ಉಡುಪಿ: ಮನೆಯ ಮಹಡಿಯ ಕೊಠಡಿಯಲ್ಲಿ ಬ್ಯಾಂಕಿನ ಉದ್ಯೋಗಿಯೊಬ್ಬರು ಬೆಂಕಿಯಿಂದ ಸುಟ್ಟು ಮೃತಪಟ್ಟ ಘಟನೆ ಸೋಮ ವಾರ ನಗರದ ವಾದಿರಾಜ ರಸ್ತೆ ಬಳಿ ನಡೆದಿದೆ.
ಕರ್ಣಾಟಕ ಬ್ಯಾಂಕಿನ ಲೀಗಲ್ ಆಫೀಸರ್, ವಾದಿರಾಜ ರಸ್ತೆಯ ನಿವಾಸಿ ರಾಜಗೋಪಾಲ್ ಸಾಮಗ (42) ಮೃತರು. ಅವರು ನಿವೃತ್ತ ಪೊಲೀಸ್ ಕೃಷ್ಣ ಸಾಮಗ ಅವರ ಪುತ್ರ. ರಾಜಗೋಪಾಲ್ ಅವರ ಪತ್ನಿ ಕೆನರಾ ಬ್ಯಾಂಕಿನ ಉದ್ಯೋಗಿಯಾಗಿದ್ದಾರೆ. ಅವರಿಗೆ ಒಂದೂವರೆ ವರ್ಷದ ಪುತ್ರನಿದ್ದಾನೆ.
ಕರ್ಣಾಟಕ ಬ್ಯಾಂಕಿನ ಹೈದರಾ ಬಾದ್ ಶಾಖೆಯಲ್ಲಿ ಕೆಲಸ ನಿರ್ವಹಿ ಸುತ್ತಿದ್ದ ಅವರು, ಕೆಲವು ಸಮಯ ಗಳ ಹಿಂದೆ ಮಂಗಳೂರಿಗೆ ವರ್ಗಾ ವಣೆಗೊಂಡಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆರೋಗ್ಯವಾಗಿಯೇ ಇದ್ದ ಅವರು ಸಂಜೆ ಚಹಾ ಕುಡಿದು, ಮಹಡಿ ಮೇಲಿನ ಕೋಣೆಗೆ ತೆರಳಿ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು.
Related Articles
ಕೊಠಡಿಯ ಕಿಟಕಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆ ಮನೆಯವರು ಸಾಮಗರ ಮನೆಯ ವರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಕೋಣೆಯ ಬಾಗಿಲು ಮುರಿದು ಪರಿಶೀಲಿಸಿದಾಗ ರಾಜಗೋಪಾಲ್ ಸಾಮಗ ಅವರು ಬೆಂಕಿಯಿಂದ ಸುಟ್ಟು ಮೃತಪಟ್ಟಿದ್ದರು.
ಲ್ಯಾಪ್‌ಟಾಪ್ ಸಿಡಿದಿರಬಹುದೇ?
ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಪ್ರಮೋದ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇದು ಆತ್ಮಹತ್ಯೆಯೋ? ಅಥವಾ ಲ್ಯಾಪ್‌ಟಾಪ್ ಸಿಡಿದು ಅವಘಡ ಸಂಭವಿಸಿತೇ? ಇನ್ಯಾವುದೋ ಕಾರಣವಿರಬಹುದೇ ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.