ಉಡುಪಿ: ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಖೋಕನ್ಮನ್ನಾ ಅವರು 5 ವರ್ಷಗಳಿಂದ ಬಾರ್‌ಬೆಂಡಿಂಗ್ ಕೆಲಸ ಮಾಡಿಕೊಂಡಿದ್ದು, 2 ತಿಂಗಳುಗಳಿಂದ ಸಂತೆಕಟ್ಟೆಯ ಹಳೆ ಮಾರುಕಟ್ಟೆ ಬಳಿ ಇರುವ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು.
ಇಲ್ಲಿ ಕೆಲಸ ಮಾಡುತ್ತಿದ್ದ ಇವರ ಊರಿನವರಾದ ಬಿಶುದಾಸ್ (52)ಅವರು ಅಪಾರ್ಟ್‌ಮೆಂಟ್‌ಗೆ ವಿದ್ಯುತ್ ತಗಲಿ ಸರ್ವೀಸ್ ತಂತಿಯನ್ನು ಮರಕ್ಕೆ ಕಟ್ಟಿ ಅಲ್ಲಿಂದ ಅಪಾರ್ಟ್‌ಮೆಂಟ್ ಕಡೆಗೆ ತೆಗೆದುಕೊಂಡು ಬಂದಿದ್ದರು.
ಅಪಾರ್ಟ್‌ಮೆಂಟ್ ಬಳಿ ಇರುವ ಮಾವಿನ ಮರದಿಂದ ಮಾವಿನ ಕಾಯಿ ಕೀಳಲು ಮರ ಹತ್ತಿದ್ದು, ಮಾವಿನ ಮರದಲ್ಲಿ ಕಟ್ಟಿರುವ ವಿದ್ಯುತ್ ಸರ್ವೀಸ್ ವಯರ್‌ನಿಂದ ವಿದ್ಯುತ್ ಹರಿದು ಬಿಶುದಾಸ್ ಮರದಿಂದ ಕೆಳಗೆ ಬಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಇವರ ಸಾವಿಗೆ ಅಪಾರ್ಟ್‌ಮೆಂಟ್ ಸುಪರ್ ವೈಸರ್ ಅಲ್ವಿನ್ ಕ್ರಾಡ್ರಸ್ ಹಾಗೂ ಎಲೆಕ್ಟ್ರಿಶಿಯನ್ ಮಂಜುನಾಥ ಅವರ ನಿರ್ಲಕ್ಷ್ಯತನವೇ ಕಾರಣವಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಇದನ್ನೂ ಓದಿ: ಜ್ಯುವೆಲ್ಲರಿ ಅಂಗಡಿ ಸಿಬ್ಬಂದಿ ಹತ್ಯೆ ಪ್ರಕರಣ: ಬೈಕ್ ದೂರದಲ್ಲಿಟ್ಟು ಬಂದಿದ್ದ ದುಷ್ಕರ್ಮಿ?