Advertisement

Udupi ಉದ್ಯಮಿ ಗಿಲ್ಬರ್ಟ್‌ ಸಾಲಿನ್ಸ್‌ ಇನ್ನಿಲ್ಲ

11:13 PM Aug 08, 2024 | Team Udayavani |

ಉಡುಪಿ: ಸಂತೆಕಟ್ಟೆಯ ಗಿಲ್ಬರ್ಟ್‌ ಸಾಲಿನ್ಸ್‌ (92) ಅವರು ಆ. 7ರಂದು ನಿಧನ ಹೊಂದಿದರು.

Advertisement

ಅವರು ಕಲ್ಯಾಣಪುರ ಸಂತೆಕಟ್ಟೆ ಸುಬ್ರಹ್ಮಣ್ಯ ನಗರದಲ್ಲಿ ಬೆಲ್ಲೋ ಸಿಲ್‌ ವಾಲ್ವ್ಸ್ ಪ್ರೈ. ಲಿಮಿಟೆಡ್‌ ಹಾಗೂ ಜೆಆರ್‌ಜಿ ಫೌಂಡ್ರೀಸ್‌ ಕಂಪೆನಿಯ ಸಂಸ್ಥಾಪಕರಾಗಿದ್ದರು.

33 ವರ್ಷಗಳಿಂದ ಸಂಸ್ಥೆಯನ್ನು ಅವರು ಮುನ್ನಡೆಸಿಕೊಂಡಿದ್ದರು.

ಅತ್ಯುನ್ನತ ಗುಣಮಟ್ಟದ ವಾಲ್ವ್ ಗಳನ್ನು ನೀಡುವ ಮೂಲಕ ಅವರ ಸ್ಟೇಟ್-ಆಫ್-ದಿ-ಆರ್ಟ್‌ ಮ್ಯಾನುಫ್ಯಾಕ್ಚರಿಂಗ್‌ ಕಂಪೆನಿಯು ಭಾರತದ ಪ್ರಮುಖ ವಾಲ್ವ್ ಮ್ಯಾನುಫ್ಯಾಕ್ಚರಿಂಗ್‌ ಕಂಪೆನಿಗಳಲ್ಲೊಂದಾಗಿದೆ.ಯುರೋ ಕ್ಲೋರ್‌ ಮತ್ತು ರಸ್‌ ಕ್ಲೋರ್‌ ಪ್ರಮಾಣೀಕರಣವನ್ನು ಪಡೆದ ಭಾರತದ ಮೊದಲ ಕಂಪನಿ ಅವರದ್ದಾಗಿತ್ತು.

ಇಂಡಿಯಾ (ಎಂಜಿನಿಯರಿಂಗ್‌ ರಫ್ತು ಉತ್ತೇಜನ ಮಂಡಳಿ) ರಫ್ತಿನಲ್ಲಿ ಶ್ರೇಷ್ಠತೆಗಾಗಿ ಅವರ ಸಂಸ್ಥೆ ಹಲವಾರು ಪ್ರಶಸ್ತಿಯನ್ನು ಪಡೆದಿತ್ತು.

Advertisement

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next