Advertisement

ಉಡುಪಿ ಚಿಕ್ಕಮಗಳೂರು : 14 ಅಭ್ಯರ್ಥಿಗಳಿಂದ 26 ನಾಮಪತ್ರ

02:01 AM Mar 27, 2019 | sudhir |

ಉಡುಪಿ: ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ದಲ್ಲಿ ಒಟ್ಟು 14 ಅಭ್ಯರ್ಥಿಗಳು 26 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

Advertisement

ಇದುವರೆಗೆ ನಾಮಪತ್ರ ಸಲ್ಲಿಸಿದವರು: ಶೋಭಾ ಕರಂದ್ಲಾಜೆ (ಬಿಜೆಪಿ), ಪ್ರಮೋದ್‌ ಮಧ್ವರಾಜ್‌ (ಜೆಡಿಎಸ್‌), ಎಂ.ಕೆ. ದಯಾನಂದ (ಪ್ರೌಟಿಸ್ಟ್‌ ಸರ್ವ ಸಮಾಜ), ಸುರೇಶ ಕುಂದರ್‌ (ಉತ್ತಮ ಪ್ರಜಾಕೀಯ ಪಾರ್ಟಿ), ವಿಜಯಕುಮಾರ್‌ (ಸಿಪಿಐಎಂಎಲ್‌ ರೆಡ್‌ಸ್ಟಾರ್‌), ಶೇಖರ ಹಾವಂಜೆ (ಆರ್‌ಪಿಐ), ಪಿ. ಪರಮೇಶ್ವರ್‌ (ಬಿಎಸ್‌ಪಿ), ಗೌತಮ್‌ ಪ್ರಭು (ಶಿವಸೇನೆ), ಅಮೃತ್‌ ಶೆಣೈ ಪಿ., ಸುಧೀರ್‌ ಕಾಂಚನ್‌, ಕೆ.ಸಿ. ಪ್ರಕಾಶ್‌, ಅಬ್ದುಲ್‌ ರೆಹಮಾನ್‌, ಗಣಪತಿ ಶೆಟ್ಟಿಗಾರ್‌, ಎಂ.ಕೆ. ಗಣೇಶ್‌ (ಪಕ್ಷೇತರರು).

ನಾಮಪತ್ರ ಸಲ್ಲಿಸಿದವರಲ್ಲಿ ಮೂವರು ಪರಿಶಿಷ್ಟ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಮಂಗಳವಾರ 7 ಅಭ್ಯರ್ಥಿಗಳು 11 ನಾಮಪತ್ರಗಳು ಸಲ್ಲಿಸಿದರು. ಮಾ.27ರಂದು ನಾಮಪತ್ರಗಳ ಪರಿಶೀಲನೆ, ಮಾ.29ರಂದು ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next