Advertisement

ಉಡುಪಿ: ಚಿತ್ತರಂಜನ್ ಸರ್ಕಲ್ “ಚಾರ್ಲಿ”ಸಾವು; ಅಂತಿಮ ಗೌರವದೊಂದಿಗೆ ಅಂತ್ಯಸಂಸ್ಕಾರ

02:56 PM Aug 14, 2022 | Team Udayavani |

ಉಡುಪಿ: ಚಿತ್ತರಂಜನ್ ಸರ್ಕಲ್ ಬಳಿ, ಕಳೆದ ಹದಿನಾರು ವರ್ಷಗಳಿಂದ ನೆಲೆಕಂಡಿದ್ದ ಹೆಣ್ಣು ಶ್ವಾನವೊಂದು ವಯೋಸಹಜ ಕಾಯಿಲೆಯಿಂದ ಬಳಲುತಿತ್ತು. ಇದನ್ನು ಕಂಡ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು, ಪಶುವೈದ್ಯ ಡಾ.ದಯಾನಂದ ಪೈ ಅವರ ಮೂಲಕ ಚಿಕಿತ್ಸೆ ಒಳಪಡಿಸಿದ್ದರು. ಹಲವು ದಿನಗಳಿಂದ ಆರೈಕೆಯಲ್ಲಿದ್ದ ನಾಯಿ ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಮೃತಪಟ್ಟಿದೆ.

Advertisement

ಈ ಜೂಲಿ ಎಂದು ಕರೆಯಲ್ಪಡುತ್ತಿದ್ದ ಈ ಬೀದಿ ನಾಯಿಗೆ, ಚಾರ್ಲಿ ಸಿನಿಮಾ ಬಂದ ಬಳಿಕ ಶ್ವಾನ ಪ್ರಿಯರು ಚಾರ್ಲಿ ಎಂದು ಕರೆಯುತ್ತಿದ್ದರು. ಪರಿಸರದ ಜನರ ಪ್ರೀತಿಗೆ ಒಳಪಟ್ಟ ಚಾರ್ಲಿ ಅಂಗಡಿಗಳ ಕಾವಲುಗಾರನಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತಿತ್ತು.

ಇದನ್ನೂ ಓದಿ: ಮಂಗಳೂರು: ಯುವಕ-ಯುವತಿ ಮೊಬೈಲ್ ನಲ್ಲಿ ಚಾಟ್; ವಿಮಾನ ಸಂಚಾರ ಮೊಟಕುಗೊಳಿಸಿ ತೀವ್ರ ತಪಾಸಣೆ!

ಚಾರ್ಲಿಯ ಸಾವಿಗೆ ಪರಿಸರದ ಜನರು ನೊಂದಿದ್ದು, ನಾಗರಿಕ ಸಮಿತಿಯ ಕಾರ್ಯಕರ್ತರು ಅಗಲಿದ ಶ್ವಾನದ ಕಳೇಬರಕ್ಕೆ ಹೂ ಹಾರ ಸಮರ್ಪಿಸಿ ಅಂತಿಮ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಸಲು ನಗರಸಭೆಗೆ ಒಪ್ಪಿಸಿದರು. ಈ ಸಂದರ್ಭದಲ್ಲಿ ನಿತ್ಯಾನಂದ ಒಳಕಾಡು, ಕೆ.ಬಾಲಗಂಗಾಧರ ರಾವ್, ಪಾಪುಲರ್ ಬಣ್ಣದ ಮಳಿಗೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next