರ ಮೊಬೈಲ್‌ಗೆ ಲಿಂಕ್ ಕಳುಹಿಸಿ, ವಿವರ ಪಡೆದು ಎಚ್‌ಡಿಎಫ್ಸಿ ಬ್ಯಾಂಕ್ ಖಾತೆಯಿಂದ 80,602 ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾಗಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪ್ರಕರಣ ದಾಖಲಾಗಿದೆ.