Advertisement

Udupi; ಪಿಎಸ್‌ಐ ಮೇಲೆ ಹಲ್ಲೆಗೆ ಯತ್ನ: ಶಾಸಕರಿಂದ ಖಂಡನೆ

12:05 AM Feb 13, 2024 | Team Udayavani |

ಉಡುಪಿ: ಮಲ್ಪೆ ಠಾಣೆಯ ಮಹಿಳಾ ಪೊಲೀಸ್‌ ಪಿಎಸ್‌ಐ ರಾತ್ರಿ ಕರ್ತವ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಗಾಂಜಾ ಆರೋಪಿ ಜೀವ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿ ಪೊಲೀಸ್‌ ಜೀಪಿಗೆ ಹನಿ ಮಾಡಿದ ಘಟನೆಯನ್ನು ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಖಂಡಿಸಿದ್ದಾರೆ.

Advertisement

ಕರಾವಳಿಯಾದ್ಯಂತ ಮಾದಕ ದ್ರವ್ಯ ಜಾಲ ವ್ಯಾಪಕವಾಗಿ ಹಬ್ಬಿದ್ದು, ಯುವ ಜನಾಂಗ, ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿಕೊಂಡು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದು ಪೊಲೀಸ್‌ ಇಲಾಖೆ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಕಠಿನ ಕ್ರಮ ಕೈಗೊಳ್ಳಬೇಕು.

ದೂರುಗಳು ಇದ್ದರೂ ಪೊಲೀಸರ ನಿರ್ಲಕ್ಷ್ಯದಿಂದಾಗಿ ಗಾಂಜಾ ಆರೋಪಿಗಳು ಮಹಿಳಾ ಪೊಲೀಸ್‌ ಅಧಿಕಾರಿಯ ಮೇಲೆ ಹಲ್ಲೆಗೆ ಯತ್ನಿಸುವಂತಾಗಿದೆ. ಈ ಘಟನೆಯಿಂದಾಗಿ ಜಿಲ್ಲೆಯ ಜನತೆ ಆತಂಕಕ್ಕೀಡಾಗಿದ್ದು, ಪೊಲೀಸ್‌ ಇಲಾಖೆಯ ಯಾವುದೇ ಹೆದರಿಕೆ ಇಲ್ಲ ಎಂಬ ಭಾವನೆ ಜನಸಾಮಾನ್ಯರಲ್ಲಿ ಮೂಡಿದೆ.

ಮಣಿಪಾಲ ಹಾಗೂ ಉಡುಪಿ ನಗರದ ವಿವಿಧೆಡೆ ಮಾದಕ ವಸ್ತುಗಳ ಜಾಲ ಸಕ್ರಿಯವಾಗಿರುವ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ತತ್‌ಕ್ಷಣ ಈ ಜಾಲವನ್ನು ಭೇದಿಸಿ ಈ ಮಾಫಿಯಾದ ರೂವಾರಿಗಳ ಹೆಡೆಮುರಿಕಟ್ಟಿ ಕೂಡಲೇ ಕಡಿವಾಣ ಹಾಕಲು ಮುಂದಾಗಬೇಕು.

ಮಾದಕ ಜಾಲದ ವಿರುದ್ಧ ಕಠಿನ ಕ್ರಮದ ಮೂಲಕ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್‌ ಇಲಾಖೆಯಲ್ಲಿ ಪ್ರತ್ಯೇಕ ಮಾದಕ ದ್ರವ್ಯ ನಿಗ್ರಹ ದಳವನ್ನು ಆರಂಭಿಸುವಂತೆ ಗೃಹ ಸಚಿವರಿಗೆ ಮನವಿ ಮಾಡುವುದಾಗಿ ಯಶ್‌ ಪಾಲ್‌ ಸುವರ್ಣ ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next