ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತು ಗಾಂಜಾ ಹಾಗೂ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಿರಿಯಡಕದ ರಾಘವೇಂದ್ರ ದೇವಾಡಿಗ (41), ಅಲೆವೂರಿನ ಜಗದೀಶ್ ಪೂಜಾರಿ (32) ಬಂಧಿತರು. ಸೆನ್ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಅವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ 1 ಕೆ.ಜಿ.176 ಗ್ರಾಂ ತೂಕದ ಗಾಂಜಾ, 10 ಗ್ರಾಂ ತೂಕದ Methamphetamine Durg, ನೋಂದಣಿ ಸಂಖ್ಯೆ ಇಲ್ಲದ ಸ್ಕೂಟರ್, ಎರಡು ಪೊಬೈಲ್ ಫೋನ್, ವೇಯಿಂಗ್ ಮೆಶಿನ್, ಪೌಡರ್ ಪ್ಯಾಕ್ ಮಾಡಲು ಬಳಸುವ ಕವರ್‌ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ವಶಪಡಿಸಿಕೊಂಡ Metham phetamine Durg ಮೌಲ್ಯ 45,000 ರೂ. ಆಗಿದೆ. ಗಾಂಜಾದ ಮೌಲ್ಯ 28,000 ರೂ., ಸ್ಕೂಟರ್ ಮೌಲ್ಯ 80,000 ರೂ.ಆಗಿದೆ.
ವಶಪಡಿಸಿಕೊಂಡಿರುವ ಮೊಬೈಲ್ ಫೋನ್‌ಗಳ ಮೌಲ್ಯ 55 ಸಾವಿರ ರೂ., ವೇಯಿಂಗ್ ಮೆಶಿನ್ ಮೌಲ್ಯ 1 ಸಾವಿರ ರೂ. ಆಗಿದೆ. ವಶಪಡಿಸಿಕೊಂಡ ಎಲ್ಲ ವಸ್ತುಗಳ ಮೌಲ್ಯ 2,09,000 ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ಜಿಲ್ಲೆಯಾದ್ಯಂತ ಸಕ್ರಿಯ
ಬಂಧಿತ ರಾಘವೇಂದ್ರ ದೇವಾಡಿಗ ಜಿಲ್ಲೆಯಾದ್ಯಂತ ಡ್ರಗ್ಸ್ ಹಾಗೂ ಮಾದಕ ವ್ಯಸನ ಪೂರೈಕೆಯಲ್ಲಿ ಸಕ್ರಿಯನಾಗಿದ್ದಾನೆ. ಶ್ವಾನಪ್ರಿಯನಾಗಿರುವ ಈತ ಡಾಗ್ ರಾಘು ಎಂದೇ ಕುಖ್ಯಾತಿ ಪಡೆದಿದ್ದಾನೆ. ಈ ಹಿಂದೆಯೂ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡಿದ್ದರು. ಮತ್ತೂರ್ವ ಆರೋಪಿ ಜಗದೀಶ್ ಹಗಲು ಹೊತ್ತಿನಲ್ಲಿ ಮೀನು ಮಾರಾಟ ಮಾಡುವ ಪ್ರವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಈತನ ಆಪ್ತನಾಗಿದ್ದಾನೆ.
ಆರೋಪಿಗಳನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಮಾದಕ ವಸ್ತುಗಳ ಮೂಲದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.